ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳಿಗಾಗಿ ಹೊಸ ಕಾರ್ಪೊರೇಟ್ ಐಡೆಂಟಿಟಿಗಳಾದ ಹೊಸ ಲೊಗೊ, ಹೊಸ ಟ್ಯಾಗ್‍‍ಲೈನ್ ಅನ್ನು ಬಿಡುಗಡೆಗೊಳಿಸಿದೆ. ಇನ್ನು ಮುಂದೆ ಮಹೀಂದ್ರಾ ಎಲೆಕ್ಟ್ರಿಕ್‍‍ನ ಹೊಸ ಟ್ಯಾಗ್‍‍‍ಲೈನ್ ಸ್ಪಾರ್ಕ್ ದಿ ನ್ಯೂ ಎಂದಾಗಿರಲಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಜಾಗತಿಕ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಅಗ್ರಗಣ್ಯನಾಗುವ ಗುರಿಯನ್ನು ಹೊಂದಿರುವ ಮಹೀಂದ್ರಾ ಕಂಪನಿಯು ಈ ಹೊಸ ಲೊಗೊದಿಂದ ಕಂಪನಿಗೆ ಹೆಚ್ಚು ನೆರವಾಗಲಿದೆ ಎಂಬ ನಂಬಿಕೆಯನ್ನು ಹೊಂದಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಇನ್ನು ಮುಂದೆ ಮಹೀಂದ್ರಾ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಹಾಗೂ ಬಿಡಿಭಾಗಗಳನ್ನು ಎಂಇ ಎಂಬ ಹೆಸರಿನಡಿಯಲ್ಲಿ ಬಿಡುಗಡೆಗೊಳಿಸಲಿದೆ. ಸಾಫ್ಟ್ ವೇರ್‍‍ಗಳನ್ನು ನೇಮೊ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಈ ಹೊಸ ಲೊಗೊದಿಂದ ಮಹೀಂದ್ರಾ ಕಂಪನಿಯ ಡಿಜಿಟಲ್ ವಹಿವಾಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಹಾಗೂ ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳ ಮಾರಾಟದ ಮೇಲೆ ಪರಿಣಾಮ ಉಂಟಾಗಲಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಹೊಸ ಲೊಗೊದಿಂದ ಕಂಪನಿಯು ದೇಶಿಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನದೇ ಆದ ಗುರುತನ್ನು ಹೊಂದುವುದರ ಜೊತೆಗೆ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಲಿದೆ. ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಭಾರತದ ರಸ್ತೆಗಳಲ್ಲಿ 200ಕ್ಕೂ ಹೆಚ್ಚು ಮಿಲಿಯನ್ ಕಿ.ಮೀ ಚಲಿಸಿರುವ ನೆನಪಿಗಾಗಿ ಹೊಸ ಲೊಗೊವನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಈ 200 ಮಿಲಿಯನ್ ಕಿ.ಮೀ ಮಹೀಂದ್ರಾ ಕಂಪನಿಯ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಸಂಚರಿಸಿರುವ ದೂರವಾಗಿದೆ. ಇದರಿಂದಾಗಿ ಮಹೀಂದ್ರಾ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ 22,000 ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ ಬಳಕೆಯನ್ನು ತಪ್ಪಿಸಿವೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಅತ್ಯಾಧುನಿಕ ತಂತ್ರಜ್ಞಾನವನ್ನು ನೀಡುವ ಮೂಲಕ ಮಹೀಂದ್ರಾ ಎಲೆಕ್ಟ್ರಿಕ್, ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಯಾಗುವ ತನ್ನ ಆಲೋಚನೆಯನ್ನು ಅನಾವರಣಗೊಳಿಸಿದೆ. ಹೊಸ ಲೊಗೊದಿಂದ ಕಂಪನಿಯು ಜಗತ್ತಿನಾದ್ಯಂತವಿರುವ ಒಇಎಂಗಳಿಗೆ ಮೊದಲ ಆದ್ಯತೆಯಾಗುವ ಗುರಿಯನ್ನು ಹೊಂದಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾ ಎಲೆಕ್ಟ್ರಿಕ್ ಸಿ‍ಇ‍ಒ ಮಹೇಶ್ ಬಾಬುರವರು ಮಾತನಾಡಿ, ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಹತ್ತು ವರ್ಷದ ಅನುಭವದೊಂದಿಗೆ, ಭಾರತವನ್ನು ಎಲೆಕ್ಟ್ರಿಕ್ ವಾಹನಗಳ ಹಬ್ ಮಾಡಲು ಹಾಗೂ ನಮ್ಮ ತಂತ್ರಜ್ಞಾನಗಳನ್ನು ಜಾಗತಿಕವಾಗಿ ತೆಗೆದುಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಹೇಳಿದರು.