ಸೆಲ್ಟೊಸ್ ಕಾರು ಖರೀದಿ ಮೇಲೆ ವಿಶೇಷ ಲೋನ್ ಆಫರ್ ಪರಿಚಯಿಸಿದ ಕಿಯಾ ಮೋಟಾರ್ಸ್
ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಆಟೋ ಕಂಪನಿಗಳು ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಆಟೋ ಕಂಪನಿಗಳು ಹಲವು ಹೊಸ ಆಫರ್‌ಗಳನ್ನು ಘೋಷಿಸುತ್ತಿವೆ.

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲಾ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಕಿಯಾ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಹೊಸ ಕುಸಿದಿರುವ ಕಾರು ಮಾರಾಟಕ್ಕೆ ಚೇತರಿಕೆ ನೀಡಲಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರನ್ನು ಸೆಳೆಯಲು ಕೆಲವು ಆಕರ್ಷಕ ಯೋಜನೆಗಳನ್ನು ರೂಪಿಸಿದೆ.

ಲಾಕ್‌ಡೌನ್‌ಗೂ ಮೊದಲ ವಾಹನಗಳ ಖರೀದಿಗೆ ಮುಂಗಡ ಪಾವತಿಸಿದ್ದ ಗ್ರಾಹಕರು ಇದೀಗ ವಾಪಸ್ ಪಡೆದುಕೊಳ್ಳುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದ್ದು, ವಾಹನ ಮಾರಾಟಕ್ಕೆ ವಿನಾಯ್ತಿ ಸಿಕ್ಕರೂ ಇದೀಗ ಗ್ರಾಹಕರು ಮಾರಾಟ ಮಳಿಗೆಗಳತ್ತ ಸುಳಿಯುತ್ತಿಲ್ಲ.

ಇದರಿಂದ ಆತಂಕದಲ್ಲಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಹಲವಾರು ಸರಳ ಹಣಕಾಸು ಸೇವೆಗಳನ್ನು ನೀಡಲು ಮುಂದಾಗಿದ್ದು, ಕಿಯಾ ಕೂಡಾ ಸೆಲ್ಟೊಸ್ ಕಾರು ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ನೀಡಿದೆ.

ಸೆಲ್ಟೊಸ್ ಕಾರು ಖರೀದಿಯ ಮಾಡಿದ ಮೊದಲ ಆರು ತಿಂಗಳು 1 ಲಕ್ಷಕ್ಕೆ ರೂ.777 ಇಎಂಐ ಅನ್ವಯವಾಗುವಂತೆ ಇಎಂಐ ವಿಧಿಸುತ್ತಿದ್ದು, 7ನೇ ತಿಂಗಳಿನಿಂದ ಸಾಮಾನ್ಯ ಮಾದರಿಯಲ್ಲಿ ಇಎಂಐ ವಿಧಿಸಲಿದೆ. ಇದು ಲಾಕ್‌ಡೌನ್ ಸಂಕಷ್ಟದಿಂದ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಅನುಕೂಲವಾಗಲಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಜೊತೆಗೆ ಹೊಸ ಕಾರು ಖರೀದಿ ಮೇಲೆ ಶೇ.100ರಷ್ಟು ಆನ್-ರೋಡ್ ಸಾಲ ಸೌಲಭ್ಯ, 8 ವರ್ಷಗಳ ದೀರ್ಘಾವಧಿಯ ಸಾಲ ಮತ್ತು ಆಯ್ದ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಗ್ಯಾರಂಟಿ ಆಫರ್ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 2020ರ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸೆಲ್ಟೊಸ್ ಕಾರು ಗ್ರಾಹಕರ ಬೇಡಿಕೆಯೆಂತೆ ಬಿಎಸ್-6 ಪ್ರೇರಿತ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.


Click it and Unblock the Notifications








