ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?
ನಮ್ಮ ದೇಶದಲ್ಲಿ ವಾಹನಗಳನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಿಫೈ ಮಾಡುವವರಿಗೆ ಕೊರತೆಯಿಲ್ಲ. ಈ ರೀತಿ ಮಾಡಿಫೈ ಮಾಡಿದ ವಾಹನಗಳಿಂದ ತಮ್ಮ ಕೆಲಸವನ್ನು ಮಾಡುತ್ತಾರೆ. ಇದೇ ರೀತಿ ಮಾಡಿಫೈಗೊಂಡ ವಾಹನವೊಂದರ ವೀಡಿಯೊ ವೈರಲ್ ಆಗಿದೆ.

ಈ ವೀಡಿಯೊದಲ್ಲಿರುವ ಟ್ರಾಕ್ಟರ್ ಕೇವಲ ಎರಡು ಚಕ್ರಗಳಲ್ಲಿ ಚಲಿಸುತ್ತಿದೆ. ಅಚ್ಚರಿಯಾದರೂ ನಿಜ. ಈ ಟ್ರಾಕ್ಟರ್ ಕೇವಲ ಎರಡು ಚಕ್ರಗಳೊಂದಿಗೆ ಚಲಿಸುತ್ತಿದೆ. ಈ ಟ್ರಾಕ್ಟರ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ತಲಾ ಒಂದು ಟಯರ್‌ಗಳು ಕಾಣೆಯಾಗಿವೆ. ಈ ರೀತಿ ಯಾವುದೇ ವಾಹನವನ್ನು ನಡೆಸುವುದು ಅಪಾಯಕಾರಿ. ಆದರೆ ಅದ್ಭುತವಾಗಿರುವ ಈ ವೀಡಿಯೊವನ್ನು ಕಂಡು ಆನಂದ್ ಮಹೀಂದ್ರಾರವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಟ್ರಾಕ್ಟರ್ ಮಹೀಂದ್ರಾ ಕಂಪನಿಗೆ ಸೇರಿದೆ. ಈ ವೀಡಿಯೊಗೆ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾರವರು ಈ ವೀಡಿಯೊ ಬಹಳ ಸ್ಪೂರ್ತಿದಾಯಕ ಹಾಗೂ ಬ್ಯಾಲೆನ್ಸ್ ಆಗಿದೆ ಎಂದು ಬಣ್ಣಿಸಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ವೀಡಿಯೊವನ್ನು ನೋಡಿದಾಗ ಟ್ರಾಕ್ಟರ್ ಚಾಲಕ ರಸ್ತೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಕಂಡು ಬಂತು. ಆದರೆ ಈ ಚಿತ್ರವು ನನಗೆ ಸ್ಪೂರ್ತಿದಾಯಕವೆನಿಸಿತು. ಎರಡು ವ್ಹೀಲ್‌ಗಳಿಲ್ಲದಿದ್ದರೂ ಬ್ಯಾಲೆನ್ಸ್ ಮಾಡುತ್ತಾ ಆರ್ಥಿಕತೆಯನ್ನು ಮುಂದೆ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಆನಂದ್ ಮಹೀಂದ್ರಾರವರು ಈ ವೀಡಿಯೊದಲ್ಲಿರುವ ಸಕಾರಾತ್ಮಕ ಅಂಶವನ್ನು ಮಾತ್ರ ಗಮನಿಸಿ, ಅದರಿಂದ ಸ್ಫೂರ್ತಿ ಪಡೆಯುವ ಮಾತನಾಡಿದ್ದಾರೆ. ಕರೋನಾ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರು ಈ ಮಾತನ್ನು ಹೇಳಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆನಂದ್ ಮಹೀಂದ್ರಾರವರ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಕರೋನಾ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಿದೆ. ಮಹೀಂದ್ರಾ ಕಂಪನಿಯು ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿಗಳಿಗಾಗಿ 80,000 ಫೇಸ್ ಶೀಲ್ಡ್ ಗಳನ್ನು ಹಾಗೂ 1 ಲಕ್ಷಕ್ಕೂ ಹೆಚ್ಚು ಮಾಸ್ಕ್‌ಗಳನ್ನು ತಯಾರಿಸಿದೆ.

ಈ ಮಹಾಮಾರಿ ವೈರಸ್ ಅನ್ನು ಎದುರಿಸಲು ಮಹೀಂದ್ರಾ ಕಂಪನಿಯು ಹೊಸ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಮಹೀಂದ್ರಾ ಕಂಪನಿಯು ಸ್ಯಾನಿಟೈಜರ್ ಹಾಗೂ ವೆಂಟಿಲೇಟರ್ ಉತ್ಪಾದನೆಯನ್ನು ಸಹ ಪ್ರಾರಂಭಿಸಿದೆ. ಇದರ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವಾರಿಯರ್‌ಗಳಿಗಾಗಿ ಮಹೀಂದ್ರಾ ಕಂಪನಿಯು ಉಚಿತ ಕ್ಯಾಬ್ ಸೇವೆಯನ್ನು ಸಹ ಆರಂಭಿಸಿದೆ. ಕಂಪನಿಯು ತನ್ನ ಕ್ಯಾಬ್ ಸೇವೆಯನ್ನು ಬೆಂಗಳೂರು ನಗರದಲ್ಲಿ ಆರಂಭಿಸಲಿದೆ. ಮಹೀಂದ್ರಾ ಕಂಪನಿಯು ಈ ಸೇವೆಯನ್ನು ಈಗಾಗಲೇ ಮುಂಬೈ, ಚೆನ್ನೈ, ಕೊಚ್ಚಿನ್, ಹೈದರಾಬಾದ್, ದೆಹಲಿ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಆರಂಭಿಸಿದೆ.

ಆನಂದ್ ಮಹೀಂದ್ರಾರವರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಈ ರೀತಿಯ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಟ್ರ್ಯಾಕ್ಟರ್ ವಿಷಯವನ್ನು ಸಹ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.


Click it and Unblock the Notifications








