ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಹೆಚ್ಚುತ್ತಿರುವ ವಾಹನ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಜನವರಿ 1ರಿಂದಲೇ ಅನ್ವಯವಾಗುವಂತೆ ಎಕ್ಸ್‌ಶೋರೂಂ ದರದಲ್ಲಿ ಶೇ.2ರಿಂದ ಶೇ.3 ರಷ್ಟು ಏರಿಕೆ ಮಾಡಿದ್ದು, ಕಿಯಾ ಮೋಟಾರ್ಸ್ ಸಂಸ್ಥೆಯು ಸಹ ಇದೇ ಮೊದಲ ಬಾರಿಗೆ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಹೊಸ ದರ ಪಟ್ಟಿ ಪ್ರಕಾರ, ಕಿಯಾ ಸೆಲ್ಟೊಸ್ ಕಾರು ರೂ.20 ಸಾವಿರದಿಂದ ರೂ.35 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದಿದ್ದು, ಬೆಲೆ ಹೆಚ್ಚಳ ನಂತರ ಸೆಲ್ಟೊಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.69 ಲಕ್ಷದಿಂದ ರೂ.9.89 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ದರವು ಇಂದಿನಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದ್ದು, ಡಿಸೆಂಬರ್ 31ರ ಒಳಗಾಗಿ ಬುಕ್ಕಿಂಗ್ ಮಾಡಿರುವ ಎಲ್ಲಾ ಗ್ರಾಹಕರಿಗೂ ಹಳೆಯ ದರದಲ್ಲೇ ಕಾರು ವಿತರಣೆಯಾಗಲಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಇನ್ನು ಸೆಲ್ಟೊಸ್ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಗರಿಷ್ಠ ಬೇಡಿಕೆಯೊಂದಿಗೆ ನಂ.1 ಸ್ಥಾನಕ್ಕೇರಿದ್ದು, ಅತಿ ಕಡಿಮೆ ಅವಧಿಯಲ್ಲಿ 45 ಸಾವಿರ್ ಯುನಿಟ್ ಮಾರಾಟ ಮಾಡುವ ಮೂಲಕ ಅಚ್ಚರಿಯ ಬೆಳವಣೆಗೆ ಸಾಧಿಸಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿರುವ ಸೆಲ್ಟೊಸ್ ಕಾರು ಆಕರ್ಷಕ ಬೆಲೆಗಳೊಂದಿಗೆ ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಆಕರ್ಷಕ ಬೆಲೆ, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕಿಯಾ ಸೆಲ್ಟೊಸ್ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.89 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 17.34 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಕಿಯಾ ಸೆಲ್ಟೊಸ್ ಬೆಲೆ ಹೆಚ್ಚಳ- ಇಂದಿನಿಂದಲೇ ಹೊಸ ದರ ಅನ್ವಯ

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಕಿಯಾ ಬಹುನೀರಿಕ್ಷಿತ ಕಾರ್ನಿವಾಲ್ ಎಂಪಿವಿ ಕಾರು ಆವೃತ್ತಿಯು ಮುಂದಿನ ತಿಂಗಳು ಫೆಬ್ರುವರಿ 5ಕ್ಕೆ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಖರೀದಿಗೆ ಸಾವಿರಾರು ಗ್ರಾಹಕರು ಈಗಾಗಲೇ ತುದಿಗಾಲ ಮೇಲೆ ನಿಂತಿದ್ದಾರೆ. ಮೊದಲ ಹಂತದಲ್ಲೇ ಹೊಸ ಕಾರು ಪಡೆದುಕೊಳ್ಳಲು ಮುಂದಾಗಿರುವ ಹಲವು ಗ್ರಾಹಕರು ಅಧಿಕೃತ ಬುಕ್ಕಿಂಗ್ ಆರಂಭವಾಗುವುದಕ್ಕೂ ಆಯ್ದ ಕಿಯಾ ಡೀಲರ್ಸ್‌ಗಳಲ್ಲಿ ಮುನ್ನವೇ ಮುಂಗಡ ಪಾವತಿಸುತ್ತಿದ್ದಾರೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಅಧಿಕೃತ ಬುಕ್ಕಿಂಗ್ ಆರಂಭವಾಗುವುದಕ್ಕೂ ಮುನ್ನವೇ ಸುಮಾರು ಮೂರು ಸಾವಿರ ಗ್ರಾಹಕರು ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಕಾರ್ನಿವಾಲ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಇನ್ನು ಮಲ್ಟಿ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಕಾರ್ನಿವಾಲ್ ಕಾರು ಮಾದರಿಯು ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿದ್ದು, ಭಾರತದಲ್ಲೂ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಕಾರ್ನಿವಾಲ್ ಕಾರು ವಿದೇಶಿ ಮಾರುಕಟ್ಟೆಗಳಲ್ಲಿ 11 ಸೀಟರ್ ಮತ್ತು 9 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಕೆಲವು ಬದಲಾವಣೆಯೊಂದಿಗೆ ಬಿಡುಗಡೆಯಾಗಲಿದ್ದು, 6 ಸೀಟರ್, 7 ಸೀಟರ್ ಮತ್ತು 8 ಸೀಟರ್ ಆವೃತ್ತಿಯೊಂದಿಗೆ ಮಾರಾಟಕ್ಕೆ ಲಭ್ಯವಾಗಲಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

6 ಸೀಟರ್ ಮಾದರಿಯು ಪ್ರತ್ಯೇಕವಾಗಿ 2+2+2 ಆಸನ ವ್ಯವಸ್ಥೆಯನ್ನು ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಮತ್ತು 8 ಸೀಟರ್ ಮಾದರಿಯು 2+3+3 ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ವಿವಿಧ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಜೊತೆಗೆ ಹೊಸ ಕಾರಿನಲ್ಲಿ ಕೆಲವು ಫೀಚರ್ಸ್‌ಗಳನ್ನು ಮಾಡಿಫೈ ಕೂಡಾ ಮಾಡಿಕೊಳ್ಳಬಹುದಾಗಿದ್ದು, ಡ್ಯುಯಲ್ ಸನ್‌ರೂಫ್ ಮತ್ತು ರೂಫ್ ಬಾಕ್ಸ್ ಸೌಲಭ್ಯವನ್ನು ಹೆಚ್ಚುವರಿ ಶುಲ್ಕದೊಂದಿಗೆ ಖರೀದಿ ಮಾಡಬೇಕಾಗುತ್ತದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಜೊತೆಗೆ ಎಂಪಿವಿ ಕಾರುಗಳ ಮಾರಾಟ ವಿಭಾಗದಲ್ಲಿ ಸದ್ಯ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯು ರೂ.25 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಕಾರ್ನಿವಾಲ್ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇದ್ದು ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಎಂಜಿನ್ ಸಾಮರ್ಥ್ಯ

ಕಿಯಾ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಹಾಗೆಯೇ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗಿಂತಲೂ ಉತ್ತಮ ಪ್ರೀಮಿಯಂ ಸೌಲಭ್ಯ ಹೊಂದಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸಹ ಈ ಕಾರಿನಲ್ಲಿದೆ.

ಕಿಯಾ ಕಾರ್ನಿವಾಲ್ ಖರೀದಿಗೆ ಬುಕ್ಕಿಂಗ್ ಶುರು

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ನಂತರ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
English summary
Kia Seltos Price Hike In India By Up To Rs 35,000. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X