ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾದ ಸೆಲ್ಟೋಸ್ ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಇದಾದ ಬಳಿಕ ಇತ್ತೀಚೆಗೆ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಸೊನೆಟ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತು. ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಕಿಯಾ ಸೊನೆಟ್ 11,721 ಯುನಿಟ್‌ಗಳನ್ನು ಕಳೆದ ತಿಂಗಳು ಮಾರಾಟ ಮಾಡಿದೆ. ಇದೀಗ ಕಿಯಾ ಮೋಟಾರ್ಸ್ ಕಂಪನಿಯು ತನ್ನ ಈ ಜನಪ್ರಿಯ ಕಿಯಾ ಸೊನೆಟ್ ಎಸ್‍ಯುವಿಯನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ಬುಧವಾರದಂದು ಕಿಯಾ ಸೊನೆಟ್ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಸುಮಾರು 1.5 ಲಕ್ಷ ಯುನಿಟ್‌ಗಳನ್ನು ಮೊದಲ ವರ್ಷದೊಳಗೆ ಸ್ಥಳೀಯವಾಗಿ ಮತ್ತು ರಫ್ತಿನ ಮೂಲಕ ಮಾರಾಟ ಮಾಡುವ ಗುರಿ ಹೊಂದಿದೆ. ಕಿಯಾ ಮೋಟಾರ್ಸ್ ಭಾರತದಿಂದ 70 ಕ್ಕೂ ಹೆಚ್ಚು ದೇಶಗಳಿಗೆ ಸೋನೆಟ್ ರಫ್ತು ಮಾಡಲಿದ್ದು, ಮೊದಲ ವರ್ಷದೊಳಗೆ 50,000 ಯುನಿಟ್‌ಗಳನ್ನು ರಫ್ತು ಮಾಡಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಆಂಧ್ರಪ್ರದೇಶದ ಅನಂತಪುರದ ಕಂಪನಿಯ ಉತ್ಪಾದನಾ ಘಟಕದಿಂದ ಕಳೆದ ತಿಂಗಳು ಸೊನೆಟ್ 38 ಯು‍‍ನಿ‍‍ಟ್‍ಗಳನ್ನು ರಫ್ತು ಮಾಡಿದೆ. ಇದೀಗ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಿರುವುದರಿಂದ ಈ ತಿಂಗಳಿನಿಂದ ಸೋನೆಟ್ ರಫ್ತು ಹೆಚ್ಚಾಗುವ ನಿರೀಕ್ಷೆಯಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಸೊನೆಟ್ ಬಿಡುಗಡೆಗೊಂಡು ಒಂದು ತಿಂಗಳು ಆಗುತ್ತಿದ್ದಂತೆ ಬರೊಬ್ಬರಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿವೆ. ಇದರಿಂದ ಭಾರತದಲ್ಲಿ ಕಿಯಾ ಸೊನೆಟ್ ಎಸ್‍ಯುವಿಯ ವೈಟಿಂಗ್ ಪಿರೇಡ್ ಹೆಚ್ಚಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ 1.2-ಲೀಟರ್ ಯುನಿಟ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಇನ್ನು ಟಾಪ್ ಸ್ಪೆಕ್ 1.0-ಲೀಟರ್ ಯುನಿಟ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಅದೇ ರೀತಿ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿಯು ಕೊರಿಯಾ ಕಂಪನಿಯು ತನ್ನ ಪ್ರಾಬಲ್ಯವನ್ನು ಸಾಧಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Made-in-India Kia Sonet To Be launched In Indonesia. Read In Kannada.
Story first published: Monday, November 9, 2020, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X