ಕರೋನಾ ಎಫೆಕ್ಟ್: ಜೀಪ್ ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಆಟೋ ಉದ್ಯಮವು ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ. ಜೀಪ್ ಇಂಡಿಯಾ ಸಹ ಕಂಪಾಸ್ ಖರೀದಿ ಮೇಲೆ ಹಲವು ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಎಸ್‌ಯುವಿ ಕಾರು ಖರೀದಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಮಾಹಿತಿಗಳ ಪ್ರಕಾರ, ಜೀಪ್ ಕಂಪನಿಯ ಕಂಪಾಸ್ ಎಸ್‌ಯುವಿ ಕಾರಿನ ಲಾಂಗಿಟ್ಯೂಡ್ ಪ್ಲಸ್ ಪೆಟ್ರೋಲ್ ಮತ್ತು ಲಾಂಗಿಟ್ಯೂಡ್ ಪ್ಲಸ್ ಡೀಸೆಲ್ ಆವೃತ್ತಿಯ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದ್ದು, ರೂ.1.68 ಲಕ್ಷದಿಂದ ರೂ. 1.79 ಲಕ್ಷದ ತನಕ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಈ ಆಫರ್ ಸೀಮಿತ ಅವಧಿಗೆ ಮಾತ್ರವೇ ನೀಡಲಾಗುತ್ತಿದ್ದು, ಲಾಕ್‌ಡೌನ್‌ನಿಂದ ತಗ್ಗಿರುವ ಕಾರು ಮಾರಾಟ ಸುಧಾರಿಸಲು ಈ ಕ್ರಮ ಕೈಗೊಳ್ಳವಾಗಿದೆ. ಜೊತೆಗೆ ಕಾರು ಖರೀದಿಗೆ ಸುಲಭವಾಗುವಂತೆ ವಿವಿಧ ಮಾದರಿಯ ಸರಳ ಹಣಕಾಸು ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಇನ್ನು ಕರೋನಾ ವೈರಸ್ ಪರಿಣಾಮ ಹಲವಾರು ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಆಟೋ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಲಾಕ್‌ಡೌನ್ ವಿನಾಯ್ತಿ ನಂತರ ಆಟೋ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದ್ದರೂ ಗ್ರಾಹಕರಿಲ್ಲದೆ ಬಹುತೇಕ ಕಾರು ಮಾರಾಟ ಕಂಪನಿಗಳು ಕದಮುಚ್ಚುವ ಸ್ಥಿತಿಗೆ ತಲುಪಿವೆ.

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಸದ್ಯ ಕರೋನಾ ವೈರಸ್ ಪರಿಣಾಮ ದೇಶದಲ್ಲಿ ಆಟೋ ಉದ್ಯಮವು ಮಂದಗತಿಯಲ್ಲಿ ಸಾಗಿದ್ದು, ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಬಹುತೇಕ ಆಟೋ ಕಂಪನಿಗಳು ಹೊಸ ವಾಹನ ಮಾರಾಟದ ಜೊತೆ ತಮ್ಮದೇ ಬ್ರಾಂಡ್ ಕಾರುಗಳ ಸೆಕೆಂಡ್ ಹ್ಯಾಂಡ್ ಮಾದರಿಗಳನ್ನು ಮಾರಾಟ ಮಾಡುವ ಉದ್ಯಮಕ್ಕೆ ಚಾಲನೆ ನೀಡಿದ್ದು, ಜೀಪ್ ಇಂಡಿಯಾ ಕೂಡಾ ಅಧಿಕೃತ ಮಾರಾಟ ಮಳಿಗೆಗಳಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಜೀಪ್ ಕಂಪನಿಯ ಸೆಕೆಂಡ್ ಕಾರು ಮಾರಾಟಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ತೆರೆಯಲಾಗಿದ್ದು, SELECTEDforYOU ವೆಬ್‌ತಾಣದಲ್ಲಿ ಸೆಕೆಂಡ್ ಕಾರು ಲಭ್ಯತೆ ಮತ್ತು ಬೆಲೆಗಳ ಕುರಿತಾಗಿ ನಿಖರ ಮಾಹಿತಿ ಪಡೆಯಬಹುದಾಗಿದೆ.

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಸೆಲೆಕ್ಟೆಡ್‌ಫಾರ್‌ಯು ವೆಬ್‌ಸೈಟ್‌ನಲ್ಲಿ ಜೀಪ್ ನಿರ್ಮಾಣದ ಬ್ರಾಂಡ್ ಕಾರುಗಳನ್ನು ಮಾತ್ರವೇ ಮಾರಾಟ ಮಾರಾಟಲಿದ್ದು, ಆಯ್ದ ಕಾರು ಮಾದರಿಗಳ ಮೇಲೆ ಕಂಪನಿಯು ಹೆಚ್ಚುವರಿ ವಾರಂಟಿಗಳೊಂದಿಗೆ ಮಾರಾಟ ಮಾಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕರೋನಾ ಎಫೆಕ್ಟ್: ಕಂಪಾಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

ಜೀಪ್ ಕಂಪನಿಯು ಆಯ್ದ ಕಾರು ಮಾದರಿಗಳ ಖರೀದಿ ಮೇಲೆ 36 ತಿಂಗಳ ಹೆಚ್ಚುವರಿ ವಾರಂಟಿ ಇಲ್ಲವೇ 60 ಸಾವಿರ ಕಿ.ಮೀ ಮೇಲೆ ವಾರಂಟಿ ನೀಡುತ್ತಿದ್ದು, ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಾಗುವ ಮೋಸದ ವ್ಯವಹಾರಕ್ಕೆ ಬ್ರೇಕ್ ಹಾಕಲು ನುರಿತ ಸಿಬ್ಬಂದಿ ತಂಡದೊಂದಿಗೆ ಹೊಸ ಉದ್ಯಮ ವ್ಯವಹಾರಕ್ಕೆ ಚಾಲನೆ ನೀಡಿದೆ.

Article Published On: Monday, July 27, 2020, 21:16 [IST]
English summary
Jeep Offers Great Discounts For Compass BS6 Models. Read in Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+