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಇದು ವೇಗವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಸತನದೊಂದಿಗೆ ರಚಿಸುವ ನಮ್ಮ ಮಹತ್ವಾಕಾಂಕ್ಷೆಯ ಬಗ್ಗೆ ಹೇಳುತ್ತದೆ. ನಾವು ಮಾರುಕಟ್ಟೆಯಲ್ಲಿ ಬದಲಾವಣೆಯನ್ನು ತರುವಂತಹ ವಾಹನಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದು ಅವರು ಹೇಳಿದರು.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಹೊಸ ಲೊಗೊ, ಮಹೀಂದ್ರಾ ಎಲೆಕ್ಟ್ರಿಕ್‌ನ ಮಹತ್ವವನ್ನು ತಿಳಿಸುತ್ತದೆ. ಇದಕ್ಕೆ ನೀಡಲಾಗಿರುವ ಸ್ಪಾರ್ಕ್ ದಿ ನ್ಯೂ ಟ್ಯಾಗ್‍‍ಲೈನ್ ಸೂಕ್ತವಾಗಿದೆ ಎಂದು ಕಂಪನಿಯು ಹೇಳಿದೆ. ಈ ಟ್ಯಾಗ್‍‍ಲೈನ್ ಮಹೀಂದ್ರಾ ಎಲೆಕ್ಟ್ರಿಕ್‍‍ಗೆ ಮಾತ್ರವಲ್ಲ, ಬದಲಿಗೆ ಪ್ರತಿಯೊಬ್ಬರೂ ಈ ಎಲೆಕ್ಟ್ರಿಕ್ ಕ್ರಾಂತಿಯಲ್ಲಿ ಸೇರಲು ನೀಡಿದ ಕರೆಯಾಗಿದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಮಹೀಂದ್ರಾದ ಹೊಸ ಲೊಗೊ ಎಲೆಕ್ಟ್ರಿಕ್ ಪದವನ್ನು ಹೊಂದಿದೆ. ಈ ಪದವು ಮಹೀಂದ್ರಾ ಪದವಿರುವಷ್ಟೇ ಗಾತ್ರದ ಫಾಂಟ್ ಹೊಂದಿದೆ. ಇದರಿಂದಾಗಿ ಎರಡೂ ಪದಗಳು ಒಂದೇ ಗಾತ್ರದಲ್ಲಿವೆ. ಫಾಂಟ್‍‍ಗಳಲ್ಲಿ ಬಳಸಿರುವ ಚಿಕ್ಕ ಅಕ್ಷರಗಳು ಕಂಪನಿಯು ಎಲ್ಲರನ್ನೂ ತಲುಪುತ್ತದೆ ಎಂಬುದನ್ನು ತೋರಿಸುತ್ತದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಇದರಲ್ಲಿರುವ ಕೆಂಪು ಬಣ್ಣವು ಮಹೀಂದ್ರಾ ಎಲೆಕ್ಟ್ರಿಕ್ ತನ್ನ ಮೂಲ ಕಂಪನಿಯೊಂದಿಗೆ ಹೊಂದಿರುವ ಸಂಬಂಧವನ್ನು ಪ್ರತಿನಿಧಿಸುತ್ತದೆ. ನೀಲಿ ಬಣ್ಣವು ಎಲೆಕ್ಟ್ರಿಕ್ ಸೆಗ್‍‍ಮೆಂಟ್‍‍ನೊಂದಿಗೆ ಕಂಪನಿಯ ಸಂಬಂಧವನ್ನು ಸೂಚಿಸುತ್ತದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಸ್ಪಾರ್ಕ್ ದಿ ನ್ಯೂ ಟ್ಯಾಗ್‍‍ಲೈನ್ ಇಂಟರ್ನಲ್ ಹಾಗೂ ಎಕ್ಸ್ ಟರ್ನಲ್ ಸ್ಟೇಕ್ ಹೋಲ್ಡರ್‍‍ಗಳು ಕಂಪನಿಯೊಂದಿಗಿರಲಿ ಎಂದು ಮಹೀಂದ್ರಾ ಎಲೆಕ್ಟ್ರಿಕ್ ಹೇಳುತ್ತದೆ. ಈ ಟ್ಯಾಗ್ ಲೈನ್ ಆಕ್ಟಿವ್ ವಾಯ್ಸ್ ಆಗಿದ್ದು, ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಹೊಸ ಆಲೋಚನೆ, ಹೊಸ ಯೋಚನೆ ಹಾಗೂ ಹೊಸ ಪರಿಹಾರಗಳಿಗೆ ಅನುಮತಿ ನೀಡುತ್ತದೆ.

ಹೊಸ ಲೊಗೊ ಹಾಗೂ ಟ್ಯಾಗ್‍‍ಲೈನ್ ಬಿಡುಗಡೆಗೊಳಿಸಿದ ಮಹೀಂದ್ರಾ ಎಲೆಕ್ಟ್ರಿಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕಂಪನಿಯ ಯೋಜನೆ ಅತ್ಯುತ್ತಮವಾಗಿದೆ. ಹೊಸ ಲೊಗೊವನ್ನು ರಚಿಸುವ ಮೂಲಕ ಹೆಚ್ಚು ಜನರನ್ನು ತಲುಪುವ ಉದ್ದೇಶವನ್ನು ಹೊಂದಿದೆ. ಮಹೀಂದ್ರಾ ತನ್ನ ಹೊಸ ಲೊಗೊದೊಂದಿಗೆ ಇದನ್ನು ಸಾಧಿಸಿದಂತೆ ಕಾಣುತ್ತದೆ. ಮಹೀಂದ್ರಾ ಎಲೆಕ್ಟ್ರಿಕ್‍‍ಗೆ ಶುಭ ಹಾರೈಕೆಗಳು.

Article Published On: Friday, January 31, 2020, 14:45 [IST]
English summary
Mahindra Electric Unveils New Brand Identity, Logo, And Tagline. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+