ಇದೇ ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳ ಸಂಖ್ಯೆ

ಭಾರತದಲ್ಲಿ ಕಾರು ಮಾರಾಟ ಆರಂಭಿದ ಕೆಲವೇ ದಿನಗಳಲ್ಲಿ ಮಹತ್ವದ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಸದ್ಯ ಪ್ರಮುಖ ಕಾರು ಮಾರಾಟ ಕಂಪನಿಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರಾಟ ಮಳಿಗೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಲಿದೆ.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ನಂತರ ನಾಲ್ಕನೇ ಸ್ಥಾನದಲ್ಲಿರುವ ಕಿಯಾ ಮೋಟಾರ್ಸ್ ಕಂಪನಿಯು ಮಹೀಂದ್ರಾ, ಹೋಂಡಾ, ಟೊಯೊಟಾ ಕಂಪನಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳೊಂದಿಗೆ ಪ್ರಮುಖ ನಗರಗಳಲ್ಲಿ ಮತ್ತಷ್ಟು ಮಾರಾಟ ಸಂಖ್ಯೆ ಹೆಚ್ಚಿಸುವ ಯೋಜನೆಯಲ್ಲಿದೆ.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಕಿಯಾ ಮೋಟಾರ್ಸ್ ಕಂಪನಿಯು ಸದ್ಯ ದೇಶದ ಪ್ರಮುಖ 170 ನಗರಗಳಲ್ಲಿ 250 ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸ ವರ್ಷದ ಆರಂಭದಲ್ಲಿ ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳ ಸಂಖ್ಯೆ 300ಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಮಾಹಾನಗರಗಳು ಸೇರಿದಂತೆ ಟೈರ್ 1, ಟೈರ್ 2 ನಗರಗಳಲ್ಲಿ ಹೊಸದಾಗಿ 60ಕ್ಕೂ ಹೆಚ್ಚು ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳು ನಿರ್ಮಾಣದ ಹಂತದಲ್ಲಿದ್ದು, ಹೊಸ ವರ್ಷಾಚಾರಣೆ ವೇಳೆಗೆ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಸಿದ್ದತೆ ನಡೆಸಲಾಗಿದೆ.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಇನ್ನು ಕಿಯಾ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟವನ್ನು ತನ್ನದಾಗಿಸಿಕೊಂಡಿದ್ದು, ಕಳೆದ ವರ್ಷದ ನವೆಂಬರ್ ಅವಧಿಯ ಕಾರು ಮಾರಾಟಕ್ಕಿಂತಲೂ ಈ ವರ್ಷದ ನವೆಂಬರ್‌ನಲ್ಲಿ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ. ಕಿಯಾ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಯಲ್ಲಿ ಶೇ.50ರಷ್ಟು ಬೆಳವಣಿಗೆಯೊಂದಿಗೆ 21,022 ಯುನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ಅವಧಿಯಲ್ಲಿ 14,005 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಸೆಲ್ಟೊಸ್ ಜೊತೆ ಇದೀಗ ಸೊನೆಟ್ ಕಾರು ಮಾರಾಟ ಮಾಡುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಸೆಪ್ಟೆಂಬರ್ 18ರಂದು ಬಿಡುಗಡೆಗೊಂಡಿದ್ದ ಸೊನೆಟ್ ಕಾರು ಕೂಡಾ ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ. ಸೊನೆಟ್ ಕಳೆದ ತಿಂಗಳು ಬರೋಬ್ಬರಿ 11,417 ಯನಿಟ್ ಮಾರಾಟಗೊಳಿಸಲಾಗಿದ್ದು, ಸೆಲ್ಟೊಸ್ ಕಾರು ಮಾದರಿಯು ಕಳೆದ ತಿಂಗಳು ಒಟ್ಟು 9,205 ಯುನಿಟ್ ಮಾರಾಟಗೊಂಡಿದೆ.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಇನ್ನುಳಿದ ಕಾರ್ನಿವಾಲ್ ಎಂಪಿವಿ ಕಾರು ಕೂಡಾ ದುಬಾರಿ ಬೆಲೆ ನಡುವೆಯೂ 400 ಯುನಿಟ್ ಮಾರಾಟಗೊಂಡಿದ್ದು, ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕಿಯಾ ಮೋಟಾರ್ಸ್ ಕಂಪನಿಗೆ ಭಾರೀ ಪ್ರಮಾಣದ ಲಾಭ ತಂದುಕೊಡುವ ನೀರಿಕ್ಷೆಯಲ್ಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಭಾರತದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.89 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವರ್ಷಾಂತ್ಯಕ್ಕೆ 300ರ ಗಡಿ ದಾಟಲಿದೆ ಕಿಯಾ ಮಾರಾಟ ಮಳಿಗೆಗಳ ಸಂಖ್ಯೆ

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Kia To Increase Dealership Count To 300 By End Of Year. Read in Kannada.
Story first published: Tuesday, December 15, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X