ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು
ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಬ್ರಾಂಡ್‌ಗಳ ಅಡಿಯಲ್ಲಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಹ್ಯುಂಡೈ ಕಂಪನಿಯು ದೇಶದಲ್ಲಿ ಈಗಾಗಲೇ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯಾದ ಕೊನಾ ಕಾರನ್ನು ಮಾರಾಟ ಮಾಡುತ್ತಿದ್ದು, ಹೆಚ್ಚಿನ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿರುವ ಕೊನಾ ಇವಿ ಕಾರು ತುಸು ದುಬಾರಿ ಎನ್ನಿಸಲಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ವಾಹನಗಳಿಂತ ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಇವಿ ವಾಹನಗಳಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದ್ದು, ಹ್ಯುಂಡೈ ಕಂಪನಿಯು ಬಿ ಸೆಗ್ಮೆಂಟ್‌ನಲ್ಲಿ ತನ್ನ ಹೊಸ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಸದ್ಯ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 312ಕಿ.ಮೀ ನಿಂದ 350 ಕಿ.ಮೀ ಬ್ಯಾಟರಿ ರೇಂಜ್‌ನೊಂದಿಗೆ ರೂ.13 ಲಕ್ಷ ದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿದ್ದು, ಹ್ಯುಂಡೈ ಕಂಪನಿಯು ಈ ಕಾರುಗಳಿಗೆ ಪೈಪೋಟಿ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಿದ್ದಪಡಿಸುತ್ತಿದೆ.

ಹ್ಯುಂಡೈ ಕಂಪನಿಯು ಹೊಸ ಕಾರನ್ನು ರೂ. 10 ಲಕ್ಷ ಬೆಲೆಯೊಳಗೆ ಮಾರಾಟ ಮಾಡುವ ನೀರಿಕ್ಷೆಯಲ್ಲಿದ್ದು, ಬಜೆಟ್ ಬೆಲೆಯಲ್ಲೂ ಪ್ರತಿಸ್ಪರ್ಧಿ ಕಾರು ಮಾದರಿಗಳ ಪೈಪೋಟಿಯಾಗಿ ಮೈಲೇಜ್ ರೇಂಜ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಜಾಗತಿಕ ಮಾರುಕಟ್ಟೆಗಾಗಿ ಹ್ಯುಂಡೈ ಕಂಪನಿಯು ಈಗಾಗಲೇ ಹಲವಾರು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಿದ್ದಪಡಿಸುತ್ತಿದ್ದು, ಮಾಹಿತಿಗಳ ಪ್ರಕಾರ ಬಿಡುಗಡೆಯ ಪಟ್ಟಿಯಲ್ಲಿರುವ ಬಿ ಸೆಗ್ಮೆಂಟ್ ಕಾರು ಮಾದರಿಯು 2021ರ ಕೊನೆಯಲ್ಲಿ ಇಲ್ಲವೇ 2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

2025ರ ವೇಳೆಗೆ ಒಟ್ಟು 16 ವಿವಿಧ ಮಾದರಿಯ ಸಂಪೂರ್ಣ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಮಾಡುವ ಗುರಿಹೊಂದಿರುವ ಹ್ಯುಂಡೈ ಕಂಪನಿಯು ಭಾರತದಲ್ಲೂ ವಿವಿಧ ಕಾರು ಮಾದರಿಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳಿಗೆ ಸಂಪೂರ್ಣವಾಗಿ ಬ್ಯಾಟರಿ ನಿರ್ಮಾಣ ಮಾಡುವ ಯೋಜನೆಯಲ್ಲಿದೆ.

ಸದ್ಯ ಎಲೆಕ್ಟ್ರಿಕ್ ಕಾರು ಮಾದರಿಗಳ ಮುಖ್ಯ ತಾಂತ್ರಿಕ ಅಂಶವಾಗಿ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯಕ್ಕಾಗಿ ಸಂಪೂರ್ಣವಾಗಿ ಚೀನಿ ಮತ್ತು ಥೈವಾನ್ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವುದೇ ಇವಿ ಕಾರುಗಳ ಬೆಲೆ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಬೆಲೆ ಪಡೆದುಕೊಂಡಿರುವುದಕ್ಕೆ ಪ್ರಮುಖ ಕಾರಣವಾಗಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಬೆಲೆ ಇಳಿಕೆಗಾಗಿ ಭಾರತದಲ್ಲಿ ಪೂರ್ಣ ಪ್ರಮಾಣದ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಗಳಿಗೆ ಹಲವು ಆಟೋ ಕಂಪನಿಗಳು ಸಹಭಾಗೀತ್ವದ ಯೋಜನೆಯನ್ನು ಕೈಗೊಂಡಿದ್ದು, ಮೇಡ್ ಇನ್ ಇಂಡಿಯಾ ಬ್ಯಾಟರಿ ಲಭ್ಯವಾದಲ್ಲಿ ಇವಿ ಕಾರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಬಹುದುದಾಗಿದೆ.

ಹಾಗೆಯೇ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ಕಾರುಗಳ ಮಾರಾಟವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಫೇಮ್ 2 ಯೋಜನೆ ಅಡಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಫೇಮ್ 2 ಯೋಜನೆ ಅಡಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಂಪನಿಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಸಬ್ಸಡಿ, ಜಿಎಸ್‌ಟಿಯಲ್ಲಿ ವಿನಾಯ್ತಿ, ನಿಗದಿತ ಮಟ್ಟದ ತೆರಿಗೆ ವಿನಾಯ್ತಿ ನೀಡುತ್ತಿದ್ದು, ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳಕ್ಕೂ ಹೆಚ್ಚಿನ ಮಟ್ಟದ ಸಬ್ಸಡಿ ನೀಡುತ್ತಿದೆ.


Click it and Unblock the Notifications