ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಆವೃತ್ತಿಯಾದ ಸ್ಯಾಂಟ್ರೋ ಕಾರನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಉನ್ನತೀಕರಿಸಿದ ಎಂಜಿನ್ ಹೊರತುಪಡಿಸಿ ಈ ಹಿಂದಿನಂತೆಯೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬಂದಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಪ್ರಸ್ತುತ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿವೆ. ಹ್ಯುಂಡೈ ಕೂಡಾ ಈಗಾಗಲೇ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ಸ್ಯಾಂಟ್ರೋ ಕಾರನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ಸದ್ಯ ಕರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಲಾಕ್‌ಡೌನ್ ಮುಂದುವರಿಸಲಾಗಿದ್ದು, ಈ ಹಿನ್ನಲೆಯಲ್ಲಿ ಹೊಸ ಕಾರು ಬಿಡುಗಡೆಯನ್ನು ಹ್ಯುಂಡೈ ಕಂಪನಿಯು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಬೆಲೆ ಮಾಹಿತಿಯನ್ನು ಬಹಿರಂಗ ಪಡಿಸಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಲಾಕ್‌ಡೌನ್ ತೆರವುಗೊಳಿಸಿದ ನಂತರವಷ್ಟೇ ಹೊಸ ಕಾರಿನ ವಿತರಣೆಯು ಅಧಿಕೃತವಾಗಿ ಆರಂಭವಾಗಲಿದ್ದು, ಕಾರು ವಿತರಣೆಯಲ್ಲೂ ಸಾಕಷ್ಟು ಸುರಕ್ಷತೆ ಕಾಯ್ದಕೊಳ್ಳಲು ಹ್ಯುಂಡೈ ಕಂಪನಿಯು ಹಲವಾರು ಹೊಸ ಕ್ರಮಗಳನ್ನು ಕೈಗೊಂಡಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಇನ್ನು ಬಿಎಸ್-6 ಸ್ಯಾಂಟ್ರೋ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.57 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.6.02 ಲಕ್ಷ ಬೆಲೆ ಹೊಂದಿದೆ.

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಸ್ಯಾಂಟ್ರೋ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಎರಾ ಎಕ್ಸಿಕ್ಯೂಟಿವ್(ಮ್ಯಾನುವಲ್)- ರೂ.4.57 ಲಕ್ಷ

ಮ್ಯಾಗ್ನಾ (ಮ್ಯಾನುವಲ್)- ರೂ. 5.04 ಲಕ್ಷ

ಸ್ಪೋರ್ಟ್ಜ್(ಮ್ಯಾನುವಲ್) - ರೂ. 5.40 ಲಕ್ಷ

ಮ್ಯಾಗ್ನಾ(ಆಟೋಮ್ಯಾಟಿಕ್) - ರೂ.5.52 ಲಕ್ಷ

ಆಸ್ಟಾ (ಮ್ಯಾನುವಲ್)- ರೂ.5.78 ಲಕ್ಷ

ಮ್ಯಾಗ್ನಾ (ಸಿಎನ್‌ಜಿ)- ರೂ. 5.84 ಲಕ್ಷ

ಸ್ಪೋರ್ಟ್ಜ್ (ಆಟೋಮ್ಯಾಟಿಕ್) - ರೂ. 5.98 ಲಕ್ಷ

ಸ್ಪೋರ್ಟ್ಜ್(ಸಿಎನ್‌ಜಿ)- ರೂ.6.02 ಲಕ್ಷ

MOST READ: ಕಾಸ್ಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರಿನ ಬೆಲೆಯು ಈ ಹಿಂದಿನ ಬಿಎಸ್-4 ಆವೃತ್ತಿಗಿಂತಲೂ ರೂ.23 ಸಾವಿರದಿಂದ ರೂ.27 ಸಾವಿರದಷ್ಟು ದುಬಾರಿಯಾಗಿದ್ದು, ಹೊಸ ಎಂಜಿನ್‌ನಿಂದಾಗಿ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿರುವುದಲ್ಲದೇ ಮೈಲೇಜ್ ಪ್ರಮಾಣದಲ್ಲೂ ಸಾಕಷ್ಟು ಸುಧಾರಣೆಯಾಗಿದೆ.

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರವೇ ಹೊಂದಿರುವ ಸ್ಯಾಂಟ್ರೋ ಕಾರಿನಲ್ಲಿ 1.1-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಮೊದಲಿನ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮೈಲೇಜ್ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಹಾಗೆಯೇ ಸಿಎನ್‌ಜಿ ಮಾದರಿಯು 58-ಬಿಎಚ್‌ಪಿ ಮತ್ತು 84-ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಮೈಲೇಜ್ ಹಿಂದಿರುಗಿಸಲಿದ್ದು, ಎರಡು ಮಾದರಿಯಲ್ಲೂ ಗ್ರಾಹಕರ ಬೇಡಿಕೆ ಅನುಸಾರ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಲಾಕ್‌ಡೌನ್ ನಡುವೆಯೂ ಬಿಎಸ್-6 ಸ್ಯಾಂಟ್ರೋ ಬಿಡುಗಡೆ ಮಾಡಿದ ಹ್ಯುಂಡೈ

ಇನ್ನು ಸ್ಯಾಂಟ್ರೋ ನ್ಯೂ ಜನರೇಷನ್ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಮತ್ತೊಮ್ಮೆ ಮುಂಚೂಣಿ ಸಾಧಿಸಿರುವ ಹ್ಯುಂಡೈ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

More from DriveSpark

Article Published On: Monday, April 20, 2020, 11:26 [IST]
English summary
Hyundai has launched the BS6 version of Santro in India price starting at Rs.4.57 lakh (ex-showroom, Delhi). It will available petrol and petrol-CNG fuel options. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+