ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಆಟೋ ಉದ್ಯಮವು ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ. ಜೀಪ್ ಇಂಡಿಯಾ ಸಹ ಕಂಪಾಸ್ ಖರೀದಿ ಮೇಲೆ ಹಲವು ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಎಸ್‌ಯುವಿ ಕಾರು ಖರೀದಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಮಾಹಿತಿಗಳ ಪ್ರಕಾರ, ಜೀಪ್ ಕಂಪನಿಯ ಕಂಪಾಸ್ ಎಸ್‌ಯುವಿ ಕಾರಿನ ಪ್ರಮುಖ ವೆರಿಯೆಂಟ್‌ಗಳ ಆಫರ್ ನೀಡುತ್ತಿದ್ದು, ರೂ. 36 ಸಾವಿರದಿಂದ ರೂ. 1.79 ಲಕ್ಷದ ತನಕ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ. ಇದರಲ್ಲಿ ಲಾಂಗಿಟ್ಯೂಡ್ ಪ್ಲಸ್ ಪೆಟ್ರೋಲ್ ಮತ್ತು ಲಾಂಗಿಟ್ಯೂಡ್ ಪ್ಲಸ್ ಡೀಸೆಲ್ ಆವೃತ್ತಿಯ ಮೇಲೆ ಗರಿಷ್ಠ ರೂ.1.68 ಲಕ್ಷದಿಂದ ರೂ. 1.79 ಲಕ್ಷದ ತನಕ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಲಾಂಗಿಟ್ಯೂಡ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ರೂ. 1.36 ಲಕ್ಷ, ಲಾಂಗಿಟ್ಯೂಡ್ ಪ್ಲಸ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ರೂ. 86 ಸಾವಿರ ಮತ್ತು ಲಿಮಿಟೆಡ್ ಪ್ಲಸ್ 4x4 ಮೇಲೆ ರೂ. 79 ಸಾವಿರ, ಸ್ಪೋಟ್ ಪ್ಲಸ್ ಪೆಟ್ರೋಲ್ ಆವೃತ್ತಿಯ ಮೇಲೆ ರೂ.36 ಸಾವಿರ, ಸ್ಪೋರ್ಟ್ ಪ್ಲಸ್ ಡೀಸೆಲ್ ಆವೃತ್ತಿಯ ಮೇಲೆ ರೂ. 59 ಸಾವಿರ, ಲಿಮಿಟೆಡ್ ಪ್ಲಸ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ರೂ.67 ಸಾವಿರ ಡಿಸ್ಕೌಂಟ್ ನೀಡಲಾಗಿದೆ.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಜೊತೆಗೆ ಟ್ರೈಲ್‌ಹ್ವಾಕ್ ಮಾದರಿಗಳ ಮೇಲೂ ಡಿಸ್ಕೌಂಟ್ ಲಭ್ಯವಿದ್ದು, ಲಿಮಿಟೆಡ್ ಪ್ಲಸ್ ಮಾದರಿಯ ಮೇಲೆ ರೂ. 83,600 ಮತ್ತು ಟ್ರೈಲ್‌ಹ್ವಾಕ್ ಆಪ್ಷನ್ ಮಾದರಿಯ ಮೇಲೆ ರೂ. 98,400 ಡಿಸ್ಕೌಂಟ್ ನೀಡಲಾಗುತ್ತಿದೆ.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಈ ಹೊಸ ಆಫರ್‌ಗಳು ಸೀಮಿತ ಅವಧಿಗೆ ಮಾತ್ರವೇ ನೀಡಲಾಗುತ್ತಿದ್ದು, ಲಾಕ್‌ಡೌನ್‌ನಿಂದ ತಗ್ಗಿರುವ ಕಾರು ಮಾರಾಟ ಸುಧಾರಿಸಲು ಈ ಕ್ರಮ ಕೈಗೊಳ್ಳವಾಗಿದೆ. ಜೊತೆಗೆ ಕಾರು ಖರೀದಿಗೆ ಸುಲಭವಾಗುವಂತೆ ವಿವಿಧ ಮಾದರಿಯ ಸರಳ ಹಣಕಾಸು ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಇನ್ನು ಕರೋನಾ ವೈರಸ್ ಪರಿಣಾಮ ಹಲವಾರು ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಆಟೋ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಲಾಕ್‌ಡೌನ್ ವಿನಾಯ್ತಿ ನಂತರ ಆಟೋ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದ್ದರೂ ಗ್ರಾಹಕರಿಲ್ಲದೆ ಬಹುತೇಕ ಕಾರು ಮಾರಾಟ ಕಂಪನಿಗಳು ಕದಮುಚ್ಚುವ ಸ್ಥಿತಿಗೆ ತಲುಪಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಬಹುತೇಕ ಆಟೋ ಕಂಪನಿಗಳು ಹೊಸ ವಾಹನ ಮಾರಾಟದ ಜೊತೆ ತಮ್ಮದೇ ಬ್ರಾಂಡ್ ಕಾರುಗಳ ಸೆಕೆಂಡ್ ಹ್ಯಾಂಡ್ ಮಾದರಿಗಳನ್ನು ಮಾರಾಟ ಮಾಡುವ ಉದ್ಯಮಕ್ಕೆ ಚಾಲನೆ ನೀಡಿದ್ದು, ಜೀಪ್ ಇಂಡಿಯಾ ಕೂಡಾ ಅಧಿಕೃತ ಮಾರಾಟ ಮಳಿಗೆಗಳಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದೆ.

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಜೀಪ್ ಕಂಪನಿಯ ಸೆಕೆಂಡ್ ಕಾರು ಮಾರಾಟಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ತೆರೆಯಲಾಗಿದ್ದು, SELECTEDforYOU ವೆಬ್‌ತಾಣದಲ್ಲಿ ಸೆಕೆಂಡ್ ಕಾರು ಲಭ್ಯತೆ ಮತ್ತು ಬೆಲೆಗಳ ಕುರಿತಾಗಿ ನಿಖರ ಮಾಹಿತಿ ಪಡೆಯಬಹುದಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಕಂಪಾಸ್ ಪ್ರಮುಖ ವೆರಿಯೆಂಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಸೆಲೆಕ್ಟೆಡ್‌ಫಾರ್‌ಯು ವೆಬ್‌ಸೈಟ್‌ನಲ್ಲಿ ಜೀಪ್ ನಿರ್ಮಾಣದ ಬ್ರಾಂಡ್ ಕಾರುಗಳನ್ನು ಮಾತ್ರವೇ ಮಾರಾಟ ಮಾರಾಟಲಿದ್ದು, ಆಯ್ದ ಕಾರು ಮಾದರಿಗಳ ಮೇಲೆ ಕಂಪನಿಯು ಹೆಚ್ಚುವರಿ ವಾರಂಟಿಗಳೊಂದಿಗೆ ಮಾರಾಟ ಮಾಡುತ್ತಿದೆ.

Most Read Articles

Kannada
Read more on ಜೀಪ್ jeep
English summary
Jeep offering discounts up to Rs 1.79 lakh on Compass. Read in Kannada.
Story first published: Friday, August 28, 2020, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X