ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸೆಲ್ಟೋಸ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸೆಲ್ಟೋಸ್ ಎಸ್‍ಯುವಿಯನ್ನು ಕಳೆದ ವರ್ಷದ ಆಗಸ್ಟ್ ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಪ್ರತಿ ತಿಂಗಳು ಈ ಎಸ್‍‍ಯುವಿಯ ಮಾರಾಟ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷದ ಡಿಸೆಂಬರ್‍‍ನಲ್ಲಿ ಸೆಲ್ಟೋಸ್‍‍ನ ಮಾರಾಟವು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಆದರೆ ಈ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಸೆಲ್ಟೋಸ್‍‍ನ ಮಾರಾಟವು ಮತ್ತೆ ಹೆಚ್ಚಾಗಿದೆ. ಜನವರಿ ತಿಂಗಳಿನಲ್ಲಿ ಸೆಲ್ಟೋಸ್ ಎಸ್‍‍ಯುವಿಯ 15,450 ಯುನಿಟ್‍‍ಗಳು ಮಾರಾಟವಾಗಿವೆ. ಈ ಮೂಲಕ ಸೆಲ್ಟೋಸ್ ಕಾರು ಮಾರಾಟದಲ್ಲಿ ನಂಬರ್ 1 ಸ್ಥಾನಕ್ಕೇರಿದೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

2019ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಕಿಯಾ ಸೆಲ್ಟೋಸ್‍‍ನ 62,000ಕ್ಕೂ ಹೆಚ್ಚು ಯುನಿ‍ಟ್‍‍ಗಳು ಮಾರಾಟವಾಗಿವೆ. ಈ ಎಸ್‍‍ಯುವಿಯು ಜನಪ್ರಿಯವಾಗುವುದಕ್ಕೆ ಹಲವಾರು ಕಾರಣಗಳಿವೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಇದರಲ್ಲಿ ಪ್ರಮುಖವಾಗಿ ಕಿಯಾ ಸೆಲ್ಟೋಸ್‍‍ನ ಡಿಸೈನ್ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ತನ್ನತ್ತ ಸೆಳೆದಿದೆ. ಆಕರ್ಷಕವಾದ ಡಿಸೈನ್ ಜೊತೆಗೆ ಈ ಎಸ್‍‍ಯುವಿಯು ಎಲ್‍ಇ‍‍ಡಿ ಹೆಡ್‍‍ಲೈಟ್, ಎಲ್‍ಇ‍‍ಡಿ ಡಿ‍ಆರ್‍ಎಲ್, ಎಲ್‍ಇ‍‍ಡಿ ಸ್ನೋ ಲೈಟ್, ಎಲ್‍ಇ‍‍ಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಈ ಎಸ್‍‍‍ಯುವಿಯಲ್ಲಿರುವ ಎರಡು ಚಿಮ್ನಿ ಟ್ಯೂಬ್‍‍ಗಳು ಪ್ರಮುಖ ಆಕರ್ಷಣೆಯಾಗಿವೆ. ಕಿಯಾ ಸೆಲ್ಟೋಸ್‍‍‍ನಲ್ಲಿರುವ ಮುಖ್ಯವಾದ ಫೀಚರ್ ಎಂದರೆ 10.25 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ. ಇದರ ಜೊತೆಗೆ 8 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ ಹಾಗೂ 8 ಇಂಚಿನ ಹೆಡ್ಸ್ ಅಪ್ ಡಿಸ್‍‍ಪ್ಲೇ ನೀಡಲಾಗಿದೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಸೆಲ್ಟೋಸ್ ಎಸ್‍‍ಯುವಿ ಸ್ಮಾರ್ಟ್ ಏರ್ ಪ್ಯೂರಿಫೈಯರ್ ಸಿಸ್ಟಂ, ಪುಶ್ ಬಟನ್ ಸ್ಟಾರ್ಟ್, ವೆಂಟಿಲೇಟೆಡ್ ಸೀಟುಗಳು, ಆಂಬಿಯಂಟ್ ಮೂಡ್ ಲೈಟ್ ಸಿಸ್ಟಂ, ಸ್ಟೀಯರಿಂಗ್ ವ್ಹೀಲ್ ಮೇಲೆ ಆಡಿಯೋ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಹೊಸ ಕಿಯಾ ಸೆಲ್ಟೋಸ್‍ ಅನ್ನು ಮೂರು ವಿಧದ ಬಿ‍ಎಸ್ 6 ಎಂಜಿನ್‍‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. 1.5 ಲೀಟರಿನ ಪೆಟ್ರೋಲ್ ಎಂಜಿನ್ 113 ಬಿ‍ಹೆಚ್‍‍ಪಿ ಪವರ್ ಹಾಗೂ 144 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.4 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿ‍‍ಹೆಚ್‍‍ಪಿ ಪವರ್ ಹಾಗೂ 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

1.5 ಲೀಟರಿನ ಡೀಸೆಲ್ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಹಾಗೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

ಜನವರಿ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.89 ಲಕ್ಷಗಳಿಂದ ಆರಂಭವಾಗುತ್ತದೆ. ಈ ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹ್ಯುಂಡೈ ಕ್ರೆಟಾ, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, February 3, 2020, 12:37 [IST]
English summary
Kia Motors sells 15450 units Seltos in January. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+