ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಕಿಯಾ ಮೋಟಾರ್ಸ್ ಕಂಪನಿಯು ನಿನ್ನೆಯಷ್ಟೇ ತನ್ನ ಬಹುನೀರಿಕ್ಷಿತ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಹೊಸ ಕಾರಿನಲ್ಲಿ ನೀಡಲಾಗಿರುವ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯಾದ ಜಿಟಿಎಕ್ಸ್ ಪ್ಲಸ್ ಮಾದರಿಯ ಬೆಲೆ ಮಾಹಿತಿ ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಸೊನೆಟ್ ಕಾರಿನಲ್ಲಿ ಸದ್ಯ ಪೆಟ್ರೋಲ್ ಹೈಎಂಡ್, ಟರ್ಬೋ ಪೆಟ್ರೋಲ್ ಹೈಎಂಡ್ ಮತ್ತು ಡೀಸೆಲ್ ಮ್ಯಾನುವಲ್ ಹೈಎಂಡ್ ಮಾದರಿಯ ಬೆಲೆಯನ್ನು ಪ್ರಕಟ ಮಾಡಲಾಗಿದ್ದು, ಡೀಸೆಲ್ ಆಟೋಮ್ಯಾಟಿಕ್ ಹೈ ಎಂಡ್ ಮಾದರಿಯ ಬೆಲೆ ವಿವರಗಳನ್ನು ಇದುವರೆಗೂ ಪ್ರಕಟಗೊಳಿಸಿಲ್ಲ, ಮಾಹಿತಿಗಳ ಪ್ರಕಾರ ಡೀಸೆಲ್ ಆಟೋಮ್ಯಾಟಿಕ್ ಹೈ ಎಂಡ್ ಮಾದರಿಯು ಅಭಿವೃದ್ದಿಯಲ್ಲಿ ಇನ್ನು ಕೆಲವು ತಾಂತ್ರಿಕ ಅಂಶಗಳ ಜೋಡಣೆ ಬಾಕಿಯಿದ್ದು, ಈ ತಿಂಗಳಾಂತ್ಯಕ್ಕೆ ಡೀಸೆಲ್ ಆಟೋಮ್ಯಾಟಿಕ್ ಹೈ ಎಂಡ್ ಮಾದರಿಯ ಬೆಲೆಯು ಕೂಡಾ ಲಭ್ಯವಾಗಲಿದೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಹೊಸ ಕಾರಿನ ಬೆಲೆಯನ್ನು ಸದ್ಯಕ್ಕೆ ತಾಂತ್ರಿಕ ಅಂಶಗಳು ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಬೆಲೆ ಪ್ರಕಟಗೊಳ್ಳಬೇಕಿರುವ ಡೀಸೆಲ್ ಜಿಟಿಎಕ್ಸ್ ಪ್ಲಸ್ ಮಾದರಿಯು ಟರ್ಬೋ ಪೆಟ್ರೋಲ್ ಮತ್ತು ಡೀಸೆಲ್ ಮ್ಯಾನುವಲ್ ಹೈಎಂಡ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದ್ದು, ಎಕ್ಸ್‌ಶೋರೂಂ ಪ್ರಕಾರ ಹೊಸ ಮಾದರಿಯು ರೂ.12.30 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಜಿಟಿ-ಲೈನ್ ಮತ್ತು ಟೆಕ್ ಲೈನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರು ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಕಿಯಾ ಸೊನೆಟ್ ಕಾರು ಮಾದರಿಯಲ್ಲಿ ಮೂರು ಮಾದರಿಯ ಎಂಜಿನ್ ಆಯ್ಕೆ ನೀಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯನ್ನು ನೀಡಲಾಗಿದೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 5-ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ ಮತ್ತು115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಮತ್ತು ಹೈ ಎಂಡ್ ಎಂಡ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯು 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಇನ್ನು ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿರುವ 1.0-ಲೀಟರ್ ತ್ರಿ ಸಿಲಿಂಡರ್ ಟರ್ಬೋ ಎಂಜಿನ್ ಮಾದರಿಯು 6-ಸ್ಪೀಡ್ ಇಂಟಲಿಜೆಂಟ್ ಮ್ಯಾನುವಲ್(ಐಎಂಟಿ) ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ ಆಯ್ಕೆಯೊಂದಿಗೆ 120-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಡೀಸೆಲ್ ಆವೃತ್ತಿಯು ಪ್ರತಿ ಲೀಟರ್‌ಗೆ 24.1ಕಿ.ಮೀ, ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯು 19ಕಿ.ಮೀ, ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು 18.4ಕಿ.ಮೀ ಮತ್ತು ಟರ್ಬೋ ಪೆಟ್ರೋಲ್ ಮಾದರಿಯು 18.2ಕಿ.ಮೀ ಮೈಲೇಜ್ ಹಿಂದಿರಲಿಸಲಿವೆ.

ಶೀಘ್ರದಲ್ಲೇ ಬಹಿರಂಗವಾಗಲಿದೆ ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸೆಲ್ ಎಟಿ ಕಾರಿನ ಬೆಲೆ

ಹೊಸ ಸೊನೆಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Article Published On: Saturday, September 19, 2020, 20:52 [IST]
English summary
Kia Sonet Automatic Top Variants Prices To Be Announced Very Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+