Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ
ಎಫ್‌ಸಿಎ ಇಂಡಿಯಾ ಕಂಪನಿಯು 2016ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಬ್ರ್ಯಾಂಡ್ ಅನ್ನು ಪರಿಚಯಿಸಿತು. ಜೀಪ್ ಬ್ರ್ಯಾಂಡ್ ಭಾರತದಲ್ಲಿ ಆರಂಭದಲ್ಲಿ ರ‍್ಯಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಮಾದರಿಗಳನ್ನು ಬಿಡುಗಡೆಗೊಳಿಸಿದರು.

ಜೀಪ್ ರ‍್ಯಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಪ್ರೀಮಿಯಂ ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹರನ್ನು ಸೆಳೆಯುವಲ್ಲಿ ಯಶ್ವಸಿಯಾಗಿಲ್ಲ. ನಂತರ 2017ರ ಜುಲೈನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಬ್ರ್ಯಾಂಡ್ ಕಂಪಾಸ್ ಎಸ್‍ಯುವಿಯನ್ನು ಪರಿಚಯಿಸಿದ್ದರು. ಜೀಪ್ ಕಂಪಾಸ್ ಎಸ್‍ಯುವಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿತ್ತು.

ಜೀಪ್ ಕಂಪಾಸ್ ಎಸ್‍ಯುವಿಯು ಪ್ರತಿ ತಿಂಗಳು 2,500 ಯುನಿಟ್‌ಗಳನ್ನು ಮಾರಾಟವಾಗುತ್ತಿತ್ತು. ನಂತರಲ್ಲಿ ಎಫ್‌ಸಿಎ ದೇಶಾದ್ಯಂತ ಬ್ರ್ಯಾಂಡ್‌ನ ವ್ಯಾಪ್ತಿಯನ್ನು ವಿಸ್ತರಿಸಿತು. ಸ್ಥಳೀಯವಾಗಿ ಪ್ರಾರಂಭವಾದ ಒಂದು ವರ್ಷದೊಳಗೆ ಇದು 25,000 ಯುನಿಟ್ ಮಾರಾಟವನ್ನು ತಲುಪಿತು.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ರಂಜಂಗಾಂವ್ ಘಟಕದಲ್ಲಿ ಕಂಪಾಸ್ 'ಆರ್‌ಎಚ್‌ಡಿ ಆವೃತ್ತಿಯ ಉತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.23 ರಷ್ಟು ಕುಸಿತವನ್ನು ಕಂಡಿದೆ. ಇನ್ನು ಕಂಪಾಸ್ ಎಸ್‍ಯುವಿಯ 400 ಯುನಿಟ್ ಗಳನ್ನು ಮಾತ್ರ ಮಾರಾಟವಾಗಿತ್ತು. ಜೀಪ್ ಕಂಪಾಸ್ ಎಸ್‍ಯುವಿಯ ಆರಂಭದ ಮಾರಾಟವನ್ನು ಇತ್ತೀಚಿನ ಮಾರಾಟಕ್ಕೆ ಹೋಲಿಸಿದರೆ ಪಾತಾಳಕ್ಕೆ ಕುಸಿದಿದೆ ಎಂದು ಹೇಳಬಹುದು.

ಈ ಪೆಟ್ರೋಲ್ ಎಂಜಿನ್ 161 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ರೂಪಾಂತದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.

ಈ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 350 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೊಸ ಬಿಎಸ್-6 ಜೀಪ್ ಕಂಪಾಸ್ ಭಾರತದಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.