Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುರಕ್ಷಿತ ಕಾರು ಮಾದರಿಯಾಗಿ ಹೊರಹೊಮ್ಮಿದ ಕಿಯಾ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ
ಹೊಸ ಕಾರು ಮಾರಾಟವು ಉತ್ತಮವಾಗಿರಲು ಬೆಲೆ ಮತ್ತು ಮೈಲೇಜ್ ಮಾತ್ರ ಮುಖ್ಯ ಅಂಶವಲ್ಲ. ಪ್ರಯಾಣಿಕ ಸುರಕ್ಷತೆ ಕೂಡಾ ಅತಿ ಮುಖ್ಯವಾದ ವಿಚಾರವಾಗಿದ್ದು, ಕಿಯಾ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ ಅಂಕಗಳನ್ನು ಗಿಟ್ಟಿಸಿಕೊಂಡಿದೆ.

ಕಿಯಾ ಮೋಟಾರ್ಸ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಾರು ಮಾರಾಟ ಜಾಲವನ್ನು ಹೊಂದಿದ್ದು, ತನ್ನದೆ ಆದ ವೈಶಿಷ್ಟ್ಯತೆ, ಗುಣಮಟ್ಟ ಮತ್ತು ವಿನ್ಯಾಸಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ. ಕಿಯಾ ಪ್ರಮುಖ ಕಾರು ಮಾದರಿಗಳಲ್ಲಿ ಸೆಲ್ಟೊಸ್ ಕೂಡಾ ಪ್ರಮುಖ ಮಾದರಿಯಾಗಿದ್ದು, ಅಮೆರಿಕದಲ್ಲಿ ಮಾರಾಟಗೊಳ್ಳುವ ಸೆಲ್ಟೊಸ್ ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.

ಅಮೆರಿಕದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಇನ್ಸುರೆನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೆ ಸೇಫ್ಟಿ(IIHS) ಸಂಸ್ಥೆಯು ರಸ್ತೆ ಅಪಘಾತಗಳನ್ನು ತಗ್ಗಿಸಲು ಮತ್ತು ವಾಹನ ಸುರಕ್ಷಾ ಕ್ರಮಗಳನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪ್ರಯಾಣಿಕ ಕಾರುಗಳ ಸುರಕ್ಷತೆಯನ್ನು ನಿರ್ಧರಿಸಲು ಕ್ರ್ಯಾಶ್ ಟೆಸ್ಟಿಂಗ್ ಹಮ್ಮಿಕೊಳ್ಳುವುದರ ಜೊತೆಗೆ ಅತ್ಯುತ್ತಮ ಸುರಕ್ಷಾ ಕಾರು ಮಾದರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ.

ಐಐಹೆಚ್ಎಸ್ ಬಿಡುಗಡೆ ಮಾಡುವ ಪಟ್ಟಿ ಆಧರಿಸಿಯೇ ಯುಎಸ್ಎ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಭವಿಷ್ಯ ನಿರ್ಧಾರವಾಗಲಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಸಹ ಹಲವಾರು ವಿಶೇಷತೆ ಮಾರಾಟ ಮಾಡುತ್ತಿದೆ.

ಐಐಹೆಚ್ಎಸ್ ಸಂಸ್ಥೆಯು ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕಿಯಾ ಸೆಲ್ಟೊಸ್ ಮಾದರಿಯು ಉತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದರೂ ಕೇವಲ ಹೆಡ್‌ಲ್ಯಾಂಪ್ ಗುಣಮಟ್ಟದ ವಿಚಾರವಾಗಿ ಹೆಚ್ಚು ಸುರಕ್ಷಿತ ಕಾರು ಮಾದರಿಗಳ ಪಟ್ಟಿಯಿಂದ ಹೊರಗುಳಿವಂತೆ ಮಾಡಿದೆ.

