ಬಿಎಸ್ 6 ಎಂಜಿನ್‌ನಲ್ಲಿ ಸುಪ್ರೊ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಮಹೀಂದ್ರಾ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಬಿಎಸ್ 6 ಎಂಜಿನ್‌ನಲ್ಲಿ ಸುಪ್ರೊ ಆಂಬ್ಯುಲೆನ್ಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ವಾಹನವನ್ನು ಮಹೀಂದ್ರಾ ಕಂಪನಿಯ ಸುಪ್ರೊ ಬೈನ್ ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲಾಗಿದೆ.

ಮಹೀಂದ್ರಾ ಸುಪ್ರೋ ಬಿಎಸ್ 6 ಆಂಬ್ಯುಲೆನ್ಸ್‌ನ ಆರಂಭಿಕ ಬೆಲೆ ರೂ.6.94 ಲಕ್ಷಗಳಾಗಿದೆ. ಮಹೀಂದ್ರಾ ಸುಪ್ರೊ ಬಿಎಸ್ 6 ಆಂಬ್ಯುಲೆನ್ಸ್ ಅನ್ನು ಎಲ್ಎಕ್ಸ್ ಹಾಗೂ ಝಡ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗೆ ಈ ಹೊಸ ಆಂಬುಲೆನ್ಸ್‌ನ ಮೊದಲ ಬ್ಯಾಚ್ ಅನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಕೋವಿಡ್ -19ರ ವಿರುದ್ಧ ಹೋರಾಡಲು 12 ಯುನಿಟ್‌ಗಳನ್ನು ಮಹಾರಾಷ್ಟ್ರಕ್ಕೆ ನೀಡಲಾಗಿದೆ.

ಈ ಆಂಬ್ಯುಲೆನ್ಸ್ ಕಡಿಮೆ ಬೆಲೆಯನ್ನು ಹೊಂದಿದೆ. ಈ ಆಂಬ್ಯುಲೆನ್ಸ್‌ನಲ್ಲಿ ಅಗತ್ಯವಿರುವ ಎಲ್ಲ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಮಹೀಂದ್ರಾ ಹೇಳಿದೆ. ಈ ಆಂಬ್ಯುಲೆನ್ಸ್ ಅನ್ನು ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್‌ಡೇಟ್ ಮಾಡಲಾಗಿದೆ. ಕರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಪನಿಯು ಇದನ್ನು ಜನರಿಗೆ ಸುರಕ್ಷಿತವಾಗಿ ತಲುಪಿಸುತ್ತಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮಹೀಂದ್ರಾ ಸುಪ್ರೊ ಬಿಎಸ್ 6 ಆಂಬ್ಯುಲೆನ್ಸ್ ಅನ್ನು ಎಲ್ಲಾ ರೀತಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಫೋಲ್ಡ್ ಮಾಡಬಹುದಾದ ಸ್ಟ್ರೆಚರ್, ಮೆಡಿಕಲ್ ಕಿಟ್ ಬಾಕ್ಸ್, ಆಕ್ಸಿಜನ್ ಸಿಲಿಂಡರ್ ಸ್ಟೋರೆಜ್ ಸ್ಪೇಸ್, ಅಗ್ನಿಶಾಮಕ ಉಪಕರಣಗಳು, ಅನೌನ್ಸ್‌ಮೆಂಟ್ ಸಿಸ್ಟಂ ಹಾಗೂ ಅಗ್ನಿ ನಿರೋಧಕ ಉಪಕರಣಗಳು ಸೇರಿವೆ.

ಮಹೀಂದ್ರಾ ಸುಪ್ರೊ ಆಂಬ್ಯುಲೆನ್ಸ್‌ನಲ್ಲಿ ಎರಡು ಸಿಲಿಂಡರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 100 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ ಐದು-ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಂಪನಿಯು ಈ ಕಾಂಪ್ಯಾಕ್ಟ್ ಗಾತ್ರವನ್ನು ಭಾರತೀಯ ರಸ್ತೆಗಳಿಗೆ ಸೂಕ್ತವೆಂದು ಹೇಳಿದೆ.ಟೈಪ್ ಬಿ ಆಂಬ್ಯುಲೆನ್ಸ್‌ನಲ್ಲಿ ರೋಗಿ ಹಾಗೂ ಚಾಲಕರನ್ನು ಹೊರತುಪಡಿಸಿ ಐದು ಮಂದಿ ಕುಳಿತುಕೊಳ್ಳಬಹುದು. ಈ ವಾಹನವನ್ನು ಈ ಸೆಗ್‌ಮೆಂಟಿನಲ್ಲಿರುವ ಅಗ್ಗದ ಬೆಲೆಯ ಬಿಎಸ್ 6 ಡೀಸೆಲ್ ಆಂಬ್ಯುಲೆನ್ಸ್ ಎಂದು ಹೇಳಲಾಗಿದೆ.

ಮಹೀಂದ್ರಾ ಕಂಪನಿಯು ಸುಪ್ರೋ ಆಂಬ್ಯುಲೆನ್ಸ್‌ನಲ್ಲಿ ಎರಡು ವರ್ಷ ಅಥವಾ 60,000 ಕಿ.ಮೀಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ನೀಡುತ್ತಿದೆ. ಈ ಆಂಬ್ಯುಲೆನ್ಸ್ ಅನ್ನು ದೇಶಾದ್ಯಂತವಿರುವ ಮಹೀಂದ್ರಾ ಶೋರೂಂಗಳಲ್ಲಿ ಖರೀದಿಸಬಹುದು. ಮಹೀಂದ್ರಾ ಕಂಪನಿಯು ಈ ಸುಪ್ರೋ ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಒಂಬತ್ತು ವಿಭಿನ್ನ ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ.


Click it and Unblock the Notifications