ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಶೋರೂಂ ಒಂದರಲ್ಲಿ ಒಂದೇ ದಿನಕ್ಕೆ 11 ಯುನಿಟ್ ವಿತರಣೆ..!

ಕಿಯಾ ಕಾರ್ನಿವಾಲ್ ಬಿಡುಗಡೆಯ ನಂತರ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಖರೀದಿಯ ಭರಾಟೆ ಜೋರಾಗಿದೆ. ಕಾರ್ನಿವಾಲ್ ಕಾರು ಖರೀದಿಗೆ ಇದುವರೆಗೂ 5 ಸಾವಿರಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ ದಾಖಲಾಗಿದ್ದು, ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ ನಂತರ ಹೊಸ ಕಾರ್ನಿವಾಲ್ ಕಾರು ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಕಿಯಾ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಹೊಸ ಕಾರನ್ನು ಮಾರಾಟಗೊಳಿಸುತ್ತಿದ್ದು, ಸೂರತ್‌ನಲ್ಲಿರುವ ಮೋಟಾರ್‌ಕಾರ್ ಎಲ್‌ಪಿಪಿ ಶೋರೂಂ ಒಂದರಲ್ಲೇ ಒಂದೇ ದಿನಕ್ಕೆ 11 ಯುನಿಟ್ ಮಾರಾಟಗೊಳಿಸಿದೆ. ಬೆಂಗಳೂರಿನಲ್ಲೂ ಕೂಡಾ ಮೈಸೂರು ರಸ್ತೆಯಲ್ಲಿರುವ ಪಿಪಿಎಸ್ ಮೋಟಾರ್ಸ್ ಸಹ ಒಂದೇ ದಿನದಲ್ಲಿ 10 ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ್ದು, ದುಬಾರಿ ಬೆಲೆ ನಡುವೆಯೂ ಕಾರ್ನಿವಾಲ್ ಕಾರು ಖರೀದಿಗಾಗಿ ಗ್ರಾಹಕರು ಆಸಕ್ತಿ ತೋರಿಸುತ್ತಿದ್ದಾರೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಕಾರ್ನಿವಾಲ್ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೋಸಿನ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 24.95 ಲಕ್ಷ ಬೆಲೆ ಹೊಂದಿದ್ದು, ಹೈ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆ ಪಡೆದುಕೊಂಡಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಕಾರ್ನಿವಾಲ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಪ್ರೀಮಿಯಂ (7 ಸೀಟರ್) - ರೂ. 24.95 ಲಕ್ಷ

ಪ್ರೀಮಿಯಂ (8 ಸೀಟರ್) - ರೂ. 25.15 ಲಕ್ಷ

ಪ್ರೆಸ್ಟಿಜ್ (7 ಸೀಟರ್) - ರೂ. 28.95 ಲಕ್ಷ

ಪ್ರೆಸ್ಟಿಜ್ (9 ಸೀಟರ್) - ರೂ. 29.95 ಲಕ್ಷ

ಲಿಮೋಸಿನ್ (7 ಸೀಟರ್) ರೂ. 33.95 ಲಕ್ಷ

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕಾರ್ನಿವಾಲ್ ಕಾರಿನಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಮೈಲೇಜ್‌ನಲ್ಲೂ ಗಮನಸೆಳೆಯುವ ಕಾರ್ನಿವಾಲ್ ಕಾರು 2,200 ಕೆಜಿ ತೂಕ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಕಾರ್ನಿವಾಲ್ ಒಳವಿನ್ಯಾಸ

ಹೊಸ ಕಾರಿನ ಡ್ಯಾಶ್‌ಬೋರ್ಡ್ ಕೂಡಾ ಗಮನಸೆಳೆಯಲಿದ್ದು, ಸೆಂಟ್ರಲ್ ಇನ್ಪೋಟೈನ್‌ಮೆಂಟ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಬಿಲ್ಟ್ ನ್ಯಾವಿಗೆಷನ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ವೆಹಿಕಲ್ ಟೆಲಿಮ್ಯಾಟಿಕ್, ವೆಂಟಿಲೆಟೆಡ್ ಸೀಟುಗಳ ಸೌಲಭ್ಯವನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಿಸ್ಟಂ, ಆರ್ಮ್ ರೆಸ್ಟ್‌ನೊಂದಿಗೆ ಚಾಲಕನಿಗೆ ಸರಳವಾಗಿ ಸಿಗಬಹುದಾದ ಗೇರ್ ನಾಬ್, ಲಿಮೋಸಿನ್ ಮಾದರಿಯಲ್ಲಿ ನಪ್ಪಾ ಲೆದರ್ ಆಸನ ಸೌಲಭ್ಯವಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಕಾರ್ನಿವಾಲ್ ಉದ್ದಳತೆ

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಕಾರ್ನಿವಾಲ್ ಪ್ರೀಮಿಯಂ ಫೀಚರ್ಸ್‌ಗಳು

* 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ * ಎಂಟು ಸ್ಪೀಕರ್ಸ್(ಹರ್ಮನ್/ಕರ್ಡೋನ್) * 220 ವೊಲ್ಟ್ ಲ್ಯಾಪ್‌ಟಾಪ್ ಚಾರ್ಜರ್ * 10-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ * ವೆಂಟಿಲೆಟೆಡ್ ಡ್ರೈವರ್ ಸೀಟ್ * ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ * ಸೆಂಟ್ರಲ್ ಲಾಕಿಂಗ್ * ಆಟೋ ORVMs * 18-ಇಂಚಿನ ಅಲಾಯ್ ವೀಲ್ಹ್ * ಮೂರನೇ ಸಾಲಿನಲ್ಲೂ 60:40 ಅನುಪಾತದ ಆಸನ * UVO ಕನೆಕ್ಟೆಡ್ ಟೆಕ್ನಾಲಜಿ * ವೈರ್ ಲೆಸ್ ಮೊಬೈಲ್ ಚಾರ್ಜಿಂಗ್

ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಬೇಡಿಕೆ- ಒಂದೇ ದಿನದಲ್ಲಿ 11 ಯುನಿಟ್ ವಿತರಣೆ..!

ಸುರಕ್ಷಾ ಫೀಚರ್ಸ್‌ಗಳು

* ಎಬಿಎಸ್ ಜೊತೆ ಇಬಿಡಿ * ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ * ರೋಲ್ ಓವರ್ ಮಿಟಿಗೆಷನ್ * ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ * 6 ಏರ್‌ಬ್ಯಾಗ್ * ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ * ಸೀಟ್ ಬೆಲ್ಟ್ ರಿಮೆಂಡರ್ * ಇಮ್‌ಮೊಬಿಲೈಜರ್ * ISOFIX ಚೈಲ್ಡ್ ಸೀಟ್ ಮೌಂಟ್

More from DriveSpark

Article Published On: Tuesday, March 10, 2020, 11:29 [IST]
English summary
Kia dealer in Surat delivers 11 Carnival MPVs in 1 day. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+