ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಎಕ್ಸ್‌ಯುವಿ 500 ಎಸ್‌ಯುವಿಯನ್ನು ಭಾರತದಲ್ಲಿ ಮತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಲು ಪುನರಾರಂಭಿಸಿದೆ. ಹೊಸ ಎಕ್ಸ್‌ಯುವಿ 500 ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ಎಸ್‌ಯುವಿ ಇತ್ತೀಚೆಗೆ ಚೆನ್ನೈನಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಹೊಸ ಎಕ್ಸ್‌ಯುವಿ 500 ಎಸ್‌ಯುವಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದ ವೀಡಿಯೋವನ್ನು ರಶ್ಲೇನ್ ಬಹಿರಂಗಪಡಿಸಿದೆ. ಈ ಹೊಸ ಎಕ್ಸ್‌ಯುವಿ 500 ಎಸ್‌ಯುವಿಯ ಬಾಡಿಯನ್ನು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನಲೆಯಲ್ಲಿ ಹೊಸ ತಲೆಮಾರಿನ ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ನಡೆಸುವುದನ್ನು ಪುನರಾರಂಭಿಸಿದೆ

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ಫೆಬ್ರವರಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಹೀಂದ್ರಾ ಕಂಪನಿಯು ಆಟೊ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿಲ್ಲ. ಹೊಸ ತಲೆಮಾರಿನ ಎಸ್‍ಯುವಿಯನ್ನು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಹೊಸ ತಲೆಮಾರಿನ ಎಕ್ಸ್‌ಯುವಿ 500 ಎಸ್‍ಯುವಿಯನ್ನು ಮೊನೊಕೊಕ್ ಪ್ಲಾಟ್‌ಫಾರ್ಮ್‌ನ ಅಡಿಯಲ್ಲಿ ಬಿಡುಗಡೆಗೊಳಿಸಬಹುದು. 2021ರ ಮಹೀಂದ್ರಾ ಎಕ್ಸ್‌ಯುವಿ 500 ಅದರ ವಿನ್ಯಾಸ ಮತ್ತು ಸ್ಟೈಲಿಂಗ್‌ನಲ್ಲಿ ಗಮನಾರ್ಹ ಬದಲಾವಣೆಗಳ ಜೊತೆಗೆ ಹಲವಾರು ನವೀಕರಣಗಳು ಮತ್ತು ಹೆಚ್ಚುವರಿ ಫೀಚರ್ ಗಳನ್ನು ಸಹ ಹೊಂದಿರುತ್ತದೆ.

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯಲ್ಲಿ ಡೀಸೆಲ್ ಎಂಜಿನ್ ಅನ್ನು ಸಹ ಅಳವಡಿಸುವ ಸಾಧ್ಯತೆಗಳಿದೆ. ಈ ಎಸ್‍ಯುವಿಯಲ್ಲಿ ಹೊಸ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

2021ರ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿನಲ್ಲಿ ಹೊಸ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಎರಡು ಎಂಜಿನ್ ಗಳಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುತ್ತದೆ. ಹೊಸ ಎಸ್‍ಯುವಿಯು ಎಡಬ್ಲ್ಯೂಡಿ(ಆಲ್-ವೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿರಲಿದೆ.

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಪ್ರಸ್ತುತ ತಲೆಮಾರಿನ ಬಿಎಸ್-6 ಎಕ್ಸ್‌ಯುವಿ 500 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು, ಈ ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.13.20 ಲಕ್ಷಗಳಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಬಿಎಸ್-6 ಎಕ್ಸ್‌ಯುವಿ 500 ಎಸ್‍ಯುವಿಯಲ್ಲಿ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 155 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಲಾಕ್‌ಡೌನ್ ಸಡಿಲಿಕೆ: ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ಪುನರಾರಂಭಿಸಿದ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ 500 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯು ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ, ಜೀಪ್ ಕಂಪಾಸ್ ಮತ್ತು ಫೋಕ್ಸ್ ವ್ಯಾಗನ್ ಟಿ-ರಾಕ್ ಎಸ್‍ಯುವಿಯುಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, June 5, 2020, 15:42 [IST]
English summary
Next-Generation Mahindra XUV500 Spied. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+