2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ವಿಶ್ವದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಕಾರ್ನಿವಾಲ್ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಐಷಾರಾಮಿ ವೆರಿಯೆಂಟ್ ಒಂದನ್ನು ಪರಿಚಯಿಸಲಾಗುತ್ತಿದೆ.

ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಕಾರ್ನಿವಾಲ್ ಕಾರು ಸದ್ಯ ವಿವಿಧ ದೇಶಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 7 ಸೀಟರ್, 8 ಸೀಟರ್, 9 ಸೀಟರ್ ಮತ್ತು 11 ಸೀಟರ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಹೊಸ ಕಾರಿನಲ್ಲಿ ಐಷಾರಾಮಿ ಫೀಚರ್ಸ್ ಹೊಂದಿರುವ 4 ಸೀಟರ್ ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿದೆ. 2021ರ ಮಧ್ಯಂತರದಲ್ಲಿ ಬಿಡುಗಡೆಗೊಳ್ಳಲಿರುವ ನ್ಯೂ ಜನರೇಷನ್ ಕಾರ್ನಿವಾಲ್ ಕಾರಿನಲ್ಲಿ 4 ಸೀಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಕಾರ್ನಿವಾಲ್ ಕಾರಿಗಿಂತಲೂ ಹೆಚ್ಚು ದುಬಾರಿ ಬೆಲೆ ಹೊಂದಿರಲಿದೆ.

ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಹೊಸ ಕಾರ್ನಿವಾಲ್ ಮಾದರಿಯನ್ನು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಲೆಕ್ಸಸ್ ಎಲ್ಎಂ ಲಗ್ಷುರಿ ಎಂಪಿವಿ ಮತ್ತು ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಂಪಿವಿ ಮಾದರಿಗೆ ಪೈಪೋಟಿಯಾಗಿ ಅಭಿವೃದ್ದಿಗೊಳಿಸಲಾಗಿದೆ.

ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಮುಂದಿನ ವರ್ಷದಿಂದ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕಾರ್ನಿವಾಲ್ ಕಾರನ್ನು 7 ಸೀಟರ್. 8 ಸೀಟರ್, 9 ಸೀಟರ್ ಮತ್ತು 11 ಸೀಟರ್ ಜೊತೆಗೆ ಕಾರ್ಪೊರೇಟ್ ಉದ್ಯಮಿಗಳಿಗೆ ಐಷಾರಾಮಿ ಪ್ರಯಾಣ ಒದಗಿಸುವುದಕ್ಕಾಗಿ 4 ಸೀಟರ್ ಮಾದರಿಯನ್ನು ಸಿದ್ದಪಡಿಸಲಾಗಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಹೊಸ 4 ಸೀಟರ್ ಆವೃತ್ತಿಯಲ್ಲಿ ಮುಂಭಾಗದ ಆಸನಗಳು ಮತ್ತು ಹಿಂಭಾಗದ ಆಸನಗಳ ಸ್ಥಾನವನ್ನು ಪ್ರತ್ಯೇಕಗೊಳಿಸಲಾಗಿದ್ದು, ಹಿಂಭಾಗದಲ್ಲಿರುವ ಎರಡು ಆಸನಗಳಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ನೀಡಲಾಗಿದೆ. ಹಿಂಭಾಗದ ಆಸನದಲ್ಲಿ ಆರಾಮದಾಯಕವಾಗಿ ಸಭೆ ಮಾಡಬಹುದಾದಷ್ಟು ಸ್ಥಳಾವಕಾಶವಿದ್ದು, ಸುತ್ತಲು ಪರದೆ ಜೋಡಣೆ ಮಾಡಲಾಗಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಹಾಗೆಯೇ ಗ್ಲಾಸ್ ಕರ್ಟನ್ ಮೂಲಕ ಚಾಲಕನ ಸ್ಥಾನ ಪ್ರತ್ಯೇಕಗೊಳಿಸುವ ಪ್ಯಾಸೆಂಜರ್ ರೂಂನಲ್ಲಿ ಎಲ್‌ಸಿಡಿ ಪರದೆ ಮೂಲಕ ಕಾನ್ಫರೆನ್ಸ್ ಕೂಡಾ ಮಾಡಬಹುದಾಗಿದ್ದು, ವಿಶೇಷವಾಗಿ ಕಾರ್ಪೊರೇಟ್ ಉದ್ಯಮಿಗಳ ಬೇಡಿಕೆಯೆಂತೆ ಹೊಸ ಕಾರನ್ನು ಸಿದ್ದಗೊಳಿಸಲಾಗಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಇದೇ ಸೌಲಭ್ಯವುಳ್ಳ ಲೆಕ್ಸಸ್ ಎಲ್ಎಂ ಕಾರು ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಿಯಾ ಈ ನಿಟ್ಟಿನಲ್ಲಿ ಯೋಜನೆ ರೂಪಿಸುವ ಮೂಲಕ ನೆಕ್ಸ್ಟ್ ಜನರೇಷನ್ ಕಾರ್ನಿವಾಲ್ ಮಾದರಿಯಲ್ಲೇ ಹೊಸ ಆವೃತ್ತಿಯನ್ನು ಸಿದ್ದಪಡಿಸಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಸದ್ಯ ಮಾರುಕಟ್ಟೆಯಲ್ಲಿ ಲೆಕ್ಸಸ್ ಎಲ್ಎಂ ಕಾರು ವಿವಿಧ ಮಾದರಿಯ ಎರಡು ವೆರಿಯೆಂಟ್‌ಗಳೊಂದಿಗೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 75 ಲಕ್ಷದಿಂದ ರೂ.85 ಲಕ್ಷ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿರುವ ಕಾರ್ನಿವಾಲ್ ಹೊಸ ಆವೃತ್ತಿಯು ರೂ.50 ಲಕ್ಷದಿಂದ ರೂ.60 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ ಎನ್ನಬಹುದು.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಆದರೆ ಈ ಕಾರು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಬಿಡುಗಡೆಯ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನು ಸಾಮಾನ್ಯ ಮಾದರಿಯ ಕಾರ್ನಿವಾಲ್ ಮಾದರಿಯು ಸದ್ಯ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಇದರಲ್ಲಿ 7 ಸೀಟರ್ ಮಾದರಿಯೇ ಹೈ ಎಂಡ್ ಆವೃತ್ತಿಯಾಗಿದ್ದು, 9 ಸೀಟರ್ ಮಾದರಿಯು ಆರಂಭಿಕ ಆವೃತ್ತಿಯಾಗಿ ಮಾರಾಟವಾಗುತ್ತಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.24.95 ಲಕ್ಷ ಮತ್ತು ಹೈ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ನಿರ್ಮಾಣದ ಕಾರ್ನಿವಾಲ್ ಹೈ ಲಿಮೊಸಿನ್

ಎಂಪಿವಿ ಕಾರುಗಳಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರ್ನಿವಾಲ್ ಕಾರು ಸದ್ಯಕ್ಕೆ ಒಂದೇ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 200-ಬಿಎಚ್‌ಪಿ ಮತ್ತು 440-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

More from DriveSpark

Article Published On: Saturday, November 14, 2020, 17:37 [IST]
English summary
KIA Motors Introduced All New Hi-Limousine Variant For 2021 Carnival. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+