ಸಿಜರ್ ಡೋರುಗಳೊಂದಿಗೆ ಮಾಡಿಫೈಗೊಂಡ ಹ್ಯುಂಡೈ ವರ್ನಾ
ಹ್ಯುಂಡೈ ವರ್ನಾ, ದೇಶಿಯ ಮಾರುಕಟ್ಟೆಯ ಮಿಡ್ ಸೈಜ್ ಸೆಡಾನ್ ಸೆಗ್'ಮೆಂಟಿನಲ್ಲಿರುವ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿದ್ದು, ಬೇಡಿಕೆಯನ್ನು ಉಳಿಸಿಕೊಂಡಿದೆ.

ಈ ಕಾರನ್ನು ಅಪ್ ಡೇಟ್ ಮಾಡಿ ಹೊಸ ತಲೆಮಾರಿನ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಹಳೆಯ ತಲೆಮಾರಿನ ಕಾರು ಸಹ ಉತ್ತಮವಾಗಿದೆ. ವರ್ನಾ ಕಾರುಗಳನ್ನು ಹೊಂದಿರುವವರು ಅವುಗಳನ್ನು ತಮ್ಮ ಇಚ್ಚೆಯಂತೆ ಮಾಡಿಫೈ ಮಾಡಿಕೊಂಡಿದ್ದಾರೆ. ಈಗ ಮಾಡಿಫೈಗೊಂಡಿರುವ ಹ್ಯುಂಡೈ ವರ್ನಾ ಕಾರಿನ ಚಿತ್ರಗಳು ಬಹಿರಂಗಗೊಂಡಿವೆ. ಈ ಕಾರಿನ ಮಾಲೀಕರಾದ ವಿನೀತ್ ವಿಜಯನ್ ಈ ಕಾರನ್ನು ದೊಡ್ಡ ಪ್ರಮಾಣದಲ್ಲಿ ಮಾಡಿಫೈಗೊಳಿಸಿದ್ದಾರೆ.

ಮಾಡಿಫೈಗೊಂಡಿರುವ ಈ ವರ್ನಾ ಕಾರಿಗೆ ಬ್ಲೂ ಬೀ ಎಂದು ಹೆಸರಿಡಲಾಗಿದೆ. ಈ ಕಾರು ಕಸ್ಟಮ್ ಬಾಡಿ ಕಿಟ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಕಪ್ಪು ಬಣ್ಣದ ಗ್ರಿಲ್ ಹಾಗೂ ಬಂಪರ್ ಕೆಳಗೆ ಸ್ಪ್ಲಿಟರ್'ಗಳನ್ನು ನೀಡಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರಿನ ಬಂಪರ್ ಅನ್ನು ಬಾರ್ಕರ್‌ನಲ್ಲಿ ಇರಿಸಲಾಗಿದ್ದು, ಎಲ್‌ಇಡಿ ಫಾಗ್ ಲ್ಯಾಂಪ್ ಅನ್ನು ಬಂಪರ್‌ನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಬಂಪರ್'ನಲ್ಲಿ 4 ಗೋಲ್ಡನ್ ಫಿನಿಶ್ ಹೊಂದಿರುವ ವಾಶರ್'ಗಳನ್ನು ಅಳವಡಿಸಲಾಗಿದೆ. ಇವುಗಳು ಹೆಡ್ ಲೈಟ್ ನ ಎರಡೂ ಬದಿಗಳಲ್ಲಿ ಕಂಡುಬರುತ್ತವೆ. ಈ ಕಾರು ಕಪ್ಪು ಬಣ್ಣದ ಬಾನೆಟ್ ಅನ್ನು ಹೊಂದಿದೆ.

ಈ ಕಾರಿಗೆ ಸ್ಪೋರ್ಟಿ ಲುಕ್ ನೀಡಲು ಬಾನೆಟ್‌ನಲ್ಲಿ ಸ್ಕೂಪ್ ಹಾಗೂ ವೆಂಟ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಕಸ್ಟಮೈಸ್ ಅಲಾಯ್ ವ್ಹೀಲ್ ಹಾಗೂ ರೂಫ್ ಮೇಲೆ ಎಲ್ಇಡಿ ಲೈಟ್ ಬಾರ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿರುವ ಹೈಲೈಟ್ ಎಂದರೆ ಮುಂಭಾಗದ ಡೋರ್.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲ್ಯಾಂಬೊರ್ಗಿನಿ ಕಾರುಗಳಲ್ಲಿರುವಂತಹ ಸಿಜರ್ ಡೋರುಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಆದರೆ ಹಿಂಭಾಗದ ಡೋರುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹಿಂಭಾಗದ ವ್ಹೀಲ್ ಕಡೆಗೆ ಸೈಡ್ ಸ್ಪ್ಲಿಟರ್ ಅನ್ನು ಸಹ ನೀಡಲಾಗಿದೆ.

ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಕೆಂಪು ಬ್ರೇಕ್ ಕ್ಯಾಲಿಪರ್ ಹಾಗೂ ಕಸ್ಟಮ್ ಬಿಲ್ಟ್ ಎಲ್ಇಡಿ ಟೇಲ್‌ಲೈಟ್‌ಗಳನ್ನು ಹೊಂದಿವೆ. ಈ ಕಾರಿನ ಬೂಟ್‌ನಲ್ಲಿ ಸ್ಪಾಯ್ಲರ್ ಅನ್ನು ಸೇರಿಸಲಾಗಿದೆ. ಈ ಕಾರಿನ ಇಂಟಿರಿಯರ್ ಅನ್ನು ಸಹ ಕಸ್ಟಮೈಸ್ ಮಾಡಲಾಗಿದ್ದು, ಮುಂಭಾಗದಲ್ಲಿ ಸ್ಪೋರ್ಟ್ಸ್ ಸೀಟುಗಳನ್ನು ಹಾಗೂ ರೆಡ್ ಥೀಮ್ ಕ್ಯಾಬಿನ್'ಗಳನ್ನು ನೀಡಲಾಗಿದೆ. ಇಷ್ಟೆಲ್ಲಾ ಮಾಡಿಫಿಕೇಶನ್ ನಂತರ ಈ ಕಾರು ಆಕರ್ಷಕವಾಗಿ ಕಾಣುತ್ತದೆ.


Click it and Unblock the Notifications








