ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಸಂಸ್ಥೆಯ ಬಹುನೀರಿಕ್ಷಿತ ಕಾರ್ನಿವಾಲ್ ಕಾರು ಬಿಡುಗಡೆಗೂ ಮುನ್ನವೇ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಜನಪ್ರಿಯ ಕಾರು ಮಾದರಿಯಾದ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಭರ್ಜರಿ ಪೈಪೋಟಿ ನೀಡಲು ಸಿದ್ದವಾಗಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಹೊಸ ಕಾರು ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭವಾಗಿದ್ದು, ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡುವ ಮುನ್ನವೇ ಸಾವಿರಾರು ಗ್ರಾಹಕರು ಹೊಸ ಕಾರು ಖರೀದಿಗೆ ರೂ.1 ಲಕ್ಷ ಮುಂಗಡ ಪಾವತಿಸಿ ಹೆಸರು ನೋಂದಾಯಿಸುತ್ತಿದ್ದಾರೆ. ಮಾಹಿತಿಗಳ ಪ್ರಕಾರ, ಹೊಸ ಕಾರು ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ಕಾರ್ನಿವಾಲ್ ಕಾರು ಅಂದೇ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಕಾರ್ನಿವಾಲ್ ಕಾರು ವಿದೇಶಿ ಮಾರುಕಟ್ಟೆಗಳಲ್ಲಿ 11 ಸೀಟರ್ ಮತ್ತು 9 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದ್ದು, ಇದು ದೇಶಿಯ ಮಾರುಕಟ್ಟೆಯಲ್ಲಿ ಕೆಲವು ಬದಲಾವಣೆಯೊಂದಿಗೆ ಬಿಡುಗಡೆಯಾಗಲಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

6 ಸೀಟರ್ ಮಾದರಿಯು ಪ್ರತ್ಯೇಕವಾಗಿ 2+2+2 ಆಸನ ವ್ಯವಸ್ಥೆಯನ್ನು ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಮತ್ತು 8 ಸೀಟರ್ ಮಾದರಿಯು 2+3+3 ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ವಿವಿಧ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಜೊತೆಗೆ ಹೊಸ ಕಾರಿನಲ್ಲಿ ಕೆಲವು ಫೀಚರ್ಸ್‌ಗಳನ್ನು ಮಾಡಿಫೈ ಕೂಡಾ ಮಾಡಿಕೊಳ್ಳಬಹುದಾಗಿದ್ದು, ಡ್ಯುಯಲ್ ಸನ್‌ರೂಫ್ ಮತ್ತು ರೂಫ್ ಬಾಕ್ಸ್ ಸೌಲಭ್ಯವನ್ನು ಹೆಚ್ಚುವರಿ ಶುಲ್ಕದೊಂದಿಗೆ ಖರೀದಿ ಮಾಡಬೇಕಾಗುತ್ತದೆ. ಸದ್ಯ ಎಂಪಿವಿ ಕಾರುಗಳ ಮಾರಾಟ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯು ರೂ.25 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಕಾರ್ನಿವಾಲ್ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇದ್ದು ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಕಿಯಾ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಹಾಗೆಯೇ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗಿಂತಲೂ ಉತ್ತಮ ಪ್ರೀಮಿಯಂ ಸೌಲಭ್ಯ ಹೊಂದಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸಹ ಈ ಕಾರಿನಲ್ಲಿದೆ.

ಕಾರ್ನಿವಾಲ್ ಕಾರು ಬಿಡುಗಡೆಯ ದಿನಾಂಕ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಫೆಬ್ರುವರಿ 5ರಂದು ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ನಂತರ ಖರೀದಿಗೆ ಲಭ್ಯವಿರಲಿದೆ.

Article Published On: Friday, January 3, 2020, 19:14 [IST]
English summary
South Korean car maker, Kia Motors has revealed the new Carnival MPV launch date for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+