ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ನೀರಿಕ್ಷಿತ ಮಟ್ಟದ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ. ಮಹೀಂದ್ರಾ ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಆಕರ್ಷಕ ಇಎಂಐ ಮರುಪಾವತಿ ಯೋಜನೆಗಳನ್ನು ಪರಿಚಯಿಸಿದೆ.

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಆದಾಯ ಕುಂಠಿತಗೊಂಡಿರುವುದರಿಂದ ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದ್ದು, ಇದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಹೀಗಾಗಿ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದ್ದು, ಆಕರ್ಷಕ ಇಎಂಐ, ಕಡಿಮೆ ದರದಲ್ಲಿ ಗರಿಷ್ಠ ಸಾಲ ಸೌಲಭ್ಯ ಮತ್ತು ಡಿಸ್ಕೌಂಟ್ ಆಫರ್‌ಗಳನ್ನು ನೀಡಲಾಗುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಇದೇ ನಿಟ್ಟಿಯಲ್ಲಿ ಗ್ರಾಹಕರನ್ನು ಸೆಳೆಯಲು ಕೆಲವು ಪ್ರಮುಖ ಹಣಕಾಸು ಸೌಲಭ್ಯಗಳನ್ನು ಪರಿಚಯಿಸಿದ್ದು, ಪ್ರಮುಖ ಕಾರು ಮಾದರಿಗಳ ಖರೀದಿ ಮೇಲೆ ನಿಗದಿ ಅವಧಿಯ ತನಕ ಅತಿ ಕಡಿಮೆ ಇಎಂಐ ಮರುಪಾವತಿಗೆ ಅವಕಾಶ ನೀಡಿದೆ.

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ವ್ಯಯಕ್ತಿಕ ಬಳಕೆಯ ಎಸ್‌ಯುವಿ ಕಾರುಗಳ ಖರೀದಿ ಮಾಡುವ ಗ್ರಾಹಕರಿಗೆ ಪ್ರತಿ ಲಕ್ಷಕ್ಕೆ ರೂ.899 ಇಎಂಐ ಮರುಪಾವತಿ ಮಾಡಬಹುದಾದ ಸಾಲ ಸೌಲಭ್ಯ ನೀಡುತ್ತಿದ್ದು, ಕಾರು ಖರೀದಿ ಮಾಡಿ 6 ತಿಂಗಳ ತನಕ ಇಎಂಐ ಮರುಪಾವತಿಗೆ ಶೇ.50 ರಷ್ಟು ವಿನಾಯ್ತಿ ದೊರೆಯಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

6 ತಿಂಗಳ ನಂತರ ಮತ್ತೆ ಸಾಮಾನ್ಯ ದರಗಳಲ್ಲೇ ಇಎಂಐ ಮರುಪಾವತಿ ಮಾಡಬೇಕಿದ್ದು, ವಿನಾಯ್ತಿ ನೀಡಲಾದ ಅವಧಿಯ ಇಎಂಐ ದರಗಳಿಗೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸಿರುವುದಿಲ್ಲ ಎನ್ನಲಾಗಿದೆ.

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಇದರ ಜೊತೆಗೆ ವಾಣಿಜ್ಯ ಬಳಕೆಯ ವಾಹನಗಳ ಬೊಲೆರೊ ಪಿಕ್ಅಪ್, ಬೊಲೆರೊ ಮ್ಯಾಕ್ಸಿ ಟ್ರಕ್ ಖರೀದಿ ಮೇಲೂ ಆಕರ್ಷಕ ಇಎಂಐ ಮರುಪಾವತಿ ಅವಕಾಶ ನೀಡಲಾಗಿದ್ದು, ಖರೀದಿ ಮಾಡಿದ ಮೊದಲ ಆರು ತಿಂಗಳು ಸಾಮಾನ್ಯ ಇಎಂಐ ದರಕ್ಕಿಂತಲೂ ಶೇ.75ರಷ್ಟು ಮರುಪಾವತಿಗೆ ಅವಕಾಶ ನೀಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬರಲಿರುವ ಹೊಸ ವಿಮಾ ನೀತಿ..

ಹೊಸ ಕಾರುಗಳ ಖರೀದಿಗಾಗಿ ಆಕರ್ಷಕ ಇಎಂಐ ಮರುಪಾವತಿ ಯೋಜನೆ ಆರಂಭಿಸಿದ ಮಹೀಂದ್ರಾ

ಹೊಸ ಇಎಂಐ ಯೋಜನೆಗಳಿಂದ ಯಾವುದೇ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿಲ್ಲವಾದರೂ ಸದ್ಯದ ಪರಿಸ್ಥಿತಿಯಲ್ಲಿ ವಾಹನ ಖರೀದಿ ಸಾಧ್ಯವಿಲ್ಲ ಮುಂಬರುವ ದಿನಗಳಲ್ಲಿ ನೋಡೋಣ ಎನ್ನುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಮಹೀಂದ್ರಾ ಸೇರಿದಂತೆ ಹಲವು ಕಂಪನಿಗಳು ಇದೇ ಮಾದರಿಯ ಹಲವು ಸಾಲ ಸೌಲಭ್ಯಗಳನ್ನು ಆಫರ್ ಮಾಡುತ್ತಿವೆ.

Article Published On: Thursday, July 30, 2020, 13:57 [IST]
English summary
Mahindra introduced new affordable finance schemes. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+