ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ವಿಶ್ವಾದ್ಯಂತ ಕರೋನಾ ವೈರಸ್ ಮಾಹಾಮಾರಿಯು ದಿನಂಪ್ರತಿ ಸಾವಿರಾರು ಜನರ ಬಲಿ ಪಡೆಯುತ್ತಿದ್ದು, ವೈರಸ್ ಹರಡುವಿಕೆಯನ್ನು ಪರಿಣಾಮಕಾರಿ ತಗ್ಗಿಸಲು ಹಲವಾರು ಕಠಿಣ ಕ್ರಮ ಕೈಗೊಳ್ಳವಾಗಿದೆ. ಭಾರತದಲ್ಲೂ 21 ದಿನಗಳ ಲಾಕ್ ಡೌನ್ ಹಾಕಲಾಗಿದ್ದು, ಸಾಮಾಜಿಕ ಅಂತರದೊಂದಿಗೆ ಕರೋನಾ ವೈರಸ್ ಹರಡುವಿಕೆಯನ್ನು ಸಮರ್ಥವಾಗಿ ತಗ್ಗಿಸಲಾಗುತ್ತಿದೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಪ್ರಪಂಚ ಇತರೆ ರಾಷ್ಟ್ರಗಳಿಂತಲೂ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಭಾರತದಲ್ಲಿ ಕರೋನಾ ವೈರಸ್ ವ್ಯಾಪಕವಾಗಿ ಹರಡಿದರೆ ವೈರಸ್‌ಗೆ ಕಡಿವಾಣ ಹಾಕುವುದು ಸವಾಲಿನ ಕೆಲಸವಾಗಿದ್ದು, ಪ್ರಾಥಮಿಕ ಹಂತದಲ್ಲೇ ವೈರಸ್ ತಗುಲಿದ ಸೋಂಕಿತರ ಪತ್ತೆ ಹಚ್ಚುವ ಮೂಲಕ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲೂ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿ ತಗ್ಗಿಸಲು ಲಾಕ್ ಡೌನ್ ಸಾಕಷ್ಟು ಸಹಕಾರಿಯಾಗಿದ್ದು, ಎಲ್ಲರೂ ಮನೆಯಲ್ಲೇ ಇದ್ದು ವೈರಸ್ ಹರಡದಂತೆ ಸಹಕರಿಸುವಂತೆ ಸರ್ಕಾರಗಳು ಮತ್ತು ಸಂಘ-ಸಂಸ್ಥೆಗಳು ಜನತೆಯಲ್ಲಿ ಮನವಿ ಮಾಡುತ್ತಿವೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಸರ್ಕಾರದ ಲಾಕ್ ಡೌನ್‌ಗೆ ಬಹುತೇಕರು ಸಹಕರಿಸಿದ್ದರೂ ಇನ್ನು ಕೂಡಾ ಕೆಲವರು ಅನಾವಶ್ಯಕವಾಗಿ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗುವುದು, ವಾಹನ ಚಾಲನೆ ಮಾಡುವುದನ್ನು ಮಾಡುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಲಾಕ್ ಡೌನ್ ನಿಯಮ ಪಾಲನೆ ಮಾಡದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ವಿವಿಧ ಮಾದರಿಯ ಜಾಗೃತಿ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುತ್ತಿದ್ದು, ಮನೆಯಲ್ಲೇ ಇದ್ದು ವೈರಸ್ ತಡೆಗೆ ಸಹಕರಿಸುವಂತೆ ಮನವಿ ಮಾಡುತ್ತಿವೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಇದರ ಹೊರತಾಗಿಯೂ ಲಾಕ್ ಡೌನ್ ಉಲ್ಲಂಘನೆ ಮಾಡುವ ಜನರ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸರು ಕೇಸ್‌ಗಳನ್ನು ಕೂಡಾ ದಾಖಲಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ಲಾಕ್ ಡೌನ್ ಬೆಂಬಲ ಸೂಚಿಸಿ ಹಲವು ಸಂಘ-ಸಂಸ್ಥೆಗಳು ಸರ್ಕಾರದ ಆದೇಶವನ್ನು ತಪ್ಪದೇ ಪಾಲನೆ ಮಾಡುವಂತೆ ಕರೆ ಕೊಟ್ಟಿವೆ. ಇದರಲ್ಲಿ ಕಿಯಾ ಮೋಟಾರ್ಸ್ ಕಂಪನಿ ಕೂಡಾ ಒಂದಾಗಿದ್ದು, ಜನತೆಗೆ ಮನೆಯಲ್ಲೇ ಇರುವಂತೆ ಮನವಿ ಮಾಡಿರುವ ವಿಡಿಯೋಯೊಂದು ವಿಶೇಷವಾಗಿದೆ.

ಇತ್ತೀಚೆಗೆ ಬಿಡುಗಡೆ ಮಾಡಲಾದ ಕಾರ್ನಿವಾಲ್ ಎಂಪಿವಿಯೊಂದರ ರಿವೆಂಡ್ ವಿಡಿಯೋ ಪ್ರಸಾರ ಮಾಡಲಾಗುತ್ತಿದ್ದು, ಇದರಲ್ಲಿ ಲಾಕ್ ಡೌನ್‌ಗೆ ಸಹಕರಿಸಿ ಮತ್ತು ಅನಾವಶ್ಯಕವಾಗಿ ಹೊರಗೆ ತಿರುಗಾಡದಂತೆ ಮನವಿ ಮಾಡಲಾಗಿದೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಕರೋನಾ ವೈರಸ್ ಹರಡದಂತೆ ಮನೆಯಲ್ಲೇ ಇದ್ದು ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವಂತೆ ಕರೆ ನೀಡಲಾಗಿದ್ದು, ಕರೋನಾ ವೈರಸ್ ತಡೆಗೂ ಸಹ ಭಾರೀ ಪ್ರಮಾಣದ ದೇಣಿಗೆ ನೀಡುತ್ತಿವೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯತ್ತ ತಲುಪಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

ಕರೋನಾ ವೈರಸ್ ಹರಡುವಿಕೆ ತಡೆಯಲು ವಿನೂತನವಾಗಿ ಜಾಗೃತಿ ಮೂಡಿಸಿದ ಕಿಯಾ ಮೋಟಾರ್ಸ್

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡಿವೆ.

Article Published On: Thursday, April 2, 2020, 8:45 [IST]
English summary
Kia Carnival TVC video gets played backwards – Stay Home to Fight Corona Virus. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+