ಬಿಡುಗಡೆಯಾಯ್ತು ಜೀಪ್ ಕಂಪಾಸ್ ಡೀಸೆಲ್ ಆಟೋಮ್ಯಾಟಿಕ್ ಎಸ್‍ಯುವಿ
ಜೀಪ್ ಇಂಡಿಯಾ ಕಂಪನಿಯು ತನ್ನ ಜೀಪ್ ಕಂಪಾಸ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಜೀಪ್ ಕಂಪಾಸ್ ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.21.6 ಲಕ್ಷಗಳಾಗಿದೆ.

ಜೀಪ್ ಕಂಪಾಸ್ ಹೊಸ ಡೀಸೆಲ್ ಆಟೋಮ್ಯಾಟಿಕ್ ಎಸ್‍ಯುವಿಯು ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಡೀಸೆಲ್ ಆಟೋಮ್ಯಾಟಿಕ್ ಜೀಪ್ ಕಂಪಾಸ್‍ನ ಟಾಪ್-ಸ್ಪೆಕ್ ಲಿಮಿಟೆಡ್ ಪ್ಲಸ್ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.24.99 ಲಕ್ಷಗಳಾಗಿದೆ.

ಹೊಸ ಜೀಪ್ ಕಂಪಾಸ್ ಎಸ್‍ಯುವಿಯು 9 ಸ್ಫೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಹೊರತಾಗಿ, ಜೀಪ್ ಕಂಪಾಸ್ ಎರಡು ರೂಪಾಂತರಗಳನ್ನು ಮುಂಬರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೀಪ್ ಕಂಪಾಸ್ ಡೀಸೆಲ್ ಆಟೋಮ್ಯಾಟಿಕ್ ಎಂಜಿನ್ ಅನ್ನು ರೇಂಜ್-ಟಾಪಿಂಗ್ ಕಂಪಾಸ್ ಟ್ರೈಲ್‍ಹಾಕ್ ರೂಪಾಂತರದಲ್ಲಿ ಮಾತ್ರ ನೀಡಿದೆ. ಜೀಪ್ ಕಂಪಾಸ್ ಟ್ರೈಲ್ಹಾಕ್ ಅನ್ನು 2019ರ ಮಧ್ಯದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಎಸ್‍ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.26.80 ಲಕ್ಷಗಳಾಗಿದೆ.

ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ರೂಪಾಂತದಲ್ಲಿ ನೀಡಲಾಗುವ ಹೊಸ ಎಂಜಿನ್ ಆಯ್ಕೆಯು ಟ್ರೈಲ್ ಹಾಕ್ ಎಂಜಿನ್‍ನಂತೆಯೇ ಇರುತ್ತದೆ. ಇದು 2.0 ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 350 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್‍ನೊಂದಿಗೆ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಎಂಜಿನ್ ಆಯ್ಕೆಯ ಹೊರತಾಗಿ ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ಎರಡೂ ರೂಪಾಂತರಗಳು ಸರಿಸುಮಾರು ಒಂದೇ ರೀತಿಯಲ್ಲಿವೆ.

ಎರಡೂ ಮಾದರಿಗಳು ಹಲವಾರು ಫೀಚರ್ಸ್‍ಗಳು ಮತ್ತು ಸುರಕ್ಷತಾ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೀಪ್ ಕಾಂಪಾಸ್‍ನಲ್ಲಿ ಹಲವಾರು ಸುರಕ್ಷತ ಫೀಚರ್ಸ್‍ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಇದರಲ್ಲಿ ಪನೋರಾಮಿಕ್ ಸನ್‍ರೂಫ್, ವೈಪರ್‍ಗಳೊಂದಿಗಿನ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಆರು ಏರ್‍ಬ್ಯಾಗಗಳು, 8 ರೀತಿಯ ಎಲೆಕ್ಟ್ರಿಕಾ ಅಡ್ಜೆಂಸ್ಟ್ಬಲ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಜೀಪ್‍ನ ಯುಕನೆಕ್ಟ್ ತಂತ್ರಜ್ಞಾನದೊಂದಿಗೆ 8.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಎಫ್‍ಸಿಎ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಾರ್ಥಾ ದತ್ತಾ ಅವರು ಮಾತನಾಡಿ, ನಾಲ್ಕು ಡೀಸೆಲ್ ಆಟೋಮ್ಯಾಟಿಕ್ ರೂಪಾಂತರಗಳನ್ನು ಬಿಡುಗಡೆಗೊಳಿಸುವುದರೊಂದಿಗೆ ಜೀಪ್ ಕಂಪಾಸ್ ತನ್ನ ಸರಣಿಯನ್ನು ಬಲಪಡಿಸುತ್ತದೆ ಮತ್ತು ವಿಸ್ತರಿಸಲಿದೆ.

ಇದರಲ್ಲಿ ಬೇಸ್ ಮತ್ತು ಟಾಪ್-ಎಂಡ್ ರೂಪಾಂತರವು ಗ್ರಾಹಕರಿಗೆ ಈಗಿನಿಂದಲೇ ಲಭ್ಯವಾಗುತ್ತದೆ. ಬಿಎಸ್-6 ಮಾಲಿನ್ಯ ನಿಯಮದ ಗಡುವಿನ ಮೊದಲೇ ಬಿಎಸ್-6 ಜೀಪ್ ಕಂಪಾಸ್ ಮಾದರಿಯನ್ನು ಬಿಡುಗಡೆಗೊಳಿಸಿದ್ದೇವೆ ಎಂದು ಹೇಳಿದರು.

ಜೀಪ್ ಕಂಪಾಸ್ ಬಿಎಸ್-6 ಡೀಸೆಲ್ ಆಟೋಮ್ಯಾಟಿಕ್ ಎಂಜಿನ್ ಈಗ ಲೋವರ್ ಸ್ಪೆಕ್ ರೂಪಾಂತರಗಳಲ್ಲಿಯೂ ಕೂಡ ಲಭ್ಯವಿದೆ. ಹೊಸ ಬಿಎಸ್-6 ಜೀಪ್ ಕಂಪಾಸ್ ಭಾರತದಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








