ಉತ್ಪಾದನಾ ಆವೃತ್ತಿಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಕಿಯಾ ಸೊನೆಟ್
ಕಿಯಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಕಾರು ಮಾದರಿಯಾದ ಸೊನೆಟ್ ಕಾನ್ಸೆಪ್ಟ್ ಆವೃತ್ತಿಯನ್ನು ಮುಂದಿನ ತಿಂಗಳು ಅಗಸ್ಟ್ 7ರಂದು ಅನಾವರಣಗೊಳಿಸುತ್ತಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯು ಇದೀಗ ರೋಡ್ ಟೆಸ್ಟಿಂಗ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಂಡುಬಂದಿದೆ.

ಹೊಸ ಸೊನೆಟ್ ಕಾರು ಬಿಎಸ್-6 ಎಂಜಿನ್ ಜೊತೆಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಸ್ಪೋಟಿ ಲುಕ್ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಟೊನಿಕ್ ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ. ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ತ್ರಿ ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಫ್ರಂಟ್ ಆರ್ಮ್ ರೆಸ್ಟ್, ಸಿಲ್ವರ್ ಹ್ಯಾಂಡಲ್ ಬಾರ್, ರೆಡ್ ಕಾಟ್ರಾಸ್ಟ್ ಹೊಂದಿರುವ ಲೆದರ್ ಸೀಟುಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್, ಸೀಟ್ ಬ್ಯಾಕ್ ಪ್ಯಾಕೇಟ್ ಸೌಲಭ್ಯಗಳನ್ನು ಹೊಂದಿರುವುದು ರೋಡ್ ಟೆಸ್ಟ್ ವೇಳೆ ಬಹಿರಂಗವಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 10.25-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಂಡಿದ್ದು, ಹೈ ಎಂಡ್ ಮಾದರಿಯಲ್ಲಿ ಆ್ಯಂಬಿಯೆಂಟ್ ಲೈಟಿಂಗ್, ಸನ್‌ರೂಫ್ ಮತ್ತು ಹಿಂಭಾಗದ ಪ್ರಯಾಣಿಕರಿಗೂ ಎಸಿ ವೆಂಟ್ಸ್ ನೀಡಲಾಗಿದೆ.

ಇದರೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಟ್ಯಾಂಡರ್ಡ್ ಆಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸುರಕ್ಷಾ ಫೀಚರ್ಸ್‌ಗಳಿರಲಿವೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಎಂಜಿನ್ ವೈಶಿಷ್ಟ್ಯತೆ
ಹೊಸ ಸೊನೆಟ್ ಕಾರಿನಲ್ಲಿ ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು1.5-ಲೀಟರ್ ಟರ್ಬೋ ಡೀಸೆಲ್ ಮತ್ತು ಪರ್ಫಾಮೆನ್ಸ್ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಿದೆ.

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದುವ ಸಾಧ್ಯತೆಗಳಿದ್ದು, ಟರ್ಬೋ ಎಂಜಿನ್‌ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾಮಿಷನ್ ಹೊಂದಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸೊನೆಟ್ ಕಾರಿನ ಬೆಲೆ(ಅಂದಾಜು)
ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕವಾಗಿರಲಿದ್ದು, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6.70 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.
Source: Motoroids


Click it and Unblock the Notifications








