ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಪ್ರೀಮಿಯಂ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೀಪ್ ಇಂಡಿಯಾ ಸಂಸ್ಥೆಯು ಕಂಪಾಸ್ ಎಸ್‌ಯುವಿ ಯಶಸ್ವಿ ನಂತರ ಶೀಘ್ರದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಣ್ಣ ಗಾತ್ರದ ಎಸ್‌ಯುವಿ ಜೊತೆಗೆ ಡಿ ಸೆಗ್ಮೆಂಟ್‌ನಲ್ಲೂ ಹೊಸ ಮಾದರಿಯ ಎಸ್‌ಯುವಿಯೊಂದನ್ನು ಬಿಡುಗಡೆ ಮಾಡುತ್ತಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, ಇದೇ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುತ್ತಿರುವ ಜೀಪ್ ಸಂಸ್ಥೆಯು ರೂ.10 ಲಕ್ಷದೊಳಗೆ ಒಂದು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಮತ್ತು 7 ಸೀಟರ್ ಎಸ್‌ಯುವಿ ಕಾರುಗಳಲ್ಲಿ ಜನಪ್ರಿಯವಾಗಿರುವ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹೊಸ ಮಾದರಿಯ ಫುಲ್ ಸೈಜ್ ಎಸ್‌ಯುವಿ ಕಾರು ಮಾದರಿಯೊಂದನ್ನು ಅಭಿವೃದ್ದಿಪಡಿಸುತ್ತಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಜೀಪ್ ಮಾತೃಸಂಸ್ಥೆಯಾದ ಎಫ್‌ಸಿಎ ಕಂಪನಿಯ ಇಂಡಿಯಾ ವಿಭಾಗದ ಅಧ್ಯಕ್ಷ ಪಾರ್ಥ ದತ್ತು ಮಾತನಾಡಿದ್ದು, ಅಭಿವೃದ್ಧಿ ಪಥದಲ್ಲಿರುವ ಭಾರತದಲ್ಲಿ ಪ್ರೀಮಿಯಂ ಕಾರುಗಳ ಮಾರಾಟವು ತ್ವರಿತಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವುದರಿಂದ ಗ್ರಾಹಕರ ಬೇಡಿಕೆಯೆಂತೆ ಕೆಲವು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಇದು ಸೂಕ್ತ ಸಮಯ ಎಂದಿದ್ದಾರೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಆಟೋ ಕಂಪನಿಗಳ ಪ್ರಕಾರ ರೂ.10 ಲಕ್ಷ ಬೆಲೆಯೊಳಗಿನ ಕಾರುಗಳು ಸಾಕಷ್ಟು ಲಾಭದಾಯಕವಾಗಲಿದ್ದರೆ, ಪ್ರೀಮಿಯಂ ಕಾರುಗಳು ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲಿವೆ. ಹೀಗಾಗಿ ಎರಡು ಮಾದರಿಯಲ್ಲೂ ಕಾರುಗಳನ್ನು ಹೊರತರುತ್ತಿರುವ ಜೀಪ್ ಕಂಪನಿಯು ಶೀಘ್ರದಲ್ಲೇ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಜೀಪ್ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ರೂ.12 ಲಕ್ಷ ಬೆಲೆಯ ಅಂತರದಲ್ಲಿ ಬಿಡುಗಡೆಯಾಗಲಿದ್ದರೆ ಫುಲ್ ಸೈಜ್ ಎಸ್‌ಯುವಿ ಆವೃತ್ತಿಯು ರೂ.26 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಹೊಸ ಎಸ್‌ಯುವಿ ಕಾರು ಚೀನಿ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ಕಮಾಂಡರ್ ಹೋಲಿಕೆ ಪಡೆದುಕೊಂಡಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಂಡ್ ಕಂಪಾಸ್ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಫಾರ್ಚೂನರ್, ಎಂಡೀವರ್ ಕಾರುಗಳಿಂತಲೂ ಉತ್ತಮ ಒಳಾಂಗಣದೊಂದಿಗೆ 7 ಸೀಟರ್ ಸೌಲಭ್ಯ ಹೊಂದಲಿರುವ ಹೊಸ ಕಾರು 2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳಬಹುದಾಗಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ರೆನೆಗಡ್, ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಕಂಪಾಸ್ ಮತ್ತು ಫುಲ್ ಸೈಜ್ ಎಸ್‌ಯುವಿ ವಿಭಾದಲ್ಲಿ ಗ್ರ್ಯಾಂಡ್ ಕಂಪಾಸ್ ಕಾರು ಸದ್ದು ಮಾಡಲಿದ್ದು, ಹೊಸ ಕಾರು 2021ರ ಮಧ್ಯಂತರದಲ್ಲಿ ರಸ್ತೆಗಿಳಿಯಲಿವೆ.

ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ

ಹಾಗೆಯೇ ಹೊಸ ಕಾರುಗಳ ಮಾರಾಟದಲ್ಲಿ ಬದಲಾವಣೆಯ ನೀರಿಕ್ಷೆಯಲ್ಲಿರುವ ಜೀಪ್ ಕಂಪನಿಯು 2021ರ ಅಂತ್ಯಕ್ಕೆ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

Article Published On: Saturday, May 9, 2020, 15:33 [IST]
English summary
Jeep Is Likely To launch A Seven-Seater Version Of The Compass Next Year In India. Read in Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+