ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಳು ಬಯಸಿದೆ. ಈ ಕಾರಣಕ್ಕೆ ಹೊಸ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಹೊಸ ಎಸ್‌ಯುವಿ ಬಿಡುಗಡೆಗೂ ಮೊದಲು ಜೀಪ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿಯಾದ ಕಂಪಾಸ್ ಬಿಎಸ್ 6 ಮಾದರಿಯಲ್ಲಿ ಬದಲಾವಣೆ ಮಾಡಿ ಬಿಡುಗಡೆಗೊಳಿಸಲಿದೆ.

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪಾಸ್ ಅನ್ನು ಮೊದಲು ಒಟ್ಟು 19 ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜೀಪ್ ಕಂಪನಿಯು ಕಂಪಾಸ್‌‌ನ 14 ಮಾದರಿಗಳನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ಜೀಪ್ ಕಂಪಾಸ್ ಬಿಎಸ್ 6 ಅನ್ನು ಕೇವಲ 5 ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಎಸ್‌ಯುವಿಯಲ್ಲಿ 1.4 ಲೀಟರ್ ಬಿಎಸ್ 6 ಪೆಟ್ರೋಲ್ ಹಾಗೂ 2.0 ಲೀಟರ್ ಬಿಎಸ್ 6 ಡೀಸೆಲ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ.

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪಾಸ್ ಬಿಎಸ್ 6ನ ಐದು ಮಾದರಿಗಳಲ್ಲಿ ಸ್ಪೋರ್ಟ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ ಪ್ಲಸ್ ಹಾಗೂ ಲಿಮಿಟೆಡ್ ಪ್ಲಸ್ 4 ಎಕ್ಸ್ 4 ಮಾದರಿಗಳು ಸೇರಿವೆ. ಟ್ರೈಲ್‌ಹಾಕ್ ಶ್ರೇಣಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಆಯ್ಕೆಗಳನ್ನು ಒದಗಿಸಲು ಈ ಕ್ರಮಕ್ಕೆ ಮುಂದಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪಾಸ್ ಬಿಎಸ್ 6 ಎಸ್‌ಯುವಿಯ ಬೆಲೆಯು ಎಕ್ಸ್‌ ಶೋರೂಂ ದರದಂತೆ ರೂ.16.49 ಲಕ್ಷದಿಂದ ರೂ.24.99 ಲಕ್ಷಗಳಾಗಲಿದೆ. ಟ್ರೈಲ್‌ಹಾಕ್ 4x4 ಹಾಗೂ 4x4(O)ಮಾದರಿಗಳಲ್ಲಿ ಲಭ್ಯವಿದ್ದು, ಈ ಮಾದರಿಗಳ ಬೆಲೆ ಎಕ್ಸ್‌ ಶೋರೂಂ ದರದಂತೆ ಕ್ರಮವಾಗಿ ರೂ.26.80 ಲಕ್ಷ ಹಾಗೂ ರೂ.27.60 ಲಕ್ಷಗಳಾಗಲಿದೆ.

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪಾಸ್ ಬಿಎಸ್ 6 ಎಸ್‌ಯುವಿ 16 ಇಂಚಿನ ಅಲಾಯ್ ವ್ಹೀಲ್‌, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ನಾಲ್ಕು ಡಿಸ್ಕ್ ಬ್ರೇಕ್, ರಿವರ್ಸ್ ಪಾರ್ಕ್ ಅಸಿಸ್ಟ್ ಸೆನ್ಸಾರ್, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಹಾಗೂ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಇದರ ಜೊತೆಗೆ ಜೀಪ್ ಕಂಪಾಸ್ ಬಿಎಸ್ 6 ಟಾಪ್ ವೆರಿಯಂಟ್ ಲಿಮಿಟೆಡ್ ಪ್ಲಸ್ ಎಸ್‌ಯುವಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌, ಎಲ್‌ಇಡಿ ಹೆಡ್‌ಲ್ಯಾಂಪ್‌, 18 ಇಂಚಿನ ಅಲಾಯ್ ವ್ಹೀಲ್‌, ಡ್ಯುಯಲ್ ಟೋನ್ ರೂಫ್, ಪನೋರಾಮಿಕ್ ಸನ್‌ರೂಫ್, ರೇನ್ ಸೆನ್ಸಿಂಗ್ ವೈಪರ್ಸ್, ಲೆದರ್ ಸೀಟುಗಳು, ಲೆದರ್ ಸ್ಟೀಯರಿಂಗ್ ವ್ಹೀಲ್‌ಗಳನ್ನು ಹೊಂದಿದೆ.

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪಾಸ್‌ನಲ್ಲಿ ಅಳವಡಿಸಿರುವ 1.4-ಲೀಟರ್ ಬಿಎಸ್ 6 ಪೆಟ್ರೋಲ್ ಎಂಜಿನ್ 160 ಬಿಹೆಚ್‌ಪಿ ಪವರ್ ಹಾಗೂ 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2.0 ಲೀಟರಿನ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿ 6 ಸ್ಪೀಡ್ ಮ್ಯಾನುವಲ್ ಹಾಗೂ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಹೊಂದಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ರೂಪದಲ್ಲಿ ಬರಲಿದೆ ಜೀಪ್ ಕಂಪಾಸ್ ಎಸ್‌ಯುವಿ

ಜೀಪ್ ಕಂಪಾಸ್‌ನ 14 ಮಾದರಿಗಳಲ್ಲಿ, 5 ಪೆಟ್ರೋಲ್ ಮಾದರಿಗಳನ್ನು ಹಾಗೂ 9 ಡೀಸೆಲ್ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಮೂರು ಹೊಸ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಕಂಪಾಸ್ ಎಸ್‌ಯುವಿಯನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲಿದೆ.

Article Published On: Friday, April 17, 2020, 17:17 [IST]
English summary
Jeep Compass variant revised available in 5 trims. Read in Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+