ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆಯೂ ಕಡ್ಡಾಯವಾಗಿದ್ದರೂ ಇನ್ನು ಅದೆಷ್ಟೋ ವಾಹನಗಳಲ್ಲಿ ಹೊಸ ಶುಲ್ಕ ಪಾವತಿ ಸೌಲಭ್ಯವನ್ನು ಅಳಡಿಸಿಕೊಂಡಿಲ್ಲ. ಇದರಿಂದ ಸತತ ಮೂರು ಗಡುವುಗಳ ನಂತರವು ಮತ್ತೊಂದು ಬಾರಿ ಉಚಿತ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅವಕಾಶ ನೀಡಿತ್ತು.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಫೆಬ್ರುವರಿ 15ರಿಂದ 29ರ ತನಕ ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ ಫಾಸ್ಟ್‌ಟ್ಯಾಗ್ ವಿತರಣೆ ಕೈಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಳೆದ 15 ದಿನಗಳಲ್ಲಿ 8 ಲಕ್ಷ ಅಧಿಕ ವಾಹನಗಳಿಗೆ ಉಚಿತ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ನೀಡಿದೆ. ದೇಶಾದ್ಯಂತ ಇದುವರೆಗೆ ಸುಮಾರು 1.55 ಕೋಟಿ ವಾಹನಗಳು ಫಾಸ್ಟ್‌ಟ್ಯಾಗ್ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಂದಾಗಿಯೇ ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಟ್ರಾಫಿಕ್ ದಟ್ಟಣೆಗೆ ಕಾರಣವಾಗಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಇದಕ್ಕಾಗಿಯೇ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರೂ.600ರ ಬದಲಿಗೆ ರೂ.100 ಶುಲ್ಕದೊಂದಿಗೆ ಫಾಸ್ಟ್‌ಟ್ಯಾಗ್ ವಿತರಣೆ ಮಾಡುತ್ತಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ರೂ.100 ಶುಲ್ಕವು ಫಾಸ್ಟ್‌ಟ್ಯಾಗ್‌ನಲ್ಲಿ ಇರಬೇಕಾದ ಕನಿಷ್ಠ ಮೊತ್ತವಾಗಿದ್ದು, ನಾಳೆಯಿಂದಲೇ ಮತ್ತೆ ರೂ.500 ಹೆಚ್ಚುವರಿ ಮೊತ್ತವನ್ನೇ ಪಾವತಿಬೇಕಾಗುತ್ತದೆ. ಇದಲ್ಲದೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಮಾಲೀಕರು ದುಪ್ಪಟ್ಟ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಹೆದ್ದಾರಿಗಳಲ್ಲಿ ಶುಲ್ಕ ಪಾವತಿಸಲು ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದ್ದರೂ ಸಹ ವಾಹನ ಸವಾರರು ಮಾತ್ರ ದುಪ್ಪಟ್ಟು ಹಣ ಪಾವತಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೋಟಿ-ಕೋಟಿ ಆದಾಯ ಹರಿದುಬಂದಿದ್ದು, ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರೂ ಸಹ ವಾಹನ ಸವಾರರು ಮಾತ್ರ ಹೊಸ ಸೌಲಭ್ಯ ಅಳವಡಿಕೆಗೆ ಮುಂದಾಗುತ್ತಿಲ್ಲ. ಎಲೆಕ್ಟ್ರಾನಿಕ್ ಟೋಲ್ ಲೈನ್‌ಗಳಲ್ಲಿ ಹಾಯ್ದು ಹೋಗುವ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಂದ ಇದುವರೆಗೆ ಬರೋಬ್ಬರಿ ರೂ.20 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಜನವರಿ 15ರಿಂದ ಇದುವರೆಗೆ ರೂ.20 ಕೋಟಿ ಹೆಚ್ಚುವರಿ ಆದಾಯವನ್ನು ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಂದ ಸಂಗ್ರಹಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳುವಂತೆ ಮತ್ತೊಂದು ಅವಕಾಶ ನೀಡಿತ್ತು.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಜೊತೆಗೆ ಫಾಸ್ಟ್‌ಟ್ಯಾಗ್ ಸೌಲಭ್ಯ ವಿತರಣೆಯ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೆಟ್ರೋಲ್ ಬಂಕ್, ಆರ್‌ಟಿಒ ಆಫೀಸ್ ಮತ್ತು ಟೋಲ್ ಪ್ಲಾಜಾಗಳಲ್ಲಿ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ತುರ್ತಾಗಿ ವಿತರಣೆ ಮಾಡುತ್ತಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಇನ್ನು ಫಾಸ್ಟ್‌ಟ್ಯಾಗ್ ಪರಿಚಯಿಸುವುದಕ್ಕೂ ಮುನ್ನ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗಾಗಿ ಸರಾಸರಿಯಾಗಿ 12 ನಿಮಿಷ ಕಾಯಬೇಕಿತ್ತು. ಇದೀಗ ಅದು ಸರಾಸರಿ 6 ನಿಮಿಷಕ್ಕೆ ಇಳಿಕೆಯಾಗಿದ್ದರೂ ಕೂಡಾ ಫಾಸ್ಟ್‌ಟ್ಯಾಗ್‌ ಲೈನ್‌ಗಳ ಬಳಕೆಯಲ್ಲಿನ ಗೊಂದಲದಿಂದಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ಆಗಾಗ ವಾಗ್ವಾದಗಳು ನಡೆಯುತ್ತಿವೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಫಾಸ್ಟ್‌ಟ್ಯಾಗ್ ಸೌಲಭ್ಯದಿಂದ ಭರ್ಜರಿ ಆದಾಯ

