ಆಟೋ ಎಕ್ಸ್‌ಪೋ 2020: ಪ್ರದರ್ಶಿಸಲಿರುವ ಎಲೆಕ್ಟ್ರಿಕ್ ಫನಸ್ಟರ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಎಲ್ಲಾ ಇವಿ ಕಾನ್ಸೆಪ್ಟ್ ಅನ್ನು ಬಹಿರಂಗಪಡಿಸಲಿದೆ ಎಂದು ಟೀಸರ್ ವೀಡಿಯೋ ಮೂಲಕ ಖಚಿತಪಡಿಸಿದೆ. ಮಹೀಂದ್ರಾ ಫನ್‍ಸ್ಟರ್ ಇವಿ ಎಂದು ಕರೆಯಲ್ಪಡುವ ಈ ಇವಿಯು ಕಂಪನಿಯು ಬಿಡುಗಡೆಯಾಗಲಿರುವ ಹೊಸ ನಾಲ್ಕು ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ.

ಮಹೀಂದ್ರಾ ಕಂಪನಿಯು ಫನ್‍ಸ್ಟರ್ ಇವಿಯ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಲಾಗಿದೆ. ಮುಂದಿನ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ಮುಂಬರುವ ಆಲ್-ಎಲೆಕ್ಟ್ರಿಕ್ ಆವೃತ್ತಿಯ ಕಾನ್ಸೆಪ್ಟ್ ಸ್ವರೂಪ ಫನ್‍ಸ್ಟರ್ ಒಂದಾಗಿದೆ. ಮಹೀಂದ್ರಾ ಫನ್‍ಸ್ಟರ್ ಕಾನ್ಸೆಪ್ಟ್ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿರುವ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯು ಅಲ್-ವ್ಹೀಲ್ ಡ್ರೈವ್ ಆಗಿದೆ. ಫನ್‍ಸ್ಟರ್ ಇವಿಯಲ್ಲಿ 230 ಕಿ.ವ್ಯಾಟ್ ಅಥವಾ 313 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಈ ಎಸ್‍ಯುವಿ 5 ಸೆಕೆಂಡುಗಳಲ್ಲಿ 100 ಕಿ.ಮೀ ಸ್ಪೀಡ್ ಆಗಿರಲಿದೆ. ಟಾಟಾ ನೆಕ್ಸನ್ ಇವಿ ಅನ್ನು ಕೇವಲ 14 ಲಕ್ಷ ರೂ.ಗಳ ಎಕ್ಸ್‌ಶೋರೂಂನ ಆರಂಭಿಕ ಬೆಲೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ಮಹೀಂದ್ರಾ ಅವರ ಆಟೋ ಎಕ್ಸ್ ಪೋದಲ್ಲಿ 2020ರ ಆಟೋ ಎಕ್ಸ್ ಪೋದಲ್ಲಿ 4 ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರುಗಳನ್ನು ಪ್ರದರ್ಶಿಸಲಿದೆ. ಮಹೀಂದ್ರಾ ಕಂಪನಿಯು ಈ ಆಟೋ ಎಕ್ಸ್ ಪೋದಲ್ಲಿ ಮಹೀಂದ್ರಾ ಕೆಯುವಿ100, ಎಕ್ಸ್ ಯುವಿ 300, ಎಕ್ಸ್ ಯುವಿ 500 ಮಾದರಿಗಳ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರುಗಳನ್ನು ಹಾಗೂ ಕ್ವಾಡ್ರಿ ಸೈಕಲ್ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಲಿದೆ.

ಟಾಟಾ ನೆಕ್ಸಾನ್ ಅನ್ನು ಕೇವಲ ರೂ.14 ಲಕ್ಷದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾನ್ಸೆಪ್ಟ್ ಕಾರ್ ಅನ್ನು ಹೊಸ ಪ್ಲಾಟ್‍ಫಾರಂನಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದರಿಂದಾಗಿ ಭವಿಷ್ಯದಲ್ಲಿ ಈ ರೀತಿಯ ಕಾರುಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ. ಈ ಕಾನ್ಸೆಪ್ಟ್ ಕಾರು ತಯಾರಾಗಿ ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿರುವ ಬಲಿಷ್ಟ ಎಲೆಕ್ಟ್ರಿಕ್ ಕಾರ್ ಆಗಿರಲಿದೆ.

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳಿಗಾಗಿ ಹೊಸ ಕಾರ್ಪೊರೇಟ್ ಐಡೆಂಟಿಟಿಗಳಾದ ಹೊಸ ಲೊಗೊ, ಹೊಸ ಟ್ಯಾಗ್‍ಲೈನ್ ಅನ್ನು ಬಿಡುಗಡೆಗೊಳಿಸಿದೆ.
ಇನ್ನು ಮುಂದೆ ಮಹೀಂದ್ರಾ ಎಲೆಕ್ಟ್ರಿಕ್‍ನ ಹೊಸ ಟ್ಯಾಗ್‍ಲೈನ್ ಸ್ಪಾರ್ಕ್ ದಿ ಸ್ನ್ಯೂ ಎಂದಾಗಿರಲಿದೆ. ಈ ಎಲೆಕ್ಟ್ರಿಕ್ ಕಾರು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳಲಿರುವ ಈ ಕಾರು ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ. ಈ ಟೀಸರ್ ವೀಡಿಯೋದಲ್ಲಿ ಫನ್‍ಸ್ಟರ್ ಎಲೆಕ್ಟ್ರಿಕ್ ಎಸ್‍ಯುವಿಯು ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದೆ.


Click it and Unblock the Notifications








