ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಪೆಟ್ರೋಲ್ ಕಾರುಗಳ ಮಾದರಿಗಳ ಮಾರಾಟಕ್ಕೆ ಈಗಾಗಲೇ ಚಾಲನೆ ನೀಡಿರುವ ಹ್ಯುಂಡೈ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಾದ ಸ್ಯಾಂಟ್ರೋ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಹೊಸ ಕಾರು ಖರೀದಿಗೆ ಲಭ್ಯವಾಗಲಿದೆಯೆಂತೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಪ್ರಸ್ತುತ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿವೆ. ಹ್ಯುಂಡೈ ಕೂಡಾ ಈಗಾಗಲೇ ಗ್ರ್ಯಾಂಡ್ ಐ10 ನಿಯೊಸ್ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಎಸ್-6 ನಿಯಮದಂತೆ ಬಿಡುಗಡೆ ಮಾಡಿದ್ದು, ಮುಂಬರುವ ಮಾರ್ಚ ಅಂತ್ಯದೊಳಗೆ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಲಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಕಾರಗಳ ಬೆಲೆಯಲ್ಲಿ ತುಸು ದುಬಾರಿಯಾಗಿಲಿದ್ದು, ಪೆಟ್ರೋಲ್ ಕಾರುಗಳ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.10 ಸಾವಿರದಿಂದ ರೂ.30 ಸಾವಿರ ತನಕ ಮತ್ತು ಡೀಸೆಲ್ ಕಾರುಗಳ ಬೆಲೆಯು ರೂ.80 ಸಾವಿರದಿಂದ ರೂ.1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆಯಲಿವೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಇದೀಗ ಬಿಡುಗಡೆಗೆ ಸಿದ್ದವಾಗಿರುವ ಸ್ಯಾಂಟ್ರೋ ಕೂಡಾ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಕೆಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.22 ಸಾವಿರದಿಂದ ರೂ.27 ಸಾವಿರ ಹೆಚ್ಚುವರಿ ಬೆಲೆ ಪಡೆಯಲಿದೆ ಎಂದು ಹೇಳಲಾಗಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಇನ್ನು 2018ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ಸ್ಯಾಂಟ್ರೋ ಕಾರು ಇದುವರೆಗೆ ದಾಖಲೆ ಪ್ರಮಾಣದ ಮಾರಾಟ ಕಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.5.79 ಲಕ್ಷ ಬೆಲೆ ಪಡೆದುಕೊಂಡಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಸ್ಯಾಂಟ್ರೋ ಕಾರು ಬಿಎಸ್-6 ಎಂಜಿನ್ ನಂತರ ಎಲ್ಲಾ ಆವೃತ್ತಿಗಳಲ್ಲೂ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಇದಲ್ಲದೇ ಹ್ಯುಂಡೈ ಸಂಸ್ಥೆಯು ಬಿಎಸ್-6 ಮಾದರಿಯನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ತನ್ನ ನೆಚ್ಚಿನ ಗ್ರಾಹಕರಿಗಾಗಿ ಆ್ಯನಿವರ್ಸರಿ ಸ್ಯಾಂಟ್ರೋ ಎಡಿಷನ್ ಬಿಡುಗಡೆ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ ಕಾರಿನ ಸ್ಪೋರ್ಟ್ಜ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್‌ಬಾಕ್ಸ್ ಮಾದರಿಯನ್ನು ಖರೀದಿ ಮಾಡಬಹುದು.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಆ್ಯನಿವರ್ಸರಿ ಎಡಿಷನ್ ಹೊರಭಾಗದಲ್ಲಿ ಕಪ್ಪು ಮಿಶ್ರಿತ ಹೊಂದಿರುವ ಒಆರ್‌ವಿಎಂಎಸ್, ಡೋರ್ ಹ್ಯಾಂಡಲ್, ಗ್ಲಾಸಿ ಬ್ಲ್ಯಾಕ್ ಬಣ್ಣದ ರೂಫ್ ರೈಲ್ಸ್, ಗನ್‌ಮೆಟಲ್ ಗ್ರೇ ವೀಲ್ಹ್ ಕವರ್ಸ್, ರಿಯರ್ ಕ್ರೋಮ್ ಗಾರ್ನಿಶ್ ಮತ್ತು ಕಾರಿನ ಹಿಂಭಾಗದ ಬೂಟ್ ಲಿಡ್ ಮೇಲ್ಭಾಗದಲ್ಲಿ ಆ್ಯನಿವರ್ಸರಿ ಎಡಿಷನ್ ಚಿಹ್ನೆಯನ್ನು ಜೋಡಿಸಲಾಗಿದೆ. ಜೊತೆಗೆ ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಕಾರಿನ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಅಂದ್ರೆ, ಸಂಪೂರ್ಣ ಕಪ್ಪು ಬಣ್ಣದ ಇಂಟಿರಿಯರ್ ಜೊತೆಗೆ ತಿಳಿನಿಲಿ ಬಣ್ಣದ ಇನ್ಸ್‌ರ್ಟ್, ಹೊಸ ಫ್ಯಾಬ್ರಿಕ್ ಆಸನಗಳನ್ನು ಪಡೆದುಕೊಂಡಿದ್ದು, ಇನ್ನುಳಿದ ತಾಂತ್ರಿಕ ಅಂಶಗಳನ್ನು ಸಾಮಾನ್ಯ ಕಾರಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಈ ಬಾರಿ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಹೊಸ ಬಣ್ಣಗಳ ಆಯ್ಕೆ ಸಹ ನೀಡಲಾಗಿದ್ದು, ಪೊಲಾರ್ ವೈಟ್ ಮತ್ತು ಅಕ್ವಾ ಟೀಲ್ ಬಣ್ಣಗಳಲ್ಲಿ ಸ್ಯಾಂಟ್ರೋ ಖರೀದಿಗೆ ಲಭ್ಯವಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ ಕಾರುಗಳಲ್ಲಿ ನೀಡಲಾಗಿರುವ ತಾಂತ್ರಿಕ ಅಂಶಗಳನ್ನೇ ಮುಂದುವರಿಸಲಾಗಿದ್ದು, ಆ್ಯನಿವರ್ಸರಿ ಎಡಿಷನ್ ಹೊರತುಪಡಿಸಿ ಸಾಮಾನ್ಯ ಬೆಲೆಗಳಲ್ಲಿ ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಅಸ್ಟ್ರಾ ವೆರಿಯೆಂಟ್‌ಗಳನ್ನು ಖರೀದಿ ಮಾಡಬಹುದು.

ಬಿಡುಗಡೆಗೂ ಮುನ್ನ ಬಿಎಸ್-6 ಸ್ಯಾಂಟ್ರೊ ಬೆಲೆ ಮಾಹಿತಿ ಬಹಿರಂಗ

ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ 1.1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ, ಸಾಮಾನ್ಯ ಸ್ಯಾಂಟ್ರೋ ಆವೃತ್ತಿಗಳಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಆವೃತ್ತಿಯನ್ನು ಖರೀದಿ ಮಾಡಬಹುದು.

More from DriveSpark

Article Published On: Friday, January 10, 2020, 8:45 [IST]
English summary
Hyundai Santro BS6 Prices Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+