ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

ಜೀಪ್ ಕಂಪನಿಯು ತನ್ನ ಗ್ಲಾಡಿಯೇಟರ್ ಸ್ಪೋರ್ಟ್ ಮತ್ತು ಸ್ಪೋರ್ಟ್ ಎಸ್ ಅನ್ನು ಆಧರಿಸಿ 2021ರ ಗ್ಲಾಡಿಯೇಟರ್ ವಿಲ್ಲೀಸ್ ಎಂಬ ಹೊಸ ವೆರಿಯೆಂಟ್ ಅನ್ನು ಪರಿಚಯಿಸಿದೆ. 2021ರ ಹೊಸ ಗ್ಲಾಡಿಯೇಟರ್ ವಿಲ್ಲೀಸ್ ಅತ್ಯುತ್ತಮ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ 4X4 ಐಕಾನಿಕ್ ಆಫ್ ರೋಡ್ ಕ್ರೂಸಿಂಗ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. ಈ ಆಫ್-ರೋಡರ್ ಅಗ್ರೆಸಿವ್ ಲುಕ್ ಅನ್ನು ಹೊಂದಿದೆ. ಈ ವಾಹನವನ್ನು ನೋಡುವಾಗಲೇ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಯುತ್ತದೆ. ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಅಗ್ರೇಸಿವ್ ವಿನ್ಯಾಸ ಶೈಲಿ ಹೆಚ್ಚು ರಗಡ್ ಲುಕ್ ಅನ್ನು ನೀಡುತ್ತದೆ.

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್ ವಾಹನವಾಗಿರುವುದರಿಂದ ಸಾಕಷ್ಟು ಆಫ್-ರೋಡ್ ಫೀಚರ್ ಗಳು ಮತ್ತು ತಂತ್ರಜ್ಙಾನಗಳನ್ನು ಹೊಂದಿದೆ. ಈ ಆಫ್-ರೋಡರ್ ನಲ್ಲಿ ಲಿಮಿಟೆಡ್-ಸ್ಲಿಪ್ ಡಿಫರೆನ್ಷಿಯಲ್, ರುಬಿಕಾನ್ ಕ್ಯಾಬ್ ರಾಕ್ ರೈಲ್ ಮತ್ತು ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

ಇದರೊಂದಿಗೆ 32-ಇಂಚಿನ ಬಿಎಫ್‌ಗುಡ್ರಿಚ್ ಕೆಎಂ2 ಮಡ್ ಟೆರೆಯೆನ್ ಕಂಟ್ರೋಲ್, ಕಮಾಂಡ್-ಟ್ರ್ಯಾಕ್ 4X4 ಪಾರ್ಟ್ ಟೈಮ್ ಮತ್ತು 2 ಸ್ಪೀಡ್ ಟ್ರಾನ್ಸ್‌ಫರ್ ಕೇಸ್ ಅಳವಡಿಸಿದ್ದು, ಆಫ್-ರೋಡ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಹುಡ್ ಡೆಕಾಲ್, ಹೆರಿಟೇಜ್ 4 ಡಬ್ಲ್ಯೂಡಿ ಟೈಲ್‌ಗೇಟ್ ಡೆಕಾಲ್, ಗ್ರೇ ಪ್ಯಾಡ್ ಹೊಂದಿರುವ ಕಪ್ಪು 17 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಗ್ಲೋಸ್ ಬ್ಲ್ಯಾಕ್ ಗ್ರಿಲ್ ಅನ್ನು ಒಳಗೊಂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

ಗ್ಲಾಡಿಯೇಟರ್ ವಿಲ್ಲೀಸ್ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಆಫ್-ರೋಡರ್ ಆದರೂ ಆಕರ್ಷಕ ಇಂಟಿರಿಯರ್ ಅನ್ನು ಹೊಂದಿದೆ. ಇಂಟಿರಿಯರ್ ನಲ್ಲಿ 7 ಇಂಚಿನ ಹೆಡ್ ಯುನಿಟ್ ಡಿಸ್ ಪ್ಲೇ ಜೊತೆಗೆ ಕೆಲವು ಕನೆಕ್ಟಿವಿಟಿ ಫೀಚರ್ ಅನ್ನು ನೀಡಲಾಗಿದೆ.

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

ಇನ್ನು ಪ್ರಮುಖವಾಗಿ ಈ ಆಫ್-ರೋಡರ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಈ 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ನಲ್ಲಿ 3.6 ಲೀಟರ್ ಪೆಂಟಾಸ್ಟಾರ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

ಈ ಎಂಜಿನ್ 285 ಬಿಹೆಚ್‍ಪಿ ಪವರ್ ಮತ್ತು 353 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಫ್ಹೋರ್-ವ್ಹೀಲ್-ಡ್ರೈವ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು 2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್

2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಟ್ರೈಲ್ ರೇಟೆಡ್ ಎಂಬ ಬ್ಯಾಡ್ಜ್ ಅನ್ನು ಹೊಂದಿದ್ದು, ಇದು ಐದು ಆಫ್ ರೋಡ್ ಪರ್ಫಾರ್ಮೆನ್ಸ್ ವಿಭಾಗಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂಬುದಾಗಿದೆ. 2021ರ ಜೀಪ್ ಗ್ಲೀಡಿಯೇಟರ್ ವಿಲ್ಲೀಸ್ ಬ್ಲ್ಯಾಕ್, ಗ್ರಾನೈಟ್ ಕ್ರಿಸ್ಟಲ್, ಸ್ಟಿಂಗ್ ಗ್ರೇ, ಬಿಲೆಟ್, ಫೈರ್‌ಕ್ರ್ಯಾಕರ್ ರೆಡ್, ವೈಟ್, ಹೈಡ್ರೊ ಬ್ಲೂ ಮತ್ತು ಸ್ನಾಜ್‌ಬೆರ್ರಿ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

Most Read Articles

Kannada
Read more on ಜೀಪ್ jeep
English summary
Jeep unveils 2021 Gladiator Willys Off-road Vehicle. Read In Kannada.
Story first published: Saturday, October 31, 2020, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X