ವಿವಿಧ ಹಂತದ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲು ಯಶಸ್ವಿಯಾಗಿದ್ದರೂ ಕೂಡಾ ಯುಎಸ್ಎ ಹೈವೇ ಸೆಫ್ಟಿ ನಿಯಮ ಅನುಸಾರಕ್ಕೆ ಅನುಗುಣವಾಗಿ ಹೆಡ್‌ಲ್ಯಾಂಪ್ ಪ್ರಕಾಶಮಾನವು ಹೊರಸೂಸಲು ವಿಫಲವಾಗಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್
ಸೆಲ್ಟೊಸ್ ಕಾರಿನಲ್ಲಿ ಅತ್ಯುತ್ತಮ ಸುರಕ್ಷಾ ಅಂಶಗಳನ್ನು ಜೋಡಣೆ ಮಾಡಿದ್ದರೂ ಕೂಡಾ ಎಲ್ಇಡಿ ಹೆಡ್‌ಲ್ಯಾಂಪ್ ಸೌಲಭ್ಯದ ವಿಚಾರವಾಗಿ ಹಿನ್ನಡೆ ಅನುಭವಿಸಿದ್ದು, ಇನ್ಸುರೆನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೆ ಸೇಫ್ಟಿ(IIHS) ಸಂಸ್ಥೆಯು ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ.

ಸದ್ಯ ಭಾರತದಲ್ಲೂ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಸೆಲ್ಟೊಸ್ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಗ್ರಾಹಕರ ಆಯ್ಕೆ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ಉತ್ಪಾದನೆಯಾಗಿರುವ ಸೆಲ್ಟೊಸ್ ಕ್ರ್ಯಾಶ್ ಟೆಸ್ಟ್ ಇದುವರೆಗೂ ನಡೆದಿಲ್ಲ.

ಶೀಘ್ರದಲ್ಲೇ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸೆಲ್ಟೊಸ್ ಮಾದರಿಯ ಕ್ರ್ಯಾಶ್ ಟೆಸ್ಟಿಂಗ್ ಮಾದರಿಯು ಪರೀಕ್ಷೆ ನಡೆಯುವ ಸಾಧ್ಯತೆಗಳಿದ್ದು, ಭಾರತದಲ್ಲಿ ಗರಿಷ್ಠ ಅಂಕಗಳೊಂದಿಗೆ ಗರಿಷ್ಠ ಸುರಕ್ಷಾ ಕಾರು ಮಾದರಿಯಾಗಿ ಹೊರಹೊಮ್ಮುವ ವಿಶ್ವಾಸದಲ್ಲಿದೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಹೊಸ ಕಾರುಗಳ ಸುರಕ್ಷಾ ಗುಣಮಟ್ಟವು ಕಾರು ಅಪಘಾತವಾದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವುದರ ಮೇಲೆ ನಿರ್ಧಾರವಾಗಲಿದ್ದು, ಗರಿಷ್ಠ 5 ಅಂಕಗಳಲ್ಲಿ 3 ಅಂಕಗಳನ್ನು ಪಡೆದುಕೊಳ್ಳಲೇಬೇಕು. ಒಂದು ವೇಳೆ 3ಕ್ಕಿಂತ ಕಡಿಮೆ ರೆಟಿಂಗ್ಸ್ ಬಂದಲ್ಲಿ ಕಾರು ಕಳಪೆ ಎಂದು ನಿರ್ಧರಿಸಿಲಿದ್ದು, ಮಾರಾಟಕ್ಕೂ ಕೂಡಾ ಅವಕಾಶ ನೀಡಲಾಗುತ್ತಿಲ್ಲ. ಇದಕ್ಕಾಗಿ ಬಹುತೇಕ ಆಟೋ ಕಂಪನಿಗಳು ಪ್ರಯಾಣಿಕ ಸುರಕ್ಷತೆ ಹೆಚ್ಚು ಗಮನಹರಿಸುತ್ತಿವೆ.