ನವರಾತ್ರಿ ಸ್ಪೆಷಲ್: ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಕಂಪನಿಯು ನವರಾತ್ರಿ ಹಬ್ಬದ ವಿಶೇಷವಾಗಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿಶೇಷ ಸರ್ವಿಸ್ ಕ್ಯಾಂಪ್ ಘೋಷಣೆ ಮಾಡಿದ್ದು, ಒಂಬತ್ತು ದಿನಗಳು ನಡೆಯುವ ದಸರಾ ವಿಶೇಷತೆಗೆ ಪೂರಕವಾಗಿ ಒಂಬತ್ತು ಸರ್ವಿಸ್‌ಗಳನ್ನು ಆಕರ್ಷಕ ಬೆಲೆಯಲ್ಲಿ ಘೋಷಣೆ ಮಾಡಿದೆ.

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ನವರಾತ್ರಿ ವಿಶೇಷ ಕ್ಯಾಂಪ್‌ನಲ್ಲಿ ಸರ್ವಿಸ್ ಪಡೆಯುವ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಸೇವೆಗಳನ್ನು ಒದಗಿಸುವುದಾಗಿ ಮಾಹಿತಿ ಹಂಚಿಕೊಂಡಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ನವರಾತ್ರಿ ವಿಶೇಷ ಸರ್ವಿಸ್ ಕ್ಯಾಂಪ್ ಈ ತಿಂಗಳ ಅಕ್ಟೋಬರ್ 14ರಿಂದ 22ರ ತನಕ ಲಭ್ಯವಿರಲಿದೆ. ವಾರಂಟಿ ಅಡಿ ಲಭ್ಯವಿರುವ ಸರ್ವಿಸ್‌ಗಳನ್ನು ಹೊರತುಪಡಿಸಿ ಹೆಚ್ಚುವರಿ ಸರ್ವಿಸ್‌ಗಳು ರಿಯಾಯ್ತಿ ದರದಲ್ಲಿ ಲಭ್ಯವಿದ್ದು, ಕಾರಿನ ಪ್ರಮುಖ ಬಿಡಿಭಾಗಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿರಲಿವೆ.

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಲೆಬರ್ ಚಾರ್ಜ್‌ಗಳ ಮೇಲೆ ಗರಿಷ್ಠ ಶೇ.20 ರಿಯಾಯ್ತಿ ನೀಡಲಿದ್ದು, 50 ಪ್ರಮುಖ ತಾಂತ್ರಿಕ ಅಂಶಗಳ ಚೆಕ್ ಅಪ್‌ ಸರ್ವಿಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಹಾಗೆಯೇ ಟೈರ್ ಮೇಲೆ ಕೂಡಾ ಆಕರ್ಷಕ ಆಫರ್ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸರ್ವಿಸ್ ಸೆಂಟರ್‌ಗಳನ್ನು ಸಂಪರ್ಕಿಸಬಹುದಾಗಿದೆ.

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಇನ್ನು ಕರೋನಾ ವೈರಸ್‌ನಿಂದಾಗಿ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಲಾಕ್‌ಡೌನ್‌ನಿಂದಾಗಿ ಏಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿ ಭಾರೀ ಪ್ರಮಾಣದ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಅಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿನ ವಾಹನ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಅಕ್ಟೋಬರ್ ಅವಧಿಯಲ್ಲಿನ ಮಾರಾಟದಲ್ಲಿ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿಟ್ಟುಕೊಂಡಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಹ್ಯುಂಡೈ ಕೂಡಾ ಹೊಸ ಅಭಿಯಾನ ಕೈಗೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ವಿನ್ಯಾಸ, ಗುಣಮಟ್ಟ, ವೈಶಿಷ್ಟ್ಯತೆ ಮತ್ತು ಸುರಕ್ಷಿತ ಉತ್ಪನ್ನಗಳನ್ನು ಸಿದ್ದಪಡಿಸುವಲ್ಲಿ ಯಶಸ್ವಿಯಾಗಿದೆ.

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಇದೇ ಕಾರಣಕ್ಕೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿರುವ ಹ್ಯುಂಡೈ ಕಂಪನಿಯು ಕರೋನಾ ವೈರಸ್ ಪರಿಣಾಮ ಕುಸಿದಿದ್ದ ವಾಹನ ಮಾರಾಟವನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ಹಬ್ಬದ ಋುತುಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ವಿವಿಧ ಕಾರು ಮಾದರಿಗಳಿಗೆ ಸ್ಪೆಷಲ್ ಸರ್ವಿಸ್ ಘೋಷಿಸಿದ ಹ್ಯುಂಡೈ

ಇದಕ್ಕಾಗಿಯೇ ಸ್ಮಾರ್ಟ್ ಕಾರ್ಸ್ ಫಾರ್ ಸ್ಮಾರ್ಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿರುವ ಹ್ಯುಂಡೈ ಕಂಪನಿಯು ಸ್ಯಾಂಟ್ರೋ, ಗ್ರ್ಯಾಂಡ್ ಐ10 ನಿಯೊಸ್ ಮತ್ತು ಔರಾ ಕಾರುಗಳ ಮಾರಾಟದ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ. ಹೊಸ ಅಭಿಯಾನದ ಮೂಲಕ ಗ್ರಾಹಕರನ್ನು ಸೆಳೆಯಲು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಗ್ರಾಹಕರಲ್ಲಿ ವಿಶ್ವಾಸಾರ್ಹ ಬ್ರಾಂಡ್ ಆಗಿ ಪರಿಣಮಿಸುವಂತೆ ಅಭಿಯಾನ ಕೈಗೊಳ್ಳುತ್ತಿದೆ.

Most Read Articles

Kannada
English summary
Hyundai to start Navratri car care from October 14 to 22nd. Read in Kannada.
Story first published: Wednesday, October 14, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X