ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್, ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತವಿರುವ ಸುಮಾರು 95,000 ಜೀಪ್ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದೆ. ಈ ಎಸ್‌ಯುವಿಗಳ ಗೇರ್‌ಬಾಕ್ಸ್ ದೋಷಯುಕ್ತವಾಗಿದ್ದು, ಪದೇ ಪದೇ ಕೆಟ್ಟು ನಿಲ್ಲುತ್ತಿದೆ.

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಎಸ್‌ಯುವಿಯನ್ನು ಪಾರ್ಕಿಂಗ್ ಮೋಡ್‌ಗೆ ಹಾಕಿದಾಗ ಅದು ಕೆಲಸ ಮಾಡುವುದಿಲ್ಲ. ಇದರಿಂದಾಗಿ ಅಪಘಾತಕ್ಕೀಡಾಗುವ ಸಾಧ್ಯತೆಗಳಿವೆ ಎಂದು ಕಂಪನಿ ಹೇಳಿದೆ. ಈ ರಿಕಾಲ್ ಅಭಿಯಾನವು 2014ರಿಂದ 2017ರ ನಡುವೆ ತಯಾರಿಸಲಾದ ಜೀಪ್ ಚಿರೋಕಿಗಳಿಗೆ ಅನ್ವಯಿಸಲಿದೆ. ಈ ಅಭಿಯಾನದಲ್ಲಿ ಅಮೇರಿಕಾದಲ್ಲಿ 67,248, ಕೆನಡಾದಲ್ಲಿ 13,659, ಮೆಕ್ಸಿಕೊದಲ್ಲಿ 716 ಹಾಗೂ ವಿಶ್ವದ ಇತರ ಭಾಗಗಳಿಂದ 9,940 ಕಾರುಗಳನ್ನು ರಿಕಾಲ್ ಮಾಡಲಾಗುವುದು.

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಮೂಲಗಳ ಪ್ರಕಾರ, ಜೀಪ್‌ನ ಈ ಕಾರುಗಳನ್ನು ಸರಿಪಡಿಸಲು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುತ್ತದೆ. ಈ ಅಪ್‌ಡೇಟ್‌ನಿಂದಾಗಿ ಕಾರನ್ನು ಫ್ರಂಟ್ ವ್ಹೀಲ್ ಡ್ರೈವ್‌ನಿಂದ 4- ವ್ಹೀಲ್ ಡ್ರೈವ್ ಹಾಗೂ ಪಾರ್ಕಿಂಗ್ ಮೋಡ್‌ಗೆ ಬದಲಿಸಬಹುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಜೀಪ್ ಕಂಪನಿಯು ಇತ್ತೀಚೆಗಷ್ಟೇ ತಾಂತ್ರಿಕ ನ್ಯೂನತೆಗಳನ್ನು ಹೊಂದಿದ್ದ ಕಾರಣಕ್ಕೆ ವ್ರಾಂಗ್ಲರ್ ಅನ್‌ಲಿಮಿಟೆಡ್ ಆವೃತ್ತಿಯನ್ನು ರಿಕಾಲ್ ಮಾಡಿತ್ತು. ಮಾರ್ಚ್ 2019ರಿಂದ ಜನವರಿ 2020ರವರೆಗೆ ತಯಾರಾದ ವ್ರಾಂಗ್ಲರ್ ಎಸ್‌ಯುವಿಗಳನ್ನು ಸಹ ರಿಕಾಲ್ ಮಾಡಲಾಗುತ್ತಿದೆ. ವ್ರಾಂಗ್ಲರ್‌ನ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ದೋಷ ಕಂಡು ಬಂದಿದೆ.

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಜೂನ್ ಆರಂಭದಿಂದ ಜೀಪ್ ಕಂಪನಿಯು ತನ್ನ ಗ್ರಾಹಕರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡುತ್ತಿದೆ. ದೇಶಾದ್ಯಂತವಿರುವ ಸರ್ವೀಸ್ ಸೆಂಟರ್‌ಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಹಂತ ಹಂತವಾಗಿ ವಾಹನಗಳನ್ನು ಸರಿಪಡಿಸಲಾಗುವುದೆಂದು ಕಂಪನಿ ತಿಳಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಸರ್ವೀಸ್ ಸೆಂಟರ್‌ಗಳಿಗೆ ಹೋಗುವ ಮುನ್ನ ಗ್ರಾಹಕರು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲು ಜೀಪ್ ಕಂಪನಿಯು ಹೊಸ ಪ್ಲಾಟ್‌ಫಾರಂ ಅನ್ನು ಆರಂಭಿಸಿದೆ.

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಇದರಡಿಯಲ್ಲಿ ಗ್ರಾಹಕರು ಹಳೆಯ ಜೀಪ್ ಕಂಪಾಸ್ ಎಸ್‌ಯುವಿಗಳನ್ನು ಕಂಪನಿಯ ಶೋ ರೂಂನಿಂದ ಖರೀದಿಸಬಹುದು. ಲಾಕ್‌ಡೌನ್ ಕಾರಣದಿಂದಾಗಿ ಹೊಸ ಕಾರು ಖರೀದಿಸುವ ಯೋಜನೆಯನ್ನುಕೈಬಿಟ್ಟಿರುವವರು ಕೈಗೆಟುಕುವ ದರದಲ್ಲಿ ಜೀಪ್‌ನ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಬಹುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ದೋಷಪೂರಿತ ಚಿರೋಕಿ ಎಸ್‌ಯುವಿಗಳನ್ನು ರಿಕಾಲ್ ಮಾಡಿದ ಜೀಪ್

ಜೀಪ್ ಕಂಪಾಸ್‌ನ 7 ಸೀಟುಗಳ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ತಯಾರಿ ನಡೆಸುತ್ತಿದೆ. ಈ ಮಾದರಿಯನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಜೀಪ್ ಚಿರೋಕಿ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.75 ಲಕ್ಷಗಳಾಗಿದೆ.

Most Read Articles

Kannada
Read more on ಜೀಪ್ jeep
English summary
Jeep recalls Cherokee 95000 units worldwide found with defect in transmission. Read in Kannada.
Story first published: Saturday, June 20, 2020, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X