ಸ್ಯಾಂಟ್ರೋ ಬಿಎಸ್-6 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಹ್ಯುಂಡೈ
ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಸ್ಯಾಂಟ್ರೋ ಮಾದರಿಯನ್ನು ಈಗಾಗಲೇ ಬಿಎಸ್-6 ಪೆಟ್ರೋಲ್ ಮಾದರಿಯೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ಸಿಎನ್‌ಜಿ ಮಾದರಿಯನ್ನು ಸಹ ಬಿಡುಗಡೆ ಮಾಡಿದೆ.

ಸಿಎನ್‌ಜಿ ಆವೃತ್ತಿಯು ಸ್ಯಾಂಟ್ರೊ ಕಾರಿನ ಮ್ಯಾಗ್ಮಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಹೊಸ ಸಿಎನ್‌ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.87 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 6 ಲಕ್ಷ ಬೆಲೆ ಹೊಂದಿದೆ. ತಾಂತ್ರಿಕವಾಗಿ ಎರಡು ಮಾದರಿಯು ಒಂದೇ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಪ್ರೀಮಿಯಂ ಫೀಚರ್ಸ್‌ಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

ಸ್ಯಾಂಟ್ರೋ ಮ್ಯಾಗ್ಮಾ ಸಿಎನ್‌ಜಿ ಮಾದರಿಯಲ್ಲಿ 2 ಡೀನ್ ಆಡಿಯೋ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಮ್ಯಾನುವಲ್ ಎಸಿ, ಬ್ಲ್ಯೂಟೂಥ್ ಸಂಪರ್ಕಿತ ಸ್ಮಾರ್ಟ್‌ಫೋನ್ ಕನೆಕ್ವಿಟಿ ಸೇರಿದಂತೆ ಹಲವಾರು ಆಕರ್ಷಕ ಫೀಚರ್ಸ್‌ಗಳಿವೆ.

ಸ್ಪೋರ್ಟ್ಜ್ ಸಿಎನ್‌ಜಿ ಮಾದರಿಯಲ್ಲಿ ಮ್ಯಾಗ್ಮಾ ಕಾರಿನಲ್ಲಿರುವ ಫೀಚರ್ಸ್‌ಗಳು ಸೇರಿ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್-ಬಿಲ್ಟ್ ನ್ಯಾವಿಗೇಷನ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ವಿದ್ಯುತ್ ಸಂಪರ್ಕಿತ ರಿಯಲ್ ವ್ಯೂ ಮಿರರ್, ಇಂಟ್ರಾಗ್ರೆಟೆಡ್ ಟರ್ನ್ ಇಂಡಿಕೇಟರ್, ಫ್ರಂಟ್ ಫಾಗ್ ಲ್ಯಾಂಪ್, ಕೀ ಲೆಸ್ ಎಂಟ್ರಿ ಸೇರಿ ಹಲವಾರು ಫೀಚರ್ಸ್‌ಗಳಿವೆ.

ಹೊಸ ಎಮಿಷನ್ ನಂತರ ವಿವಿಧ ಕಾರು ಮಾದರಿಗಳ ಎಂಜಿನ್ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಹ್ಯುಂಡೈ ಕಂಪನಿಯು ಮಾತ್ರ ಸ್ಯಾಂಟ್ರೋ ಕಾರಿನಲ್ಲಿದ್ದ 1.1-ಲೀಟರ್ ಫೋರ್ ಸಿಲಿಂಡರ್ ಮಾದರಿಯನ್ನು ಹೊಸ ನಿಯಮದೊಂದಿಗೆ ಉನ್ನತೀಕರಿಸಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಇದೀಗ ಪೆಟ್ರೋಲ್ ಅಥವಾ ಸಿಎನ್‌ಜಿ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಸ್ಯಾಂಟ್ರೋ ಪೆಟ್ರೋಲ್ ಎಂಜಿನ್ ಮಾದರಿಯು 1.1-ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಇಲ್ಲವೇ ಫೈವ್ ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 69-ಬಿಎಚ್‌ಪಿ, 99-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಿಎನ್‌ಜಿ ಸ್ಯಾಂಟ್ರೋ ಮಾದರಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 60-ಬಿಎಚ್‌ಪಿ, 85-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಎಂಜಿನ್ ಆಯ್ಕೆಗಳನ್ನು ಹೊರತುಪಡಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಯು ಎಲ್ಲಾ ವಿಭಾಗದಲ್ಲೂ ಒಂದೇ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಸ್ಯಾಂಟ್ರೋ ಕಾರಿನಲ್ಲಿ ಮೇಲೆ ತಿಳಿಸಲಾದ ಫೀಚರ್ಸ್‌ಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆಗೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡ್ರೈವರ್ ವಿಭಾಗದಲ್ಲಿನ ಏರ್‌ಬ್ಯಾಗ್, ಸ್ಪೀಡ್ ಅಲರ್ಟ್ ಸಿಸ್ಟಂ, ಸೀಲ್ಟ್ ಬೆಟ್ ವಾರ್ನಿಂಗ್ ಸಿಸ್ಟಂ ಸೌಲಭ್ಯಗಳಿವೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇನ್ನು ಸ್ಯಾಂಟ್ರೋ ಕಾರು ಮಾದರಿಯು 2018ರಲ್ಲಿ ಸ್ಥಗಿತಗೊಂಡ 7 ವರ್ಷಗಳ ನಂತರ ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿತ್ತು. ಮೊದಲು ಪೆಟ್ರೋಲ್ ಮಾದರಿಯನ್ನು ಮಾತ್ರ ಪಡೆದುಕೊಂಡಿದ್ದ ನ್ಯೂ ಜನರೇಷನ್ ಸ್ಯಾಂಟ್ರೋ ಕಾರು ಮಾದರಿಯು ಇದೀಗ ಸಿಎನ್‌ಜಿ ಮಾದರಿಯನ್ನು ಸಹ ಪಡೆದುಕೊಂಡಿದ್ದು, ಮಾರುತಿ ನಿರ್ಮಾಣದ ಸಿಎನ್‌ಜಿ ಕಾರು ಮಾದರಿಯಾದ ವ್ಯಾಗನ್ಆರ್ ಆವೃತ್ತಿಗೆ ಉತ್ತಮ ಪೈಪೋಟಿ ನೀಡುತ್ತಿದೆ.


Click it and Unblock the Notifications








