ನಮ್ಮ ಬೆಂಗಳೂರಿನಲ್ಲಿ ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ಜೀಪ್ ಇಂಡಿಯಾ ಕಂಪನಿಯು ಕಳೆದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗಿದ್ದ ರ‍್ಯಾಂಗ್ಲರ್ ರೂಬಿಕಾನ್ ಐಷಾರಾಮಿ ಆಫ್-ರೋಡ್ ಎಸ್‌ಯುವಿ ಕಾರಿನ ವಿತರಣೆಯನ್ನು ಲಾಕ್‌ಡೌನ್ ವಿನಾಯ್ತಿ ನಂತರ ಪುನಾರಂಭಿಸಿದ್ದು, ಮೊದಲ ಕಾರು ಮಾದರಿಯು ನಮ್ಮ ಬೆಂಗಳೂರಿನಲ್ಲಿ ವಿತರಣೆ ಮಾಡಲಾಗಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ಕೆಹೆಚ್‌ಟಿ ಪ್ರೈಮ್ ಕಾರ್ ಶೋರೂಂನಲ್ಲಿ ಜೀಪ್ ಮೊದಲ ರ‍್ಯಾಂಗ್ಲರ್ ರೂಬಿಕಾನ್ ಮೊದಲ ಆವೃತ್ತಿಯನ್ನು ವಿತರಣೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.68.94 ಲಕ್ಷ ಬೆಲೆ ಹೊಂದಿದೆ. ವಿಶ್ವದ ಶ್ರೇಷ್ಠ ಆಫ್-ರೋಡ್ ಎಸ್‌ಯುವಿ ಕಾರು ಒಂದಾಗಿರುವ ರ‍್ಯಾಂಗ್ಲರ್ ರೂಬಿಕಾನ್ ಬಹುಬೇಡಿಕೆಯ 4x4 ಆಫ್-ರೋಡ್ ಕಾರು ಮಾದರಿಯಾಗಿದ್ದು, ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ರ‍್ಯಾಂಗ್ಲರ್ ರೂಬಿಕಾನ್ ಕಾರು ಫೈವ್ ಡೋರ್‍‍ಗಳಲ್ಲಿ ಬಿಡುಗಡೆಯಾಗಿದ್ದು, ಹೊಸ ಕಾರನ್ನು ಭಾರತಕ್ಕೆ ಕಂಪ್ಲಿಟ್ಲಿ ಬಿಲ್ಟ್ ಯುನಿಟ್ (ಸಿಬಿಯು)ರೂಪದಲ್ಲಿ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ಜೀಪ್ ರ‍್ಯಾಂಗ್ಲರ್ ರೂಬಿಕಾನ್ ಕಾರು ಮಾದರಿಯು 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8-ಸ್ಪೀಡ್ ಆಟೋ ಟ್ರಾನ್ಸ್‌ಮಿಷನ್ ಯುನಿಟ್ ಜೋಡಣೆ ಹೊಂದಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ಈ ಮೂಲಕ 268-ಬಿ‍‍ಹೆಚ್‍‍ಪಿ ಹಾಗೂ 400-ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ರ‍್ಯಾಂಗ್ಲರ್ ರೂಬಿಕಾನ್ ಕಾರಿನಲ್ಲಿ 4x4 ಆಲ್-ವೀಲ್ಹ್ ಡ್ರೈವ್ ಟೆಕ್ನಾಲಜಿಯನ್ನು ಅಳವಡಿಸಲಾಗಿದ್ದು, ಅತ್ಯುತ್ತಮ ಆಫ್-ರೋಡ್ ಪರ್ಫಾಮೆನ್ಸ್ ಹೊಂದಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ಜೀಪ್ ಕಂಪನಿಯು ರ‍್ಯಾಂಗ್ಲರ್ ಎಸ್‌ಯುವಿ ಕಾರಿನಲ್ಲಿ ಪ್ರಮುಖ ಎರಡು ಮಾದರಿಗಳನ್ನು ಹೊಂದಿದ್ದು, ಲೈಫ್‌ಸ್ಟೈಲ್ ಮತ್ತು ಆಫ್-ರೋಡ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಸಾಮಾನ್ಯ ರ‍್ಯಾಂಗ್ಲರ್ ಮಾದರಿಯು ಲೈಫ್‌ಸ್ಟೈಲ್ ಮಾದರಿಯಾಗಿದ್ದರೆ ರ‍್ಯಾಂಗ್ಲರ್ ರೂಬಿಕಾನ್ ಮಾದರಿಯು ಆಫ್-ರೋಡ್ ಆವೃತ್ತಿಯಾಗಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿ ಹೊಂದಿರುವ ಹೊಸ ಜೀಪ್ ರ‍್ಯಾಂಗ್ಲರ್‍‍ನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.63.94 ಲಕ್ಷ ಬೆಲೆ ಹೊಂದಿದ್ದು, ರ‍್ಯಾಂಗ್ಲರ್ ರೂಬಿಕಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.68.94 ಲಕ್ಷ ಬೆಲೆ ಹೊಂದಿದೆ.

ಮಾರಾಟವಾಯ್ತು ಜೀಪ್ ನಿರ್ಮಾಣದ ಮೊದಲ ರ‍್ಯಾಂಗ್ಲರ್ ರೂಬಿಕಾನ್

ಲೈಫ್‌ಸ್ಟೈಲ್ ಆವೃತ್ತಿಗಿಂತಲೂ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿರುವ ಆಫ್-ರೋಡ್ ಮಾದರಿಯು ಭಾರೀ ಬೇಡಿಕೆಯ 4x4 ಕಾರು ಮಾದರಿಯಾಗಿದ್ದು, ಪ್ರಪಂಚ ಹಲವು ರಾಷ್ಟ್ರಗಳಿಗೆ ಜೀಪ್ ಕಂಪನಿಯು ಅಮೆರಿಕದಿಂದಲೇ ರಫ್ತು ಮಾಡುತ್ತಿದೆ.

Image Courtesy: K.H.T Prime And Tauseef See

More from DriveSpark

Article Published On: Thursday, June 11, 2020, 15:03 [IST]
English summary
Jeep Wrangler Rubicon Deliveries Begin. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+