ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ದಕ್ಷಿಣ ಕೊರಿಯಾ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತಮಿಳುನಾಡಿನ ಚೆನ್ನೈ ಬಳಿಯಿರುವ ಶ್ರೀಪೆರುಂಬುದೂರಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಹ್ಯುಂಡೈ ಕಂಪನಿಯು ಈ ಉತ್ಪಾದನಾ ಘಟಕದಲ್ಲಿ ಕಾಲ ಕಾಲಕ್ಕೆ ಹೂಡಿಕೆ ಮಾಡುತ್ತಿರುತ್ತದೆ.

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈಗ ಹ್ಯುಂಡೈ ಕಂಪನಿಯು ರೂ.150 ಕೋಟಿ ವೆಚ್ಚದಲ್ಲಿ ಹ್ಯುಂಡೈ ಅಕಾಡೆಮಿ ಫಾರ್ ಟೆಕ್ನಿಕಲ್ ಸ್ಕಿಲ್ಸ್ ಎಂಬ ತರಬೇತಿ ಕೇಂದ್ರವನ್ನು ತಮಿಳುನಾಡಿನಲ್ಲಿ ಸ್ಥಾಪಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇಟಿ ಆಟೋ ವರದಿ ಮಾಡಿದೆ.

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈ ತರಬೇತಿ ಕೇಂದ್ರವನ್ನು ಶ್ರೀಪೆರುಂಬುದೂರಿನ ಇರುಂಕಟ್ಟುಕೋಟೈ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಹ್ಯುಂಡೈ ಕಂಪನಿಯು ನೀಡಿರುವ ಹೇಳಿಕೆಯಿಂದ ಇದು ದೃಢಪಟ್ಟಿದೆ. ಭಾರತದ ಯುವಕರ ಸಾಮರ್ಥ್ಯವನ್ನು ಹೆಚ್ಚಿಸಲು ಈ ತಂತ್ರಜ್ಞಾನ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಹ್ಯುಂಡೈ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈ ಕುರಿತು ಅಕ್ಟೋಬರ್ 23ರಂದು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಹ್ಯುಂಡೈ ಕಂಪನಿಯು, ಈ ತರಬೇತಿ ಕೇಂದ್ರವು ಅದ್ಭುತ ತಂತ್ರಜ್ಞಾನವನ್ನು ಹೊಂದಿರಲಿದೆ. ಈ ತರಬೇತಿ ಕೇಂದ್ರವು ಸುಮಾರು 6.45 ಎಕರೆ ಪ್ರದೇಶದಲ್ಲಿ ವ್ಯಾಪಿಸಿರಲಿದೆ ಎಂದು ಹೇಳಿದೆ.

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈ ಮೂಲಕ ಹ್ಯುಂಡೈ ಕಂಪನಿಯು ವಿಶ್ವ ದರ್ಜೆಯ ವೃತ್ತಿಪರರನ್ನು ರೂಪಿಸಲು ಯೋಜಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸಾಮಿ ಅವರು ಹ್ಯುಂಡೈನ ಈ ವಿಶೇಷ ತರಬೇತಿ ಕೇಂದ್ರವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈ ಸಂದರ್ಭದಲ್ಲಿ ತಮಿಳುನಾಡಿನ ಕೈಗಾರಿಕಾ ಸಚಿವ ಎಂ.ಸಿ.ಸಂಪತ್, ಪ್ರಧಾನ ಕಾರ್ಯದರ್ಶಿ ಕೆ.ಷಣ್ಮುಗಂ, ತಮಿಳುನಾಡಿನ ಕೆಲ ಹಿರಿಯ ಅಧಿಕಾರಿಗಳು ಹಾಗೂ ಹ್ಯುಂಡೈ ಕಂಪನಿಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈ ತರಬೇತಿ ಕೇಂದ್ರವು ಯಾವಾಗ ಬಳಕೆಗೆ ಶುರುವಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಬಿಡುಗಡೆಯಾಗಿಲ್ಲ. ಆದರೆ ಹ್ಯುಂಡೈ ಕಂಪನಿಯು ಈ ತರಬೇತಿ ಕೇಂದ್ರವನ್ನು ನಿರ್ಮಿಸುವ ಕೆಲಸವನ್ನು ಆರಂಭಿಸಿದೆ ಎಂದು ವರದಿಗಳಾಗಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್‌ನ ಎಂಡಿ ಹಾಗೂ ಸಿಇಒ ಎಸ್‌ಎಸ್ ಕಿಮ್ ರವರು ಮಾತನಾಡಿ, ಇದೊಂದು ಸುಸಂದರ್ಭವಾಗಿದೆ. ಈ ತರಬೇತಿ ಕೇಂದ್ರವು ಸುಧಾರಿತವಾದ ಹಾಗೂ ಅತ್ಯಾಧುನಿಕವಾದ ತರಬೇತಿ ಅಕಾಡೆಮಿಯಾಗಿದ್ದು, ಭವಿಷ್ಯದಲ್ಲಿ ಯುವಕರನ್ನು ಇನ್ನಷ್ಟು ವೃತ್ತಿಪರರನ್ನಾಗಿಸುತ್ತದೆ ಎಂದು ಹೇಳಿದರು.

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಈ ತರಬೇತಿ ಕೇಂದ್ರವು ಭಾರತಕ್ಕೆ ಹಾಗೂ ತಮಿಳುನಾಡಿಗೆ ಜಾಗತಿಕ ರಂಗದಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲು ನೆರವಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಹ್ಯುಂಡೈ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಭಾರತದ ಯುವಕರು ಲಾಭ ಪಡೆಯಲಿದ್ದಾರೆ ಎಂಬುದು ಹ್ಯುಂಡೈ ಕಂಪನಿಯ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಯುವಕರ ಸಾಮರ್ಥ್ಯವನ್ನು ಪ್ರದರ್ಶಿಸಲು ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತೀಯ ಯುವಕರಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಮುಂದಾದ ಹ್ಯುಂಡೈ

ಹ್ಯುಂಡೈ ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಸಾಲು ಸಾಲು ಹಬ್ಬಗಳು ಇರುವ ಸಮಯದಲ್ಲಿ ಕಂಪನಿಯು ವಾಹನ ಮಾರಾಟವನ್ನು ಹೆಚ್ಚಿಸಲು ಮುಂದಾಗಿದೆ. ಇದರ ಮಧ್ಯೆ ರೂ.150 ಕೋಟಿ ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

Most Read Articles

Kannada
English summary
Hyundai to give world class training to Indian youths. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X