ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಭಾರತಿಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾದ ಸೆಲ್ಟೋಸ್ ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಯಶ್ವಸಿಯಾಗಿದೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಕಿಯಾ ಸೆಲ್ಟೋಸ್ ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿ ದಾಖಲೆಗಳ ಸರದಾರ ಆಗಿದೆ. ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‍‍ಗಳಿಗೆ ಫುಲ್ ಫಿದಾ ಆಗಿದ್ದಾರೆ. ಭಾರತದ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಕಿಯಾ ಸೆಲ್ಟೋಸ್ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಕಳೆದ ವರ್ಷ ಕಿಯಾ ಸೆಲ್ಟೋಸ್ ಎಸ್‍ಯುವಿಯ ಒಟ್ಟು 45,494 ಯುನಿಟ್‍ ಗಳು ಮಾರಾಟವಾಗಿವೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಇದರಲ್ಲಿ ಶೇ.45.2 ರಷ್ಟು ಡೀಸೆಲ್ ಎಂಜಿನ್ ವಾಹನಗಳ ಕೊಡುಗೆ ಇದೆ. ಕಳೆದ ವರ್ಷದಲ್ಲಿ ಕಿಯಾ ಸೆಲ್ಟೋಸ್ ಡೀಸೆಲ್ ಆವೃತ್ತಿಯ 20,574 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಕಿಯಾ ಸೆಲ್ಟೋಸ್ ಪೆಟ್ರೋಲ್ ಆವೃತ್ತಿಯ 24,920 ಯುನಿಟ್ ಗಳು ಮಾರಾಟವಾಗಿವೆ,

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಪ್ರತಿ ತಿಂಗಳು ಈ ಎಸ್‍‍ಯುವಿಯ ಮಾರಾಟ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 7 ತಿಂಗಳಲ್ಲಿ ಕಿಯಾ ಸೆಲ್ಟೋಸ್ ಎಸ್‍‍ಯುವಿಯ 75,000 ಯುನಿಟ್‍‍‍ಗಳು ಮಾರಾಟವಾಗಿವೆ

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಕಿಯಾ ಸೆಲ್ಟೋಸ್‍ ಎಸ್‍‍ಯು‍ವಿಯನ್ನು ಬಿಎಸ್-6 ಎಂಜಿನ್‍‍ನ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ಗಳು ಸೇರಿವೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಎಸ್‍‍ಯು‍ವಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಎಲ್ಲಾ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಕಿಯಾ ಸೆಲ್ಟೋಸ್ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನದ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಸೆಲ್ಟೋಸ್‍‍ನ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ಅಳವಡಿಸಲಾಗಿದೆ.

ಡೀಸೆಲ್ ಆವೃತ್ತಿಯಲ್ಲಿ ಮಾರಾಟವಾದ ಸೆಲ್ಟೋಸ್ ಕಾರುಗಳೆಷ್ಟು ಗೊತ್ತಾ?

ಭಾರತೀಯು ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೊಸ್ ಎಸ್‍ಯುವಿಯು ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, March 25, 2020, 14:07 [IST]
English summary
45% Of Kia Seltos Sales From BS6 Diesel Versions In 2019. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+