ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ತಲೆಮಾರಿನ ಗ್ರ್ಯಾಂಡ್ ಐ 10 ನಿಯೋಸ್ ಕಾರ್ ಅನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರು ಹ್ಯುಂಡೈ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹ್ಯುಂಡೈ ಕಂಪನಿಯು ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್‌ನ ಈ ವಿಶೇಷ ಆವೃತ್ತಿಗೆ ಕಾರ್ಪೊರೇಟ್ ಎಂದು ಹೆಸರಿಡಲಾಗಿದೆ. ಕಂಪನಿಯು ಈ ಕಾರನ್ನು ಎರಾ ಹಾಗೂ ಸ್ಪೋರ್ಟ್ಜ್ ಮಾದರಿಗಳಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಕಾರ್ಪೊರೇಟ್ ಮಾದರಿಯು ಈ ಕಾರಿನ ಮ್ಯಾಗ್ನಾ ಮಾದರಿಯ ಮೇಲೆ ಆಧಾರಿತವಾಗಿದೆ.

ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಮ್ಯಾಗ್ನಾ ನಿಯೋಸ್‌ನಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಕಾರ್ಪೊರೇಟ್ ಮಾದರಿಯು ಕಾರಿನ ಬಾಡಿ ಕಲರಿನ ಒಆರ್ ವಿಎಂಗಳನ್ನು ಹೊಂದಿದೆ. ಈ ಒಆರ್ ವಿಎಂಗಳು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಗಳನ್ನು ಹೊಂದಿವೆ. 14 ಇಂಚಿನ ಸ್ಟೀಲ್ ವ್ಹೀಲ್ ಗಳ ಬದಲಿಗೆ 15 ಇಂಚಿನ ಗನ್‌ಮೆಟಲ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಈ ಕಾರಿನ ಹಲವು ಭಾಗಗಳಲ್ಲಿ ಕಾರ್ಪೊರೇಟ್ ಬ್ಯಾಡ್ಜಿಂಗ್ ಅಳವಡಿಸಲಾಗಿದೆ. ಈ ಕಾರಿನ ಇನ್ನಿತರ ಎಕ್ಸ್ ಟಿರಿಯರ್ ಅಂಶಗಳನ್ನು ಐ 10 ನಿಯೋಸ್ ಮ್ಯಾಗ್ನಾದಿಂದ ಪಡೆಯಲಾಗಿದೆ. ಹ್ಯುಂಡೈ ಕಂಪನಿಯು ಕಾರ್ಪೊರೇಟ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಹಾಗೂ ಅಪ್ ಡೇಟ್ ಗಳನ್ನು ಮಾಡಿದೆ.

ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಈ ಕಾರಿನಲ್ಲಿ ಮೂಲ 2 ದಿನ್ ಆಡಿಯೊ ಸ್ಟಿರಿಯೊ ಸಿಸ್ಟಂನ ಬದಲಿಗೆ 6.85 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸ್ಮಾರ್ಟ್ ಫೋನ್ ನ್ಯಾವಿಗೇಷನ್ ಹಾಗೂ ಇನ್ನಿತರ ಫೀಚರ್ ಗಳನ್ನು ಹೊಂದಿದೆ. ಈ ಕಾರು ಈ ಸೆಗ್ ಮೆಂಟಿನಲ್ಲಿ ಯಾಂಟಿ ಬ್ಯಾಕ್ಟೀರಿಯಾ ಹಾಗೂ ಯಾಂಟಿ ವೈರಸ್ ಹೊಂದಿರುವ ಮೊದಲ ಕಾರ್ ಆಗಲಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಇದರ ಜೊತೆಗೆ ಹ್ಯುಂಡೈ ಕಂಪನಿಯು ಈ ಕಾರಿನಲ್ಲಿ ಗೆಸ್ಚರ್ ಕಂಟ್ರೋಲ್ ಹಾಗೂ ಹೆಪಾ ಫಿಲ್ಟರ್‌ನೊಂದಿಗೆ ಏರ್ ಪ್ಯೂರಿಫೈಯರ್ ಅನ್ನು ಸಹ ನೀಡುತ್ತಿದೆ. ಈ ಕಾರಿನಲ್ಲಿ ಮ್ಯಾನುವಲ್ ಒಆರ್‌ವಿಎಂಗಳ ಬದಲಿಗೆ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳನ್ನು ಸಹ ನೀಡಲಾಗಿದೆ. ಇದರ ಹೊರತಾಗಿ ಈ ಕಾರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಗ್ರ್ಯಾಂಡ್ ಐ 10 ನಿಯೋಸ್‌ನ ವಿಶೇಷ ಆವೃತ್ತಿ ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ

ಈ ಕಾರಿನ ಎಂಜಿನ್ ನಲ್ಲಿಯೂ ಯಾವುದೇ ಬದಲಾವಣೆಗಳಾಗಿಲ್ಲ. ಈ ಕಾರು 1.2-ಲೀಟರಿನ ಪೆಟ್ರೋಲ್ ಹಾಗೂ 1.2-ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 74 ಬಿಹೆಚ್‌ಪಿ ಪವರ್ ಹಾಗೂ 190 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Article Published On: Friday, September 11, 2020, 13:14 [IST]
English summary
Hyundai to launch special edition of Grand i10 Nios. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+