ರ‍್ಯಾಂಗ್ಲರ್ ಎಸ್‍ಯುವಿಯನ್ನು ಹೈಬ್ರಿಡ್ ಆವೃತ್ತಿಯಲ್ಲಿ ಅನಾವರಣಗೊಳಿಸಿದ ಜೀಪ್
ಜೀಪ್ ಕಂಪನಿಯು ಹೈಬ್ರಿಡ್ ಆವೃತ್ತಿಗಳಿಗೆ ಹೆಚ್ಚಿನ ಪ್ರಾಮ್ಯುಖತೆಯನ್ನು ನೀಡುತ್ತಿದೆ. ಜೀಪ್ ಕಂಪನಿಯು ತನ್ನ ಕಂಪಾಸ್ ಮತ್ತು ರೆನೆಗೇಡ್ ಮಾದರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಲ್ಲಿ ಇತ್ತೀಚೆಗೆ ಪರಿಚಯಿಸಿತು.

ಇದೀಗ ಜೀಪ್ ತನ್ನ ಸರಣಿಯ ರ‍್ಯಾಂಗ್ಲರ್ ಮಾದರಿಯನ್ನು ಹೈಬ್ರಿಡ್ ಮಾದರಿಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಜೀಪ್ ರ‍್ಯಾಂಗ್ಲರ್ ಮಾದರಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಹಳೆಯ ಎಸ್‌ಯುವಿಯಲ್ಲಿರುವ ಎಲ್ಲಾ ಫೀಚರ್ ಗಳು ಹೊಸ ಮಾದರಿಯಲ್ಲಿ ಮುಂದುವರೆಯಲಿವೆ. ಇನ್ನು ಜೀಪ್ ರ‍್ಯಾಂಗ್ಲರ್ ಹೈಬ್ರಿಡ್ ಆವೃತ್ತಿಯ ವಿನ್ಯಾಸದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಹೊಂದಿರಲಿದೆ.

ಹೊಸ ಜೀಪ್ ರ‍್ಯಾಂಗ್ಲರ್ 4xe ಮಾದರಿಯಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 5,250 ಆರ್‌ಪಿಎಂನಲ್ಲಿ 270 ಬಿಹೆಚ್‍ಪಿ ಪವರ್ ಮತ್ತು 3,000 ಆರ್‌ಪಿಎಂನಲ್ಲಿ 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಇದು 44 ಬಿಹೆಚ್‍ಪಿ ಪವರ್ ಮತ್ತು 53 ಎನ್‌ಎಂ ಟಾರ್ಕ್ ಉತ್ಪಾದಿಸಲಾಗುತ್ತದೆ. ಇನ್ನು 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಜೀಪ್ ರ‍್ಯಾಂಗ್ಲರ್4xe ನಲ್ಲಿ400ವಿ, 17ಕಿ.ವ್ಯಾಟ್ ಲಿಥಿಯಂ-ಅಯಾನ್ ಬ್ಯಾಟರ್ ಪ್ಯಾಕ್ ಯುನಿಟ್ ಅನ್ನು ಹೊಂದಿದೆ. ಇದನ್ನು ಎರಡನೇ ಸಾಲಿನ ಆಸನಗಳ ಅಡಿಯಲ್ಲಿ ಇರಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಜೀಪ್ ಹಿಂಭಾಗದ ಆಸನಗಳನ್ನು ಮರುವಿನ್ಯಾಸಗೊಳಿಸಿದೆ. ಬ್ಯಾಟರಿ ಯಾವಾಗಲೂ ಗರಿಷ್ಠ ತಾಪಮಾನದಲ್ಲಿ ಇಡಲು, ಇದರಲ್ಲಿ ಪ್ರತ್ಯೇಕವಾಗಿ ಕೂಲಿಂಗ್ ಮತ್ತು ಹಿಟಿಂಗ್ ಸಿಸ್ಟಂ ಅನ್ನು ಹೊಂದಿದೆ.

ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್ಸ್ ವಾಟರ್ ಫ್ರೋಫ್ ಆಗಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯು 76 ಸೆಂ.ಮೀ ಅಥವಾ 30 ಇಂಚುಗಳಷ್ಟು ಹರಿಯುವ ನೀರಿನಲ್ಲಿ ಸಲಿಸಾಗಿ ಚಲಿಸುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಈ ಜೀಪ್ ರ‍್ಯಾಂಗ್ಲರ್ ಹೈಬ್ರಿಡ್ ಆವೃತ್ತಿಯಲ್ಲಿ ಹೈಬ್ರಿಡ್, ಎಲೆಕ್ಟ್ರಿಕ್ ಮತ್ತು ಇಸೇವ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳಿವೆ. ಹೈಬ್ರಿಡ್ ಮೋಡ್ ವಾಹನವನ್ನು ಎಲೆಕ್ಟ್ರಿಕ್ ಮೋಡ್‌ನಲ್ಲಿ ಪ್ರಾರಂಭಿಸುತ್ತದೆ ಮತ್ತು ಬ್ಯಾಟರಿ ಚಾರ್ಜ್ ಕಡಿಮೆಯಾದಾಗ ಪೆಟ್ರೋಲ್ ಎಂಜಿನ್ ಅನ್ನು ಆನ್ ಮಾಡುತ್ತದೆ.

ಕೊನೆಯ ಮೋಡ್, ಇಸೇವ್ ಎಲೆಕ್ಟ್ರಿಕ್ ಚಾಲನೆಗೆ ಆದ್ಯತೆ ನೀಡುವ ಮೂಲಕ ಬ್ಯಾಟರಿ ಚಾರ್ಜ್ ಅನ್ನು ಸಂರಕ್ಷಿಸುತ್ತದೆ. ರ‍್ಯಾಂಗ್ಲರ್ 4xe ಭಾರತ ಸೇರಿದಂತೆ ವಿಶ್ವದಾದ್ಯಂತ ಲಭ್ಯವಿರುತ್ತದೆ. ಆದರೆ ಇದು ನಮ್ಮ ಮಾರುಕಟ್ಟೆಗೆ ಸಿಬಿಯು ಮೂಲಕ ಆಮದು ಮಾಡಕೊಳ್ಳಲಾಗುತ್ತದೆ.


Click it and Unblock the Notifications