ಕೋವಿಡ್ 19: ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಈಗಾಗಲೇ ಅಗ್ಗದ ಬೆಲೆಯ ವೆಂಟಿಲೇಟರ್‌ಗಳನ್ನು ಉತ್ಪಾದನೆ ಮಾಡುವ ಮೂಲಕ ವೈರಸ್ ವಿರುದ್ಧ ಹೋರಾಟಕ್ಕೆ ಬಹುದೊಡ್ಡ ಶಕ್ತಿ ತುಂಬಿದ್ದು, ಇದೀಗ ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಾಣರಕ್ಷಣೆಗಾಗಿ ಹೊಸ ಮಾದರಿಯ ಉಪಕರಣವೊಂದನ್ನು ಸಿದ್ದಪಡಿಸಿ ವಿತರಣೆ ಮಾಡುತ್ತಿದೆ.

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮದೆ ಆದ ರೀತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ನೆರವು ನೀಡುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಸಹ ದೇಣಿಗೆ ಮಾತ್ರವಲ್ಲದೆ ವೈರಸ್ ಹರಡುವಿಕೆ ತಡೆಗಟ್ಟಲು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವೈರಸ್ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ತುಂಬುತ್ತಿದೆ.

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನದಿಂದ ಹಿಡಿದು ವೆಂಟಿಲೇಟರ್ ತನಕವು ಎಲ್ಲಾ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವಿತರಣೆ ಮಾಡಿದ್ದು, ಇಂದು ಬರೋಬ್ಬರಿ 80 ಸಾವಿರ ಫೇಸ್ ಶೀಲ್ಡ್‌ಗಳನ್ನು ಸಹ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ನೀಡಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಪಿಡಿತರ ಪ್ರಾಣ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯರ ಜೀವ ಹಾನಿ ತಡೆಯುವುದಕ್ಕೆ ಹೊಸ ತಂತ್ರಜ್ಞಾನ ಪ್ರೇರಿತ ಉಪಕರಣವೊಂದನ್ನು ನಿರ್ಮಾಣ ಮಾಡಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಉತ್ತರ ಅಮೆರಿಕದಲ್ಲಿರುವ ಮಹೀಂದ್ರಾ ಡೆಟ್ರಾಯಿಟ್ ಡಿಸೈನ್ ತಂಡವು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಯಾವುದೇ ರೀತಿ ಸೋಂಕು ತಗುಲದಂತೆ ತಡೆಯಲು ಏರೋಸೊಲ್ ಬಾಕ್ಸ್ ಅನ್ನು ಸಿದ್ದಪಡಿಸಿ ಉತ್ಪಾದನೆಗೆ ಚಾಲನೆ ನೀಡಿದ್ದು, ಭಾರತದಲ್ಲೂ ಇದೀಗ ಹೊಸ ಮಾದರಿಯ ಉಪಕರಣ ನಿರ್ಮಾಣಕ್ಕೆ ಚಾಲನೆ ನೀಡಿದೆ.

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ವೈರಸ್ ವೈದ್ಯರಿಗೆ ಹರಡದಂತೆ ತಡೆಯಲು ಇದು ಸಾಕಷ್ಟು ಸಹಕಾರಿಯಾಗಲಿದ್ದು, ಮೊದಲ ಹಂತವಾಗಿ ತೆಲಂಗಾಣ ಸರ್ಕಾರಕ್ಕೆ 75 ಏರೋಸೊಲ್ ಬಾಕ್ಸ್‌ಗಳನ್ನು ವಿತರಣೆ ಮಾಡಲಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಜೊತೆಗೆ 15 ಸಾವಿರ ಫೇಸ್‌ಶೀಲ್ಡ್‌ಗಳನ್ನು ವಿತರಣೆ ಮಾಡಿರುವ ಮಹೀಂದ್ರಾ ಶೀಘ್ರದಲ್ಲೇ ವಿವಿಧ ರಾಜ್ಯ ಸರ್ಕಾರಗಳಿಗೂ ಏರೋಸೊಲ್ ಬಾಕ್ಸ್‌ಗಳನ್ನು ಪೂರೈಕೆ ಮಾಡಲಿದ್ದು, ವೈದ್ಯರಿಗೆ ಇದರಿಂದ ಶೇ.100 ರಷ್ಟು ಸುರಕ್ಷತೆಯ ದೊರೆಯಲಿದೆ.

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಕೆಲವು ಸಂದರ್ಭಗಳಲ್ಲಿ ಸೋಂಕು ತಗಲುವ ಸಾಧ್ಯತೆಗಳಿದ್ದು, ಇದರಿಂದ ಕೆಲ ಕಡೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯು ಸಹ ಸೋಂಕಿಗೆ ತುತ್ತಾಗಿರುವ ಹಲವಾರು ಪ್ರಕರಣಗಳನ್ನು ದಾಖಲಾಗಿವೆ.

MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ವೈರಸ್ ವಿರುದ್ದದ ಹೋರಾಟಕ್ಕಾಗಿ ಏರೋಸೊಲ್ ಬಾಕ್ಸ್ ವಿತರಿಸಿದ ಮಹೀಂದ್ರಾ

ಇದಕ್ಕಾಗಿ ಏರೋಸೊಲ್ ಬಾಕ್ಸ್ ನಿರ್ಮಾಣದ ಮೇಲೆ ಹೆಚ್ಚು ಆಸಕ್ತಿ ವಹಿಸಿರುವ ಮಹೀಂದ್ರಾ ಕಂಪನಿಯು ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಯೋಜನೆಯಲ್ಲಿದ್ದು, ಸದ್ಯ ತೆಲಂಗಾಣ ಸರ್ಕಾರಕ್ಕೆ ಮೊದಲ ಹಂತವಾಗಿ ವಿತರಣೆ ಮಾಡಿದೆ.

Most Read Articles

Kannada
English summary
Mahindra group supplied aerosol boxes and face shields to Telangana government. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more