ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾದ ಸೆಲ್ಟೋಸ್ ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಯಶ್ವಸಿಯಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಕಿಯಾ ಸೆಲ್ಟೋಸ್ ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿ ದಾಖಲೆಗಳ ಸರದಾರ ಆಗಿದೆ. ಸೆಲ್ಟೋಸ್ ನಂತರ ಕಿಯಾ ಮೋಟಾರ್ಸ್ ಎಂಪಿವಿ(ಮಲ್ಟಿ ಪ್ಯಾಸೆಂಜರ್ ವೆಹಿಕಲ್) ವಿಭಾಗದಲ್ಲಿ ಕಿಯಾ ಕಾರ್ನಿವಾಲ್ ಕಾರನ್ನು ಬಿಡುಗಡೆಗೊಳಿಸಿದರು. ಈ ಕಾರ್ನಿವಾಲ್ ಕಾರು ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದ್ದ ಕಿಯಾ ಮೋಟಾರ್ಸ್ ಕಂಪನಿಯು ಇದುವರೆಗೆ 5 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ಇದೀಗ ಕಿಯಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಇದರಲ್ಲಿ ಸೊನೆಟ್ ಕಾಂಪ್ಯಾಕ್ಟ್‍ ಎಸ್‍ಯುವಿಯು ಒಂದಾಗಿದೆ. ಈ ಹೊಸ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ ಕಳೆದ ತಿಂಗಳಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದರು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದಿದ್ದಾರೆ. ಮಧ್ಯಮ ಗಾತ್ರದ ಕಾರುಗಳ ಜೊತೆಗೆ ಐಷಾರಾಮಿ ಕಾರುಗಳನ್ನು ಸಹ ಬಿಡುಗಡೆ ಮಾಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಕಿಯಾ ಹೊಸ ಕಾರುಗಳ ಪೈಕಿ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಈ ಹೊಸ ಕಾರನ್ನು ಮುಂದಿನ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಈ ಹೊಸ ಕಾರು ಸ್ಪೋಟಿ ಲುಕ್ ಜೊತೆಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರಲಿದೆ. ಸೊನೆಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟೊನಿಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಈ ಹೊಸ ಕಾರಿನಲ್ಲಿ ಒಟ್ಟು 4 ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ 1.2-ಲೀಟರ್ ಪೆಟ್ರೋಲ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಮತ್ತು 1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಇದರೊಂದಿಗೆ 1.5-ಲೀಟರ್ ಟರ್ಬೋಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋ ಚಾರ್ಜ್ಡ್ ತ್ರೀ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕಿಯಾ ಸೊನೆಟ್

ಹೊಸ ಕಿಯಾ ಸೊನೆಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Tuesday, March 24, 2020, 12:17 [IST]
English summary
Kia Sonet India launch in August 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+