Just In
Don't Miss!
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಭಿನ್ನವಾದ ಶೋರೂಂ ತೆರೆದ ಐಷಾರಾಮಿ ಕಾರು ತಯಾರಕ ಕಂಪನಿ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ಚೆನ್ನೈನಲ್ಲಿ ಹೊಸ ಶೋರೂಂ ತೆರೆದಿದೆ. ಈ ಹೊಸ ಶೋರೂಂ ಬಿಎಂಡಬ್ಲ್ಯು ಫೆಸಿಲಿಟಿ ನೆಕ್ಸ್ಟ್ ಕಾನ್ಸೆಪ್ಟ್ ಆಧಾರಿತವಾದ ಬಿಎಂಡಬ್ಲ್ಯು ಲೈಫ್ ಸ್ಟೈಲ್ ಅನ್ನು ಆಧರಿಸಿದೆ.

ಬಿಎಂಡಬ್ಲ್ಯು ಕಂಪನಿಯ ಈ ಶೋರೂಂ ಬಿಎಂಡಬ್ಲ್ಯು ಆಕ್ಸೆಸರಿಸ್ ಕಲೆಕ್ಷನ್ ಜೊತೆಗೆ ಕಂಪನಿಯ ವ್ಯಾಪಕ ಅನುಭವವನ್ನು ಒದಗಿಸುತ್ತದೆ. ಈ ಕುನ್ ಎಕ್ಸ್‌ಕ್ಲೂಸಿವ್ ಶೋರೂಂ ಅನ್ನು ಚೆನ್ನೈನ ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿರುವ ಶೋಲಿಂಗನಲ್ಲೂರ್ ನಲ್ಲಿ ತೆರೆಯಲಾಗಿದೆ.

ಕುಯುನ್ ಎಕ್ಸ್‌ಕ್ಲೂಸಿವ್‌ನ ಪ್ರಿನ್ಸಿಪಾಲ್ ಡೀಲರ್ ಆದ ವಸಂತಿ ಭೂಪತಿ ಅವರ ಮೇಲ್ವಿಚಾರಣೆಯಲ್ಲಿ ಈ ಬಿಎಂಡಬ್ಲ್ಯು ಶೋರೂಂ ಅನ್ನು ತೆರೆಯಲಾಗಿದೆ. ಈ ಶೋರೂಂ ನಮ್ಮ ಗ್ರಾಹಕರ ಅನುಭವದ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ಬಿಎಂಡಬ್ಲ್ಯು ಕಂಪನಿ ಹೇಳಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಗ್ರಾಹಕರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ರೀತಿಯಲ್ಲಿ ಈ ಶೋರೂಂ ಅನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಬಗೆಯ ವಾಸ್ತುಶಿಲ್ಪ, ಆಕರ್ಷಕ ವಿನ್ಯಾಸ ಹಾಗೂ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಕಾನ್ಸೆಪ್ಟ್ ಅನ್ನು ತಯಾರಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪಹಾ, ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಆಟೋಮೋಟಿವ್ ಐಷಾರಾಮಿ ಕಂಪನಿಗಳಲ್ಲಿ ಒಂದಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಚೆನ್ನೈ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ. ನಮ್ಮ ದೀರ್ಘಕಾಲದ ಪಾಲುದಾರರಾದ ಕುನ್ ಎಕ್ಸ್‌ಕ್ಲೂಸಿವ್ ಜೊತೆಗೂಡಿ ಮತ್ತೊಂದು ಅಲ್ಟ್ರಾ-ಆಧುನಿಕ ಶೋರೂಂನೊಂದಿಗೆ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ ಎಂದು ಹೇಳಿದರು.

ಗ್ರಾಹಕರಿಗೆ ವೈಯಕ್ತಿಕವಾದ, ಭಾವನಾತ್ಮಕವಾದ ಹಾಗೂ ಪ್ರೀಮಿಯಂ ಬ್ರಾಂಡ್ ಅನುಭವವನ್ನು ನೀಡುವಲ್ಲಿ ಶೋರೂಂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಬಿಎಂಡಬ್ಲ್ಯುನ ಈ ಹೊಸ ಶೋರೂಂ ಸುಮಾರು 6,500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಶೋರೂಂ 6-ಕಾರುಗಳ ಡಿಸ್ ಪ್ಲೇ ಏರಿಯಾ, ಬಿಎಂಡಬ್ಲ್ಯು ಲೈಫ್ ಸ್ಟೈಲ್ ಹಾಗೂ ಆಕ್ಸೆಸರಿಸ್ ಗಳ ವಿಭಾಗವನ್ನು ಒಳಗೊಂಡಿದೆ. ಗ್ರಾಹಕರು ಕಾರು ಕಾನ್ಫಿಗರೇಟರ್ ಮೂಲಕ ತಮ್ಮಿಷ್ಟದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಬಿಎಂಡಬ್ಲ್ಯು ಕಂಪನಿಯು ಇತ್ತೀಚಿಗಷ್ಟೇ ತನ್ನ ಹೊಸ 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲಾಕ್ ಶ್ಯಾಡೋ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.42.30 ಲಕ್ಷಗಳಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರಿನಲ್ಲಿ 2.0-ಲೀಟರಿನ 4-ಪಾಟ್ ಟ್ವಿನ್ ಪವರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 1,750ರಿಂದ 2,500 ಆರ್‌ಪಿಎಂನಲ್ಲಿ 187 ಬಿಹೆಚ್‌ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್‌ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಕಾರನ್ನು ಎಂ ಸ್ಪೋರ್ಟ್ ಡಿಸೈನ್ ಲಾಂಗ್ವೇಜ್'ನೊಂದಿಗೆ ಬಿಡುಗಡೆಗೊಳಿಸಲಾಗಿದೆ. ಕಂಪನಿಯು ಎರಡು ಬಣ್ಣಗಳೊಂದಿಗೆ ಈ ಕಾರನ್ನು ಮಾರಾಟ ಮಾಡಲಿದೆ.