ಫಾಸ್ಟ್‌ಟ್ಯಾಗ್ ಅಳವಡಿಕೆಗೂ ಮುನ್ನ ಪ್ರತಿದಿನ ರೂ.68 ಕೋಟಿ ಸರಾಸರಿ ಆದಾಯ ಗಳಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಇದೀಗ ಪ್ರತಿದಿನ ಸರಾಸರಿಯಾಗಿ ರೂ.82 ಕೋಟಿಯಷ್ಟು ಆದಾಯ ಗಳಿಕೆ ಮಾಡುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಫಾಸ್ಟ್‌ಟ್ಯಾಗ್ ಸೌಲಭ್ಯವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗುವಾಗ ಟೋಲ್‌ಗಳಲ್ಲಿನ ಆರ್‌ಎಫ್‌ಐಡಿ ರಾಡರ್ ಮೂಲಕ ಆಟೋಮ್ಯಾಟಿಕ್ ಆಗಿ ಶುಲ್ಕ ಕಡಿತಗೊಳ್ಳುತ್ತದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕ್‌ಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‍ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಹೀಗಾಗಿ ಇದೊಂದು ಅತಿ ಸುಲಭವಾಗಿ ಉಪಯೋಗಿಸಬಹುದಾದ ಸೌಲಭ್ಯವಾಗಿದ್ದು, ಒಂದು ಫಾಸ್ಟ್‌ಟ್ಯಾಗ್ ಖಾತೆಯನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡುವಂತಿಲ್ಲ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಂದೇ ಕೊನೆಯ ದಿನ..

ಇದರಿಂದ ವಾಹನ ಮಾಲೀಕರು ಹೊಸ ಸೌಲಭ್ಯವನ್ನು ವಿವಿಧ ವಾಹನಗಳಿಗೆ ಪ್ರತ್ಯೇಕ ಖಾತೆ ಹೊಂದಿರಬೇಕಿದ್ದು, ಫಾಸ್ಟ್‌ಟ್ಯಾಗ್ ಬೇಡವಾದಲ್ಲಿ ಡಿಆಕ್ಟಿವೆಟ್ ಮಾಡಬೇಕಾಗುತ್ತದೆ.

More from DriveSpark

Article Published On: Saturday, February 29, 2020, 18:42 [IST]
English summary
Today is the last day to get free fastag. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+