ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಕಾರು ತಯಾರಕ ಕಂಪನಿಗಳಿವೆ. ಹೊಸ ಹೊಸ ಕಾರು ತಯಾರಕ ಕಂಪನಿಗಳು ಭಾರತಕ್ಕೆ ಕಾಲಿಡುತ್ತಲೇ ಇರುತ್ತವೆ. ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದ ಆಗಸ್ಟ್ ನಲ್ಲಿ ಭಾರತಕ್ಕೆ ಕಾಲಿಟ್ಟಿತು.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ತನ್ನ ಮೊದಲ ಕಾರ್ ಆಗಿ ಸೆಲ್ಟೋಸ್ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಪ್ರತಿ ತಿಂಗಳು ಸೆಲ್ಟೋಸ್ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಜನವರಿ ತಿಂಗಳಿನಲ್ಲಿ ಸೆಲ್ಟೋಸ್ ಕಾರಿನ 15,450 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿತ್ತು. ಈಗ ಕಿಯಾ ಮೋಟಾರ್ಸ್ ಭಾರತದ ಟಾಪ್ 5 ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕಿಯಾ ಮೋಟಾರ್ಸ್ ಕಳೆದ ತಿಂಗಳು ನಡೆದ ಆಟೋ ಎಕ್ಸ್ ಪೋದಲ್ಲಿ ತನ್ನ ಕಾರ್ನಿವಾಲ್ ಎಂಪಿವಿಯನ್ನು ಬಿಡುಗಡೆಗೊಳಿಸಿತ್ತು.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಈಗ ಈ ಎಂಪಿವಿಯ ವಿತರಣೆಯನ್ನು ಆರಂಭಿಸಲಾಗಿದೆ. ಸೆಲ್ಟೋಸ್ ಹಾಗೂ ಕಾರ್ನಿವಾಲ್ ಕಾರುಗಳ ಮಾರಾಟದೊಂದಿಗೆ ಕಿಯಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಮಾರುತಿ ಸುಜುಕಿ ಕಂಪನಿಯು ಮೊದಲ ಸ್ಥಾನದಲ್ಲಿದ್ದರೆ, ಹ್ಯುಂಡೈ ಕಂಪನಿಯು ಎರಡನೇ ಸ್ಥಾನದಲ್ಲಿದೆ. ಇವುಗಳ ನಂತರ ಕಿಯಾ ಮೋಟಾರ್ಸ್ ಮೂರನೇ ಸ್ಥಾನದಲ್ಲಿದೆ. ಕಿಯಾ ಮೋಟಾರ್ಸ್ ಫೆಬ್ರವರಿ ತಿಂಗಳಿನಲ್ಲಿ 15,644 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಹೇಳಿಕೆಯಲ್ಲಿ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 14,024 ಯುನಿಟ್ ಸೆಲ್ಟೋಸ್ ಹಾಗೂ 1,620 ಯುನಿಟ್ ಕಾರ್ನಿವಾಲ್ ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಈ ಪ್ರಮಾಣದ ಮಾರಾಟದಿಂದಾಗಿ ಕಿಯಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅತಿ ಚಿಕ್ಕ ಅವಧಿಯಲ್ಲಿಯೇ ಮಹೀಂದ್ರಾ ಹಾಗೂ ಟಾಟಾ ಮೋಟಾರ್ಸ್ ಕಂಪನಿಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಈ ಯಶಸ್ಸಿನಿಂದ ಉತ್ತೇಜನಗೊಂಡಿರುವ ಕಿಯಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಮತ್ತಷ್ಟು ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಇದರಂತೆ ಮುಂಬರುವ ದಿನಗಳಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಸೊನೆಟ್ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಿದೆ.

ಅಲ್ಪಾವಧಿಯಲ್ಲಿ ಟಾಪ್ 3 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಹೊಸ ಸಾನೆಟ್ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಹ್ಯುಂಡೈ ವೆನ್ಯೂ ಎಸ್‍‍ಯುವಿಯ ವಿನ್ಯಾಸದ ಮೇಲೆ ತಯಾರಿಸಲಾಗುವುದು. ಸೊನೆಟ್ ಎಸ್‍‍ಯುವಿಯಲ್ಲಿ ಹ್ಯುಂಡೈ ವೆನ್ಯೂವಿನಲ್ಲಿರುವಂತಹ ಎಂಜಿನ್ ಆಯ್ಕೆಗಳನ್ನು ಅಳವಡಿಸಲಾಗುವುದು.

Most Read Articles

Kannada
English summary
KIA Motor enters top 3 car brands list in India. Read in Kannada.
Story first published: Tuesday, March 3, 2020, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X