ವೈರಸ್ ಭೀತಿ: ಸಂಪರ್ಕ ರಹಿತ ಗ್ರಾಹಕರ ಸೇವೆಗಳನ್ನು ಶುರು ಮಾಡಿದ ಮಹೀಂದ್ರಾ
ಕರೋನಾ ವೈರಸ್ ಭೀತಿಯಿಂದಾಗಿ ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗಿರುವುದಲ್ಲದೆ ಉದ್ಯಮ ಚಟುವಟಿಕೆಗಳು ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಮಹೀಂದ್ರಾ ಕಂಪನಿಯು ಗ್ರಾಹಕರ ಸೇವೆಗಳನ್ನು ಸುರಕ್ಷಿತವಾಗಿಸಲು ಹೊಸ ಪ್ಲ್ಯಾಟ್‌ಫಾರ್ಮ್ ಒಂದನ್ನು ತೆರೆದಿದೆ.

ಆಟೋ ಕಂಪನಿಗಳಿಗೆ ಹೊಸ ವಾಹನ ಮಾರಾಟ ಮಾಡಿದ ಗ್ರಾಹಕರ ಸೇವೆಗಳನ್ನು ಕಾಲ ಕಾಲಕ್ಕೆ ನೀಡುವುದು ಕೂಡಾ ಪ್ರಮುಖ ವಿಚಾರವಾಗಿದ್ದು, ವೈರಸ್ ಭೀತಿ ನಡುವೆ ಯಾವುದೇ ಭೀತಿಯಿಲ್ಲದೆ ಸೇವೆಗಳನ್ನು ಒದಗಿಸುವುದು ಒಂದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ನಡುವಿನ ನೇರ ಭೇಟಿಯನ್ನು ತಪ್ಪಿಸುವುದಕ್ಕಾಗಿ ಆನ್‌ಪ್ಲ್ಯಾಟ್‌ಫಾರ್ಮ್ ಮೊರೆಹೋಗಲಾಗುತ್ತಿದ್ದು, ಮಹೀಂದ್ರಾ ಕೂಡಾ ಇದೀಗ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಮಾರಾಟ ಮಳಿಗೆಗಳಿಗೆ ಮತ್ತು ತಾಂತ್ರಿಕ ಸೇವೆಗಳಿಗಾಗಿ ಗ್ಯಾರೇಜ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಗ್ರಾಹಕರ ಮನೆ ಬಾಗಿಲಿಗೆಯೇ ಸೇವೆಗಳನ್ನು ಪೂರೈಸುತ್ತಿರುವ ಆಟೋ ಕಂಪನಿಗಳು ವೈರಸ್ ಹರಡುವಿಕೆಯನ್ನು ತಪ್ಪಿಸಲು ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಂಡಿವೆ.

ಮಹೀಂದ್ರಾ ಕೂಡಾ ಸಂಪರ್ಕ ರಹಿತ ಗ್ರಾಹಕರ ಸೇವೆಗಳನ್ನು ನೀಡುವುದಕ್ಕಾಗಿ ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಗ್ರಾಹಕರ ಆದ್ಯತೆ ಮೇರೆಗೆ ಮನೆ ಬಾಗಿಲು ಬಳಿಯಲ್ಲೇ ಎಲ್ಲಾ ಸುರಕ್ಷಾ ಕ್ರಮಗಳೊಂದಿಗೆ ತಾಂತ್ರಿಕ ಸೇವೆಗಳನ್ನು ನೀಡಲಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ತಾಂತ್ರಿಕ ಸೇವೆಗಳ ನಂತರ ಯಾವುದೇ ರೀತಿಯ ವೈರಸ್ ಹರಡದಂತೆ ನಂಜು ನಿರೋಧಕ ರಾಸಾಯನಿಕಗಳನ್ನು ಸಿಂಪರಣೆ ಮಾಡಲಿರುವ ಸಿಬ್ಬಂದಿಯು ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ಕೊನೆಗೆ ಹಣಕಾಸಿನ ವ್ಯವಹಾರಗಳನ್ನು ಕೂಡಾ ನೇರ ವಹಿವಾಟು ಬದಲಾಗಿ ಆನ್‌ಲೈನ್ ಪೇಮೆಂಟ್ ಸೌಲಭ್ಯಗಳನ್ನು ಅಳವಡಿಸಿಕೊಂಡಿವೆ.

ಇದರಿಂದ ಗ್ರಾಹಕರು ಮತ್ತು ಸಿಬ್ಬಂದಿ ನಡುವಿನ ಸಂವಹನ ಪ್ರಕ್ರಿಯೆಯು ಇರದಿರುವುದರಿಂದ ವೈರಸ್ ಹರಡುವಿಕೆಯ ಭೀತಿ ದೂರವಾಗಲಿದ್ದು, ಗ್ರಾಹಕರ ಸೇವೆ ಮಾತ್ರವಲ್ಲದೇ ಹೊಸ ವಾಹನ ಖರೀದಿಯು ಇದೀಗ ಅತಿ ಸುಲಭವಾಗಿದೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಪ್ರಯಾಣಿಕರ ಕಾರು ಮಾರಾಟಕ್ಕಾಗಿ ಮಹೀಂದ್ರಾ ಕಂಪನಿಯು ವಿವಿಧ ತಾಂತ್ರಿಕ ಅಂಶಗಳನ್ನು ಒಳಗೊಂಡ ವೊನ್ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಆಸಕ್ತ ಗ್ರಾಹಕರೊಂದಿಗೆ ಪತ್ರ ವ್ಯವಹಾರಗಳನ್ನು ಶೇ.100ರಷ್ಟು ಆನ್‌ಲೈನ್ ಮೂಲಕವೇ ಬಗೆಹರಿಸಲಿದೆ.

ತದನಂತರ ಅಂತಿಮ ಪತ್ರ ವ್ಯವಹಾರ ಮುದಗಿದ ಬಳಿಕ ಗ್ರಾಹಕರ ಮನೆ ಬಾಗಿಲಿಗೆ ವಾಹನಗಳನ್ನು ತಲುಪಿಸಲಿರುವ ಮಹೀಂದ್ರಾ ಕಂಪನಿಯು ವಿತರಣೆಯ ಸಂದರ್ಭದಲ್ಲೂ ಗರಿಷ್ಠ ಪ್ರಮಾಣದ ಸುರಕ್ಷಾ ಕ್ರಮಗಳೊಂದಿಗೆ ಗ್ರಾಹಕರಿಗೆ ಹಸ್ತಾಂತರಿಸಲಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಜೊತೆಗೆ ಹಣಕಾಸು ಸಹಾಯ ಸೇರಿದಂತೆ ಪ್ರಮುಖ ವ್ಯವಹಾರಗಳನ್ನು ಅತಿ ಸುಲಭವಾಗಿ ನಿರ್ವಹಿಸಲು ನೆರವಾಗುವಂತೆ ಮಹೀಂದ್ರಾ ವೊನ್ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಅಭಿವೃದ್ದಿಗೊಳಿಸಲಾಗಿದ್ದು, ಕಾರು ಖರೀದಿಯನ್ನು ಮತ್ತಷ್ಟು ಸುಲಭವಾಗಿಸಿದೆ.


Click it and Unblock the Notifications








