ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಕಿಯಾ ಸೊರೆಂಟೊ ಎಸ್‌ಯುವಿಯು ಯುರೋ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದಿದೆ. ಸೊರೆಂಟೊ ಎಸ್‌ಯುವಿಯ ಎಲ್ಲಾ 2020ರ ಮಾದರಿಗಳಿಗೂ ಈ ರೇಟಿಂಗ್ ಅನ್ವಯಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಇದರಿಂದ ಸೊರೆಂಟೊ ಎಸ್‌ಯುವಿಯನ್ನು ಬಳಸುವ ಎಲ್ಲಾ ಯುರೋಪಿಯನ್ನರಿಗೆ ಸುರಕ್ಷಿತ ಪ್ರಯಾಣದ ಭರವಸೆ ಮೂಡಿದಂತಾಗಿದೆ. ಈ ಕ್ರಾಶ್ ಟೆಸ್ಟ್'ನಲ್ಲಿ ಯುರೋಪ್‌ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ಇದು ಪ್ಲಗ್-ಇನ್‌ನ ಹೈಬ್ರಿಡ್ ಮಾದರಿಯಾಗಿದೆ.

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಈ ಮೂಲಕ ಸೊರೆಂಟೊ ಎಸ್‌ಯುವಿಯು ಯುವಕರು ಹಾಗೂ ಹಿರಿಯರು ಸೇರಿದಂತೆ ಪ್ರಯಾಣಿಸುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ನೀಡುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಂತಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ವಯಸ್ಕರ ಸುರಕ್ಷತೆಗಾಗಿ ಈ ಎಸ್‌ಯುವಿಯು 31.2 ಅಂಕಗಳನ್ನು ಪಡೆದಿದೆ. ಇನ್ನು ಮಕ್ಕಳ ಸುರಕ್ಷತೆಗಾಗಿ ಸೊರೆಂಟೊ 41.9 ಅಂಕಗಳನ್ನು ಪಡೆದಿದೆ. ಇದರ ಜೊತೆಗೆ ಪಾದಚಾರಿಗಳ ಸುರಕ್ಷತೆಗಾಗಿ 34.1ರಷ್ಟು ಅಂಕಗಳನ್ನು ಪಡೆದಿದೆ.

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಕಿಯಾ ಸೊರೆಂಟೊ ಎಸ್‌ಯುವಿಯಲ್ಲಿ ಹಲವಾರು ಸುರಕ್ಷತಾ ಫೀಚರ್'ಗಳನ್ನು ಅಳವಡಿಸಲಾಗಿದೆ. ಈ ಫೀಚರ್'ಗಳು ಕ್ರಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆಯಲು ನೆರವಾಗಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಸೊರೆಂಟೊ ಎಸ್‌ಯುವಿಯು ಆ್ಯಂಟಿ ಕೊಲ್ಯೂಷನ್ ಟೆಕ್ನಾಲಜಿ, ಸ್ಪೀಡ್ ವಾರ್ನಿಂಗ್ ಹಾಗೂ ಹೈ ಸೆಕ್ಯೂರಿಟಿ ಕನ್ಸ್ಟ್ರಕ್ಷನ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ ಎಸ್‌ಯುವಿಯು ಏಳು ಏರ್‌ಬ್ಯಾಗ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಲ್ಯಾನ್ ಸಪೋರ್ಟ್ ಹಾಗೂ ಎಇಪಿ ಸೇರಿದಂತೆ ಹೆಚ್ಚಿನ ಸೆಫ್ಟಿ ಫೀಚರ್'ಗಳನ್ನು ಹೊಂದಿದೆ.

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಈ ಮೂಲಕ ಸೊರೆಂಟೊ ಎಸ್‌ಯುವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಿಯಾ ಸೊರೆಂಟೊ ಎಸ್‌ಯುವಿಯಲ್ಲಿ ಮಾದರಿಗೆ ಅನುಸಾರ ಹೆಚ್ಚುವರಿ ಸುರಕ್ಷತಾ ಫೀಚರ್'ಗಳನ್ನು ನೀಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್'ನಲ್ಲಿ ಸೊರೆಂಟೊ ಎಸ್‌ಯುವಿಯ ಹೈಬ್ರಿಡ್ ಆವೃತ್ತಿಯನ್ನು ಪರೀಕ್ಷಿಸಲಾಯಿತು. ಈ ಮಾದರಿಯು 1.6 ಲೀಟರಿನ ಟರ್ಬೊ ಜಿಟಿಐ ಪೆಟ್ರೋಲ್ ರೂಪಾಂತರದಲ್ಲಿ ಲಭ್ಯವಿದೆ.

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಈ ಮಾದರಿಯು ಹೈಬ್ರಿಡ್ ಆಗಿರುವ ಕಾರಣಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಎಲ್ಲಾ ವ್ಹೀಲ್'ಗಳನ್ನು ಚಲಾಯಿಸಬಲ್ಲ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಈ ಎಸ್‌ಯುವಿಯು ಯುರೋಪಿಯನ್ ಮಾರುಕಟ್ಟೆಗಳಲ್ಲಿ 2.2 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ ಐದು ಸ್ಟಾರ್ ರೇಟಿಂಗ್ ಪಡೆದ ಕಿಯಾ ಸೊರೆಂಟೊ

ಕಿಯಾ ಮೋಟಾರ್ಸ್ ಕಂಪನಿಯು ಸದ್ಯಕ್ಕೆ ಭಾರತದಲ್ಲಿ ಸೆಲ್ಟೋಸ್, ಕಾರ್ನಿವಾಲ್ ಹಾಗೂ ಸೊನೆಟ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಕಿಯಾ ಮೋಟಾರ್ಸ್ ಸೆಲ್ಟೋಸ್ ಆಧಾರಿತ ಸೊರೆಂಟೊ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

Most Read Articles

Kannada
English summary
Kia Sorento suv gets 5 star rating for safety in Euro NCAP crash test. Read in Kannada.
Story first published: Saturday, December 12, 2020, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X