ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಮಾರುತಿ ವಿಟಾರಾ ಬ್ರೆಝಾವನ್ನು ಹಿಂದಿಕ್ಕಿದ ಕಿಯಾ ಸೊನೆಟ್
ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍ಯುವಿಯಾದ ಸೆಲ್ಟೋಸ್ ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಇದಾದ ಬಳಿಕ ಇತ್ತೀಚೆಗೆ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ 12 ದಿನಗಳಲ್ಲಿ 9,266 ಯುನಿಟ್‍ಗಳನ್ನು ಮಾರಾಟವಾಗಿವೆ. ಕಿಯಾ ಸೊನೆಟ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಪ್ರತಿಸ್ಪರ್ಧಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2020ರ ಸೆಪ್ಟಂಬರ್ ತಿಂಗಳ ಮಾರಾಟದಲ್ಲಿ ಹಿಂದಿಕ್ಕಿದೆ. 2020ರ ಸೆಪ್ಟಂಬರ್ ತಿಂಗಳಲ್ಲಿ 9,153 ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಗಳು ಮಾರಾಟವಾಗಿವೆ.

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಗಿಂತ ಸೊನೆಟ್ 100ಕ್ಕೂ ಹೆಚ್ಚು ಯುನಿಟ್‍ಗಳು ಹೆಚ್ಚು ಮಾರಾಟವಾಗುವ ಮೂಲಕ ಹಿಂದಿಕ್ಕಿದೆ. ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು.ರೂ.7.1 ಲಕ್ಷಗಳಾಗಿದೆ. ಕಿಯಾ ಸೊನೆಟ್ ಬಿಡುಗಡೆ ಸಮಯದಲ್ಲಿ ಕಂಪನಿಯು ಒಟ್ಟು 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಅನ್ನು ಸ್ವೀಕರಿಸಿದೆ. ಪ್ರೀ-ಬುಕ್ಕಿಂಗ್ ಪ್ರಾರಂಭವಾದ ಎರಡನೇ ದಿನದಿಂದ ದಿನಕ್ಕೆ ಸರಾಸರಿ 1000 ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ.

ಕಿಯಾ ಸೊನೆಟ್ ಟಾಪ್ ಸ್ಪೆಕ್ ಜಿಟಿಎಕ್ಸ್ ಪ್ಲಸ್ ಮಾದರಿಗಳಿಗೆ ಹೆಚ್ಚಿನ ಬುಕ್ಕಿಂಗ್ ಗಳನ್ನು ಸ್ವೀಕರಿಸಲಾಗಿದೆ. ಜಿಟಿ-ಲೈನ್ ರೂಪಾಂತರದ ಕಾಯುವ ಅವಧಿಯು ಪ್ರಸ್ತುತ 4 ರಿಂದ 5 ವಾರಗಳ ನಡುವೆ ಇದ್ದರೆ, ಟೆಕ್-ಲೈನ್ ಮಾದರಿಗಳು 8 ರಿಂದ 9 ವಾರಗಳ ಸ್ವಲ್ಪ ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿವೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮುಂಬರುವ ವಾರಗಳಲ್ಲಿ ಉತ್ಪಾದನೆ ಹೆಚ್ಚಾಗುವುದರಿಂದ ವೈಟಿಂಗ್ ಪಿರೇಡ್ ಕಡಿಮೆಯಾಗುತ್ತದೆ. ಜಿಟಿ-ಲೈನ್ ರೂಪಾಂತರದ ವೈಟಿಂಗ್ ಪಿರೇಡ್ 4 ರಿಂದ 5 ವಾರಗಳ ನಡುವೆ ಇದ್ದರೆ, ಟೆಕ್-ಲೈನ್ ರೂಪಾಂತರಗಳಿಗೆ 8 ರಿಂದ 9 ವಾರಗಳ ವೈಟಿಂಗ್ ಪಿರೇಡ್ ಹೊಂದಿದೆ.

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಸುಮಾರು 1.5 ಲಕ್ಷ ಯುನಿಟ್‌ಗಳನ್ನು ಮೊದಲ ವರ್ಷದೊಳಗೆ ಸ್ಥಳೀಯವಾಗಿ ಮತ್ತು ರಫ್ತಿನ ಮೂಲಕ ಮಾರಾಟ ಮಾಡುವ ಗುರಿ ಹೊಂದಿದೆ. ಕಿಯಾ ಮೋಟಾರ್ಸ್ ಭಾರತದಿಂದ 70 ಕ್ಕೂ ಹೆಚ್ಚು ದೇಶಗಳಿಗೆ ಸೋನೆಟ್ ರಫ್ತು ಮಾಡಲಿದ್ದು, ಬಿಡುಗಡೆಯಾದ ಮೊದಲ ವರ್ಷದೊಳಗೆ 50,000 ಯುನಿಟ್‌ಗಳನ್ನು ರಫ್ತು ಮಾಡಲಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ 1.2-ಲೀಟರ್ ಯುನಿಟ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಟಾಪ್ ಸ್ಪೆಕ್ 1.0-ಲೀಟರ್ ಯುನಿಟ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಗ್ರಾಹಕರು ಕಿಯಾ ಕಾರುಗಳ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫಿಧಾ ಆಗಿದ್ದಾರೆ. ಕಿಯಾ ಮೋಟಾರ್ಸ್ ಹಲವು ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಅದು ಕಿಯಾ ಸೊನೆಟ್ ಸ್ಪೆಷಾಲಿಟಿ ಎಂದು ಹೇಳಬಹುದು.


Click it and Unblock the Notifications








