ಕರೋನಾ ವೈರಸ್ ಎಫೆಕ್ಟ್: ಗ್ರಾಹಕರ ನೆರವಿಗೆ ಧಾವಿಸಿದ ಲೆಕ್ಸಸ್ ಇಂಡಿಯಾ
ದೇಶದಲ್ಲಿ ಕರೋನಾ ವೈರಸ್‌ನಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ಅನೇಕ ಕಾರು ಕಂಪನಿಗಳು ಸರ್ಕಾರದ ಜೊತೆಗೆ ಕೈಜೋಡಿಸಿವೆ. ಹಾಗೆಯೇ ಕಂಪನಿಗಳು ತಮ್ಮ ಗ್ರಾಹಕರಿಗೆ ಹಲವು ರೀತಿಯ ನೆರವನ್ನು ನೀಡುತ್ತಿವೆ. ಈ ಪಟ್ಟಿಗೆ ಲೆಕ್ಸಸ್ ಕಂಪನಿ ಕೂಡ ಸೇರ್ಪಡೆಯಾಗಿದೆ.

ಲೆಕ್ಸಸ್ ಇಂಡಿಯಾ ಹೊರಡಿಸಿರುವ ಪ್ರಕಟಣೆಯಲ್ಲಿ, ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಿಸುವ ಜೊತೆಗೆ ಸರ್ವಿಸ್ ಅವಧಿಯನ್ನು ಸಹ ವಿಸ್ತರಿಸುವುದಾಗಿ ಹೇಳಿದೆ. ಲಾಕ್‌ಡೌನ್‌ನಿಂದಾಗಿ ಸರ್ವಿಸ್ ಮಾಡಿಸಲು ಸಾಧ್ಯವಾಗದ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ. ಇದರ ಜೊತೆಗೆ ವಾರಂಟಿ ಅವಧಿಯನ್ನು ಸಹ ವಿಸ್ತರಿಸಲಾಗಿದೆ.

ಲೆಕ್ಸಸ್ ಕಂಪನಿಯು ಸರ್ವಿಸ್ ಅವಧಿಯನ್ನು ಮೇ 31ರವರೆಗೆ ವಿಸ್ತರಿಸುವುದಾಗಿ ಹೇಳಿದೆ. ಇದರ ಜೊತೆಗೆ ಲಾಕ್‌ಡೌನ್ ಸಮಯದಲ್ಲಿ ವಾರಂಟಿ ಅವಧಿ ಕೊನೆಗೊಳ್ಳುವ ಗ್ರಾಹಕರಿಗೆ ಈ ಅವಧಿಯನ್ನು ಮುಂದಿನ ತಿಂಗಳ ಕೊನೆಯವರೆಗೆ ವಿಸ್ತರಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಅವಧಿಯಲ್ಲಿ ಗ್ರಾಹಕರಿಗೆ ಸರ್ವಿಸ್ ನೀಡುವಂತೆ ಡೀಲರ್‌ಗಳಿಗೆ ತಿಳಿಸಿದೆ. ಬೇರೆ ಕಂಪನಿಗಳಂತೆ, ಲೆಕ್ಸಸ್ ಕಂಪನಿಯು ಸಹ ತನ್ನ ಗ್ರಾಹಕರಿಗೆ ನೆರವಾಗುತ್ತಿದೆ. ಉಳಿದ ಕಂಪನಿಗಳು ತಮ್ಮ ಡೀಲರ್‌ಗಳಿಗೆ ಪರಿಹಾರವನ್ನು ಸಹ ನೀಡಿವೆ.

ಲೆಕ್ಸಸ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಈ ಎಲ್ಲ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಗ್ರಾಹಕರು ತಮ್ಮ ಹತ್ತಿರದ ಡೀಲರ್‌ಗಳ ಬಳಿ ಭೇಟಿ ನೀಡುವ ಮೂಲಕ ಈ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಲೆಕ್ಸಸ್ ಕಂಪನಿಯು ತನ್ನ ಗ್ರಾಹಕರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಗ್ರಾಹಕರಿಗೆ ತಮ್ಮ ಮೊದಲ ಆದ್ಯತೆ ಎಂದು ಕಂಪನಿ ಹೇಳಿದೆ. ಈ ಸಮಯದಲ್ಲಿ ಗ್ರಾಹಕರಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವಂತೆ ಕಂಪನಿ ಹೇಳಿದೆ. ಕೋವಿಡ್ -19 ಸಂದರ್ಭದಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ ಗ್ರಾಹಕರಿಗೆ ನೆರವಾಗಲು ಮುಂದಾಗಿವೆ.

ಲೆಕ್ಸಸ್ ಕಂಪನಿಯು ಈ ವರ್ಷದ ಆರಂಭದಲ್ಲಿ ಭಾರತ್ ಲೆಕ್ಸಸ್ ಎಲ್‌ಸಿ 500 ಹೆಚ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಇದು ಕಂಪನಿಯ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವಾಗಿದೆ. ಕಂಪನಿಯು ಈಗ ಹೈಬ್ರಿಡ್ ವಾಹನಗಳ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸದ್ಯಕ್ಕೆ ಕರೋನಾದಿಂದಾಗಿ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಉತ್ಪಾದನೆಯನ್ನು ಆರಂಭಿಸಲು ಕಂಪನಿಗಳಿಗೆ ಭಾಗಶಃ ಅವಕಾಶ ನೀಡಲಾಗುತ್ತಿದೆ. ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದು ಹಾಕಿದ ನಂತರ ಪರಿಸ್ಥಿತಿ ಮೊದಲಿನಂತಾಗುವ ಸಾಧ್ಯತೆಗಳಿವೆ.


Click it and Unblock the Notifications








