ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಸೊನೆಟ್
ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಕಿಯಾ ಮೋಟಾರ್ಸ್ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ತನ್ನ ಮೊದಲ ಎಸ್‍ಯುವಿಯಾದ ಸೆಲ್ಟೋಸ್ ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ.

ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಕಿಯಾ ಸೊನೆಟ್ ಕೂಡ ಅದೇ ಹಾದಿಯಲ್ಲಿದೆ ಎಂದು ತೋರುತ್ತದೆ. 2020ರ ಅಕ್ಟೋಬರ್ ತಿಂಗಳಲ್ಲಿ ಕಿಯಾ ಸೊನೆಟ್ 11,721 ಯುನಿಟ್ ಗಳನ್ನು ಮಾರಾಟಗೊಳಿಸಿವೆ. ಸೊನೆಟ್ ಮಾಸಿಕ ಮಾರಾಟದಲ್ಲಿ ಶೇ.26.49 ಬೆಳವಣಿಗೆಯನ್ನು ಸಾಧಿಸಿದೆ. ಈ ವರ್ಷ ಬಿಡುಗಡೆಯಾಗಿರುವುದರಿದ ವರ್ಷದಿಂದ ವರ್ಷಕ್ಕೆ ಯಾವುದೇ ಮಾರಾಟ ಅಂಕಿಅಂಶಗಳಿಲ್ಲ.

2020ರ ಅಕ್ಟೋಬರ್ ತಿಂಗಳಲ್ಲಿ ಸೊನೆಟ್ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾದ ವಾಹನವಲ್ಲ, ಏಕೆಂದರೆ ಮಾರುತಿ ವಿಟಾರಾ ಬ್ರೆಝಾ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ತಿಂಗಳಲ್ಲಿ ಮಾರುತಿ ವಿಟಾರಾ ಬ್ರೆಝಾವನ್ನು ಮಾರಾಟದಲ್ಲಿ ಓವರ್ ಟೆಕ್ ಮಾಡುವ ಸಾಧ್ಯತೆಗಳಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಆದರೆ ಸೊನೆಟ್ ಸಬ್- 4-ಮೀಟರ್ ಎಸ್‍ಯುವಿಯು ಇತರ ಎಲ್ಲ ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್, ಟೊಯೋಟಾ ಅರ್ಬನ್ ಕ್ರೂಸರ್, ಮತ್ತು ಹೋಂಡಾ ಡಬ್ಲ್ಯುಆರ್-ವಿಗಳನ್ನು ಹಿಂದಿಕ್ಕಿ ತನ್ನ ವಿಭಾಗದ ಮಾರಾಟ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಕಿಯಾ ಸೊನೆಟ್ ಬಿಡುಗಡೆಗೊಂಡು ಒಂದು ತಿಂಗಳಲ್ಲೇ ಬರೊಬ್ಬರಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿವೆ. ಇದರಿಂದ ಭಾರತದಲ್ಲಿ ಕಿಯಾ ಸೊನೆಟ್ ಎಸ್‍ಯುವಿಯ ವೈಟಿಂಗ್ ಪಿರೇಡ್ ಹೆಚ್ಚಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ 1.2-ಲೀಟರ್ ಯುನಿಟ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಟಾಪ್ ಸ್ಪೆಕ್ 1.0-ಲೀಟರ್ ಯುನಿಟ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.

ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಿಯಾ ಸೊನೆಟ್ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.


Click it and Unblock the Notifications








