2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಹೋಂಡಾ ಕಂಪನಿಯು ತನ್ನ 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಭಾರತದಲ್ಲಿ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಮಾಡಿರುವುದರಿಂದ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ.

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಈ ಹೋಂಡಾ ಸಿಟಿ ಕಾರಿನ ಬುಕ್ಕಿಂಗ್ ಕೂಡ ಬಿಡುಗಡೆಯ ದಿನ ಪ್ರಾರಂಭವಾಗುವ ಸಾಧ್ಯತೆಗಳಿದೆ. ಹೋಂಡಾ ಕಂಪನಿಯು ಗೋವಾದಲ್ಲಿ ನಡೆಯಲ್ಲಿರುವ ಅಧಿಕೃತ ಮೀಡಿಯಾ ಡ್ರೈವ್ ಅನ್ನು ರದ್ದುಗೊಳಿಸಲಾಗಿದೆ. ಹೊಸ ಹೋಂಡಾ ಸಿಟಿ 4,549 ಎಂಎಂ ಉದ್ದ, 1,784 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಟಿ ಪ್ರಸ್ತುತ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲವನ್ನು ಹೊಂದಿದೆ.

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಹೋಂಡಾ ಸಿಟಿ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ವರ್ನಾ ಮತ್ತು ಸಿಯಾಜ್ ಒಂದೇ ರೀತಿಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಇನ್ನು ಸಿಟಿ ಝಡ್ಎಕ್ಸ್ ನಲ್ಲಿ ಹೋಂಡಾ ಲೇನ್ ವಾಚ್ ಕ್ಯಾಮೆರಾ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದನ್ನು ಎಡ ಭಾಗದ ರೇರ್ ವ್ಯೂ ಮಿರರ್‍ ನಲ್ಲಿ ಈ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹೊಸ ಹೋಂಡಾ ಸಿಟಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಸಿವಿಕ್ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ.

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

2020ರ ಹೋಂಡಾ ಸಿಟಿ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‍ಇಡಿ ಯು‍‍ನಿ‍ಟ್‍‍ಗಳು, ಹೋಂಡಾ ಸಿಗ್ನೇಚರ್ ಕ್ರೋಮ್ ಬಾರ್, ಕೂಪ್ ಸ್ಟೈಲ್ ಸ್ಲೋಪಿಂಗ್ ರೂಫ್‍‍ಲೈನ್ ಮತ್ತು ದೊಡ್ಡ ಒ‍ಆರ್‍‍ವಿಎಂ‍ಗಳಿವೆ. ಇನ್ನು ಹೊಸ ಹೋಂಡಾ ಕಾರಿನಲ್ಲಿ ಶಾರ್ಕ್ ಫಿನ್ ಆಂಟೆನಾ, ಟೇಲ್ ಸೆಗ್‍ಮೆಂಟ್ ಮತ್ತು ಉತ್ತಮವಾದ ಬೂಟ್ ಲಿ‍ಡ್‍‍‍ಗಳಿವೆ.

MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಹೊಸ ಹೋಂಡಾ ಲೋ ಸ್ಪೆಕ್ ಮಾದರಿಯ ಇಂಟಿರಿಯರ್ ಚಿತ್ರವನ್ನು ಬಹಿರಂಗವಾಗಿದೆ. ಈ ಹೊಂಡಾ ಕಾರಿನ ಇಂಟಿರಿಯರ್ ಚಿತ್ರವನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಟಾಪ್ ವೆರಿಯೆಂಟ್ ಆಗಿರುವ ಹೋಂಡಾ ಸಿಟಿ ಝಡ್ಎಕ್ಸ್ ನಲ್ಲಿ ಹೂಸ ಫೀಚರ್ಸ್‍ಗಳನ್ನು ಅಳವಡಿಸಿದೆ. ಸಿಟಿ ಝಡ್ಎಕ್ಸ್ ವೆರಿಯೆಂಟ್‍ನಲ್ಲಿ ಎಲ್ಇಡಿ ಹೆಡ್‍ ಲೈಟ್, ಎಲ್ಇಡಿ ಟೇಲ್ ಲ್ಯಾಂಪ್, ಆರು ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ನಂತಹ ಹಲವಾರು ಉನ್ನತ ಫೀಚರ್ ಗಳನ್ನು ಹೊಂದಿದೆ.

MOST READ: ಹೊಸ ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್‍‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹೊಸ ಸಿಟಿ ಕಾರು 1.5 ಲೀಟರ್ ಐ-ವಿಟಿಇಸಿ ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 119 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿ‍ಟಿ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಹೊಂದಿರುತ್ತದೆ.

2020ರ ಹೋಂಡಾ ಸಿಟಿ ಕಾರಿನ ಇಂಟಿರಿಯರ್ ಚಿತ್ರ ಬಹಿರಂಗ

2020ರ ಹೋಂಡಾ ಸಿಟಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, April 22, 2020, 21:00 [IST]
English summary
Lower Spec 2020 Honda City Interior Appears On The Internet. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+