ಅಟಾಮ್ ಕ್ವಾರ್ಡ್ರಿಸೈಕಲ್ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ ಮಹೀಂದ್ರಾ
ಮಹೀಂದ್ರಾ ಹೊಸ ಎಲೆಕ್ಟ್ರಿಕ್ ವಾಹನಗಳ ಪಟ್ಟಿಯಲ್ಲಿ ಇಕೆಯುವಿ100, ಇಎಕ್ಸ್‌ಯುವಿ300 ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ವಾಹನವು ಪ್ರಮುಖವಾಗಿದ್ದು, ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಯ ಬಿಡುಗಡೆಗೆ ಮಹೀಂದ್ರಾ ಕಂಪನಿಯು ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಕರೋನಾ ವೈರಸ್ ಪರಿಣಾಮ ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂಡೂಡಿಕೆ ಮಾಡಿದ್ದ ಮಹೀಂದ್ರಾ ಕಂಪನಿಯು ಇದೀಗ ಹೊಸ ವಾಹನಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಮರುಚಾಲನೆ ನೀಡಿದ್ದು, ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಯು ಉತ್ಪಾದನಾ ಮಾದರಿಯೊಂದಿಗೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿರುವ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನಗಳ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಯೋಜನೆಗಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ.

2021ರ ಅವಧಿಯಲ್ಲಿ ಒಟ್ಟು ಮೂರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿರುವ ಮಹೀಂದ್ರಾ ಕಂಪನಿಯು ಮೊದಲಿಗೆ ಇಕೆಯುವಿ100 ತದನಂತರ ಅಟಾಮ್ ಕ್ವಾರ್ಡ್ರಿಸೈಕಲ್ ಬಿಡುಗಡೆ ಮಾಡಲಿದ್ದು, 2021ರ ಅಂತ್ಯದಲ್ಲಿ ಇಎಕ್ಸ್‌ಯುವಿ300 ಬಿಡುಗಡೆ ಮಾಡಲಿದೆ.

ಮಹೀಂದ್ರಾ ಕಂಪನಿಯು ಸದ್ಯ ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಭವಿಷ್ಯದ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿರುವ ಕಂಪನಿಯು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಗ್ರಾಹಕರ ಬೇಡಿಕೆಯೆಂತೆ ವಿಶೇಷ ಫೀಚರ್ಸ್ ಮತ್ತು ಅತ್ಯುತ್ತಮ ಬ್ಯಾಟರಿ ಆಯ್ಕೆ ಹೊಂದಲಿರುವ ಹೊಸ ಎಲೆಕ್ಟ್ರಿಕ್ ಪ್ರಯಾಣಿಕರ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಯ ಮೇಲೂ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಇದರಲ್ಲಿ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಅಟಾಮ್ ಕ್ವಾರ್ಡ್ರಿಸೈಕಲ್ ಎಲೆಕ್ಟ್ರಿಕ್ ವಾಹನವು ಒಂದಾಗಿದ್ದು, ಈ ವಾಹನವು 15kW ಸಾಮರ್ಥ್ಯದ ಲೀಥಿಯಂ ಅಲಾಯ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಈ ಮೂಲಕ ಹೊಸ ಎಲೆಕ್ಟ್ರಿಕ್ ವಾಹನವು ಪ್ರತಿ ಚಾರ್ಜ್‌ಗೆ 110ಕಿ.ಮೀ ನಿಂದ 130ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿದ್ದು, ಹೊಸ ಎಲೆಕ್ಟ್ರಿಕ್ ವಾಹನವನ್ನು ಬೆಂಗಳೂರಿನಲ್ಲಿರುವ ಮಹೀಂದ್ರಾ ರೆವಾ ಎಲೆಕ್ಟ್ರಿಕ್ ವಾಹನ ಘಟಕದಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ.

ಹಾಗೆಯೇ ಹೊಸ ವಾಹನದಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೇ ಒಳಭಾಗದಲ್ಲೂ ಆಕರ್ಷಕ ಆಸನ ಸೌಲಭ್ಯದೊಂದಿಗೆ ದೊಡ್ಡದಾದ ಕ್ಯಾಬಿನ್ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅನಾವರಣ ಹೊರತುಪಡಿಸಿ ಅಟಾಮ್ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಈ ಹೊಸ ಎಲೆಕ್ಟ್ರಿಕ್ ವಾಹನವು ಬಜಾಜ್ ಬಿಡಗಡೆ ಮಾಡಲಿರುವ ಎಲೆಕ್ಟ್ರಿಕ್ ಕ್ಯೂಟ್ ಕ್ವಾರ್ಡ್ರಿಸೈಕಲ್‌ಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.
Source: MotorBeam/Facebook


Click it and Unblock the Notifications