ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಯಾದ ವೆರ್ನಾ ಆವೃತ್ತಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಇ ವೆರಿಯೆಂಟ್ ವೆರ್ನಾ ಕಾರಿನ ಆರಂಭಿಕ ಕಾರು ಮಾದರಿಯಾಗಿದೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ವೆರ್ನಾ ಇ ವೆರಿಯೆಂಟ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.02 ಲಕ್ಷ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ. ಇ ವೆರಿಯೆಂಟ್ ಮಾದರಿಯು ಈ ಹಿಂದಿನ ಆರಂಭಿಕ ಆವೃತ್ತಿಯಾದ ಎಸ್ ವೆರಿಯೆಂಟ್‌ಗಿಂತಲೂ ರೂ.36 ಸಾವಿರದಷ್ಟು ಕಡಿಮೆ ಬೆಲೆ ಪಡೆದುಕೊಂಡಿದೆ. ಬೆಸ್ ಮಾದರಿಯನ್ನು ಬಯಸುವ ಗ್ರಾಹಕರಿಗೆ ಹೊಸ ಇ ವೆರಿಯೆಂಟ್ ಖರೀದಿಗೆ ಉತ್ತಮವಾಗಿದ್ದು, ಕೆಲವು ಪ್ರೀಮಿಯಂ ಫೀಚರ್ಸ್ ಕಡಿತಗೊಳಿಸಲಾಗಿದೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ಹೊಸ ಸೆಡಾನ್ ಕಾರು ಮಾದರಿಯಲ್ಲಿ ಬೆಲೆ ಇಳಿಕೆಗಾಗಿ ಶಾರ್ಕ್ ಪಿನ್ ಅಂಟೆನಾ, ಸನ್ ಗ್ಲಾಸ್ ಹೋಲ್ಡರ್ ಮತ್ತು ಇನ್ಪೋಟೈನ್‌ಮೆಂಟ್ ಕ್ಲಸ್ಟರ್ ಸೇರಿ ಕೆಲವು ಫೀಚರ್ಸ್ ಕೈಬಿಡಲಾಗಿದ್ದು, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಬ್ರಾಂಡ್‌ನ ಐಬ್ಲೂ ಸ್ಮಾರ್ಟ್‌ಫೋನ್-ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಸ ವೆರಿಯೆಂಟ್‌ನಲ್ಲಿ ನೀಡಲಾಗಿಲ್ಲ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ಇ ವೆರಿಯೆಂಟ್ ಮಾದರಿಯಲ್ಲಿ ನೀಡಲಾಗಿರುವ 1.5-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 114-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ಇನ್ನು ನ್ಯೂ ಜನರೇಷನ್ ವೆರ್ನಾ ಕಾರು ಮಾದರಿಯು ಸೆಡಾನ್ ಕಾರು ಮಾದರಿಯಲ್ಲೇ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಜೊತೆಗೆ ಪ್ರಮುಖ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸದಾದ ಇ ವೆರಿಯೆಂಟ್ ಜೊತೆ ಎಸ್, ಎಸ್ ಪ್ಲಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ಮಾದರಿಗಳನ್ನು ಒಳಗೊಂಡಿದೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ಎಂಜಿನ್ ಮತ್ತು ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.02 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.09 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯಂತೆ 1.5-ಲೀಟರ್ ಪೆಟ್ರೋಲ್, 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

1.5-ಲೀಟರ್ ಪೆಟ್ರೋಲ್ ಮಾದರಿಯು 114-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ, ಡೀಸೆಲ್ ಮಾದರಿಯು 114-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 118-ಬಿಚ್‌ಪಿ, 172-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ವೆರ್ನಾ ಮಧ್ಯಮ ಕ್ರಮಾಂಕದ ಕಾರು ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋ ಕಾರ್‌ಪ್ಲೇ ಮತ್ತು ಆಂಡ್ರಾಯಿಡ್ ಆಟೋ, ಹೊಸ ಮಾದರಿಯ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಕ್ಸ್ ವುಡ್ ಟ್ರಿಮ್ ಡ್ಯಾಶ್‌ಬೋರ್ಡ್ ಸೌಲಭ್ಯಗಳಿವೆ.

ವೆರ್ನಾ ಸೆಡಾನ್ ಮಾದರಿಯಲ್ಲಿ ಹೊಸದಾಗಿ ಇ ವೆರಿಯೆಂಟ್ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಹ್ಯುಂಡೈ ಅಭಿವೃದ್ದಿಗೊಳಿಸಲಾದ ಬ್ಲ್ಯೂ ಲಿಂಕ್ ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಕಾರ್ ಫೀಚರ್ಸ್ ನಿಯಂತ್ರಿಸುವ ಸ್ಮಾರ್ಟ್ ವಾಚ್, ರಿಮೋಟ್ ವೆಹಿಕಲ್ ಸ್ಮಾರ್ಟ್, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಡಾಕ್ ಮತ್ತು ಸನ್‌ರೂಫ್ ಸೌಲಭ್ಯಗಳಿವೆ.

Most Read Articles

Kannada
English summary
Hyundai Verna E Base Variant Launched In India. Read in Kannada.
Story first published: Friday, October 9, 2020, 20:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X